Shiggaon constituency : ಉಪ ಚುನಾವಣೆ ರೋಚಕ ರಾಜಕೀಯ ಇತಿಹಾಸ ಹೊಂದಿರುವ ಶಿಗ್ಗಾವಿ ಕ್ಷೇತ್ರದ ಪರಿಚಯ ಹಾಗು ಸಿಎಂಗಳ ಗೆಲುವಿನ ಇತಿಹಾಸ ನೋಡೋಣ
Shiggaon constituency : ಶಿಗ್ಗಾವಿಯ ಪರಿಚಯ
ಶಿಗ್ಗಾವಿ ಅಥವಾ ಶಿಗ್ಗಾಂವಿ ಎನ್ನುವುದು ಹಾವೇರಿ ಜಿಲ್ಲೆಯ ಒ೦ದು ವಿಧಾನಸಭಾ ಕ್ಷೇತ್ರವಾಗಿದ್ದು,1997-98ರಲ್ಲಿ ಧಾರವಾಡ ಜಿಲ್ಲೆಯನ್ನು ವಿಭಜನೆ ಮಾಡಿದ ಸಂದರ್ಭದಲ್ಲಿ ಏಳು ತಾಲೂಕುಗಳನ್ನು ಸೇರಿಸಿ ಹಾವೇರಿ ಜಿಲ್ಲೆ ರಚನೆ ಮಾಡಲಾಯಿತು.
ಇದನ್ನೂ ಓದಿ: Job Hiring: ಗುತ್ತಿಗೆ ಆಧಾರದ ಮೇಲೆ DHEW ಕೇಂದ್ರಕ್ಕೆ ಸಿಬ್ಬಂದಿ ನೇಮಕಾತಿ
Shiggaon constituency ಪ್ರಬಲ ಸಮುದಾಯಗಳು
ಕ್ಷೇತ್ರದಲ್ಲಿ ಒಟ್ಟು 2,26,226 ಮತದಾರರಿದ್ದು, ಇದರಲ್ಲಿ ಪಂಚಮಶಾಲಿ ಸಮುದಾಯದ ಪ್ರಭಾವ ಹೆಚ್ಚು, ಇದಾದ ನಂತರ ಮುಸ್ಲಿಮರು. ಪ೦ಚಮಶಾಲಿ ಸಮುದಾಯದವರು ಸುಮಾರು 70 ಸಾವಿರದಷ್ಟಿದ್ದರೆ, ಮುಸ್ಲಿಮರು 55 ಸಾವಿರದಷ್ಟಿದ್ದಾರೆ.
ಸಿಎಂಗಳ ಗೆಲುವು
ಚಿತ್ರದುರ್ಗದ ಎಸ್ ನಿಜಲಿಂಗಪ್ಪ ಮತ್ತು ಕುಂದಗೋಳದ ಬಸವರಾಜ ಬೊಮ್ಮಾಯಿ ಅವರು ತವರು ಕ್ಷೇತ್ರದಲ್ಲಿ ಸೋಲುವ ಭೀತಿ ಎದುರಾದಾಗ ಶಿಗ್ಗಾವಿ-ಸವಣೂರಿಗೆ ಬ೦ದು ಗೆದ್ದು ಮುಖ್ಯಮ೦ತ್ರಿಯಾದರು. ಇಲ್ಲಿನ ಮತದಾರರು 8 ಬಾರಿ ಕಾಂಗ್ರೆಸ್, ಎರಡು ಬಾರಿ ಪಕ್ಷೇತರರು, ಒಂದು ಬಾರಿ ಜೆಡಿಎಸ್ ಹಾಗೂ 3 ಬಾರಿ ಬಿಜೆಪಿಗೆ ಮಣೆ ಹಾಕಿದ್ದಾರೆ.
ಕಾಂಗ್ರೆಸ್‌ನ ತಂತ್ರ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡುತ್ತಾ ಬ೦ದಿದ್ದು, ಈಗಲೂ ಈ ಪರಿಪಾಠ ಮು೦ದುವರಿದಿದ್ದು, ಮೂರು ಬಾರಿ ಅಜ್ಜಂಪೀರ್ ಖಾದ್ರಿ, ಒಮ್ಮೆ ಯಾಸಿರ್ ಪಠಾಣ್ ಇಲ್ಲಿ ಸೋಲು ಅನುಭವಿಸಿದ್ದಾರೆ. ಈ ಬಾರಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಸ್ಪರ್ಧಿಸುತ್ತಿದ್ದಾರೆ.
ಇದನ್ನೂ ಓದಿ: EPFO ಉದ್ಯೋಗಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್?
ಬಿಜೆಪಿಯ ಪ್ರತಿ ತಂತ್ರ
ಬಿಜೆಪಿಯು ಶಿಗ್ಗಾವಿಯ ಇನ್ನೊಂದು ಪ್ರಬಲ ಸಮುದಾಯವಾದ ಪಂಚಮಶಾಲಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾ ಬ೦ದಿದೆ, ಕಳೆದ ನಾಲ್ಕು ಚುನಾವಣೆಯಲ್ಲಿ ಪಂಚಮಶಾಲಿ ಸಮುದಾಯದ ಬಸವರಾಜ ಬೊಮ್ಮಾಯಿ ಗೆಲುವನ್ನು ಸಾಧಿಸಿಕೊ೦ಡು ಬ೦ದಿದ್ದಾರೆ. ಇದೀಗ, ಅವರ ಪುತ್ರ ಭರತ್ ಬೊಮ್ಮಾಯಿ ಕಣ್ಣದಲ್ಲಿದ್ದಾರೆ.
ಕಾಂಗ್ರೆಸ್ ಬಂಡಾಯ
ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ವಿರುದ್ಧ ಅಜ್ಜಂಪೀರ್ ಖಾದ್ರಿ ಬ೦ಡಾಯ ಸಾರಿದ್ದರು. ಕೊನೆಗಳಿಗೆಯಲ್ಲಿ ನಾಮಪತ್ರ ಕೂಡ ಸಲ್ಲಿಸಿದ್ದರು. ಇದು ಎರಡು ಪಕ್ಷಗಳಲ್ಲಿ ಮತ ಹಂಚಿಕೆಯಾಗುವ ಭೀತಿ ಹುಟ್ಟುಹಾಕಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸಿ ನಾಮಪತ್ರ ಹಿಂಪಡೆಯುವ೦ತೆ ಮಾಡಿದ್ದಾರೆ.