Elk Accident: ಕಾರು ಬಡಿದು ಗಾಯಗೊಂಡ ಕಡವೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಸಿಬ್ಬಂದಿ

ಹೊನ್ನಾವರ: ಚಾಲಕನ ನಿರ್ಲಕ್ಷ್ಯತನದಿಂದ ಕಾರೊಂದು ಕಡವೆಗೆ ಡಿಕ್ಕಿಯಾಗಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ಗ್ರಾಮದ ಯಲಗೊಪ್ಪಾ ಬಳಿ ನಡೆದಿದೆ. ಡಿಕ್ಕಿ ರಭಸಕ್ಕೆ ಕಡವೆಯ ಹಿಂಬದಿ ಕಾಲಿಗೆ ಗಾಯಗಳಾಗಿವೆ. ಯಲಗೊಪ್ಪಾದ ಧನ್ವಂತರಿ…

ಹೊನ್ನಾವರ: ಚಾಲಕನ ನಿರ್ಲಕ್ಷ್ಯತನದಿಂದ ಕಾರೊಂದು ಕಡವೆಗೆ ಡಿಕ್ಕಿಯಾಗಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ಗ್ರಾಮದ ಯಲಗೊಪ್ಪಾ ಬಳಿ ನಡೆದಿದೆ. ಡಿಕ್ಕಿ ರಭಸಕ್ಕೆ ಕಡವೆಯ ಹಿಂಬದಿ ಕಾಲಿಗೆ ಗಾಯಗಳಾಗಿವೆ.

ಯಲಗೊಪ್ಪಾದ ಧನ್ವಂತರಿ ಬಳಿ ಹೆದ್ದಾರಿಯಲ್ಲಿ ಕಡವೆಯೊಂದು ನಿಂತಿದ್ದು, ಇದನ್ನು ಗಮನಿಸದೇ ಕಾರು ಚಾಲಕ ವಾಹನ ಚಲಾಯಿಸಿದ ಪರಿಣಾಮ ಕಡವೆಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಕಡವೆ ನರಳಾಡುತ್ತಾ ಧನ್ವಂತರಿ ದೇವಸ್ಥಾನದ ಸಮೀಪ ಕೆರೆಯಲ್ಲಿ ಓಡಾಡಿಕೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಡಿಎಫ್‌ಓ ಯೋಗೇಶ, ಆರ್‌ಎಫ್ಓ ಸವಿತಾ ದೇವಾಡಿಗ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಕಡವೆಯನ್ನು ಗಮನಿಸಿ ಕೆರೆಯ ಮಣ್ಣು ತೆರವುಗೊಳಿಸಿ ಕಡವೆ ರಕ್ಷಣೆ ಮಾಡಿದ್ದಾರೆ. ಕಡವೆ ಗಾಯಗೊಂಡಿದ್ದ ಹಿನ್ನಲೆ ಅದು ಕಾಡಿಗೆ ತೆರಳುವವರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿಯೇ ಹಾಜರಿದ್ದು ಯಾರೂ ಬೇಟೆಯಾಡದಂತೆ ರಕ್ಷಣೆ ನೀಡಿದ್ದಾರೆ.

Vijayaprabha Mobile App free

ಘಟನೆ ಸಂಬಂಧ ಕಡವೆಗೆ ಅಪಘಾತಪಡಿಸಿದ ತಾಲ್ಲೂಕಿನ ಜಲವಳ್ಳಿ ನಿವಾಸಿ ರೋಹಿದಾಸ್ ಶಿವಕುಮಾರ ನಾಯ್ಕ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಹೆದ್ದಾರಿಗಳಲ್ಲಿ ವನ್ಯಜೀವಿಗಳಿಗೆ ಅಪಘಾತಪಡಿಸಿ ಪರಾರಿಯಾಗುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.