ಕಾರವಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾಗಿರುವ ಜಿಲ್ಲಾ ಮಹಿಳಾ ಸಬಲೀಕರಣ ಘಟಕ DHEW ಕೇಂದ್ರಕ್ಕೆ ಗುತ್ತಿಗೆ ಆಧಾರದ ಮೇಲೆ Gender Specialist ಹಾಗೂ DEO & Programme Assistant for PMMVY ಸಿಬ್ಬಂದಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಉಪನಿರ್ದೇಶಕರ ಕಛೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅರ್ಜಿ ಪಡೆದು ನ.30 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ನಿಬಂಧನೆಗಳು: ಮಾರ್ಗಸೂಚಿಯಲ್ಲಿ ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ಮಾತ್ರ ಪರಿಗಣಿಸಲಾಗುವುದು. ನೇಮಕಾತಿಯು ಸಮಿತಿಯ ಇಚ್ಛೆಯ ಮೇರೆಗೆ ತಾತ್ಕಾಲಿಕವಾಗಿರುತ್ತದೆ. ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಇಲಾಖೆಯಿಂದ ನಿಯೋಜಿಸುವ ಕಾರ್ಯಾಗಾರ, ತರಬೇತಿಗಳಿಗೆ ಬೆಂಗಳೂರು ಹಾಗೂ ದೆಹಲಿಗಳಿಗೆ ಪ್ರಯಾಣ ಕೈಗೊಳ್ಳಲು ಸಿದ್ಧರಿರಬೇಕು. ಜಿಲ್ಲಾ ಮಟ್ಟದ ಸಮಿತಿ ಉತ್ತರ ಕನ್ನಡ ಹಾಗೂ ಮೇಲಾಧಿಕಾರಿಗಳ ನಿರ್ದೇಶನದಂತೆ ಕರ್ತವ್ಯ ನಿರ್ವಹಿಸಲು ಬದ್ಧರಾಗಿರಬೇಕು.
ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಆಯ್ಕೆ ಪ್ರಕಿಯೆಯ ನಿರ್ಣಯವೇ ಅಂತಿಮವಾಗಿರುತ್ತದೆ. ಅರ್ಜಿಯೊಂದಿಗೆ ಸಲ್ಲಿಸುವಾಗ ಮೂಲ ದಾಖಲಾತಿಗಳನ್ನು ಸಲ್ಲಿಸದೇ, ಎಲ್ಲಾ ನಕಲು ಪ್ರತಿಗಳಿಗೆ ಕಡ್ಡಾಯವಾಗಿ ದೃಢಿಕರಿಸಿ ಸಲ್ಲಿಸುವುದು. ವಿದ್ಯಾರ್ಹತೆ/ಅನುಭವ ಇತ್ಯಾದಿಗಳಿಗೆ ಪೂರಕ ದಾಖಲೆಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸದಿದ್ದಲ್ಲಿ ಅಂತಹ ಅರ್ಜಿಯನ್ನು ಆಯ್ಕೆ ಸಮಿತಿಗೆ ಪರಿಗಣಿಸುವುದಿಲ್ಲ. ಗರಿಷ್ಠ 40 ವರ್ಷದ ವಯೋಮಿತಿ ಒಳಗಿನವರಿಗೆ ಆದ್ಯತೆ ನೀಡಲಾಗುವದು. ಆಯ್ಕೆಯಾದ ಅಭ್ಯರ್ಥಿಯು 1 ವರ್ಷದ ವರೆಗೆ ಕಡ್ಡಾಯವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ರೂ.200 ಛಾಪಾ ಕಾಗದದಲ್ಲಿ ಅಫಿಡೇವಿಟ್ ನೀಡಲು ಬದ್ಧರಾಗಿರಬೇಕು.
Gender Specialist ಹುದ್ದೆಗೆ ಅನುಭವ: ಸಮಾಜಕಾರ್ಯ/ಇತರ ಸಾಮಾಜಿಕ ವಿಭಾಗಗಳಲ್ಲಿ ಪದವೀಧರಾಗಿದ್ದು, ಲಿಂಗ ಕೇಂದ್ರಿತ ವಿಷಯಗಳಲ್ಲಿ ಸರ್ಕಾರ/ಸರಕಾರೇತರ ಸಂಸ್ಥೆಯೊAದಿಗೆ ಕೆಲಸ ಮಾಡಿರುವ ಅನುಭವ ಹೊಂದಿರಬೇಕು. ಕಂಪ್ಯೂಟರ್ ಸಾಕ್ಷರತೆ ಕಡ್ಡಾಯವಾಗಿರುತ್ತದೆ ಕಂಪ್ಯೂಟರ್/ಐಟಿ ಇತ್ಯಾದಿ ಕೆಲಸ ಜ್ಞಾನದೊಂದಿಗೆ ಪದವಿ ಪಡೆದಿರಬೇಕು.
DEO & Programme Assistant for PMMVY ಹುದ್ದೆಗೆ ಅನುಭವ: ಸರ್ಕಾರ ಅಥವಾ ಸರ್ಕಾರೇತರ/ಐಟಿ ಆಧಾರಿತ ಸಂಸ್ಥೆಯೊಂದಿಗೆ ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ಡೇಟಾ ನಿರ್ವಹಣೆ, ಪ್ರಕ್ರಿಯೆ ದಾಖಲಾತಿ ಮತ್ತು ವೆಬ್ ಆಧಾರಿತ ವರದಿ ಸ್ವರೂಪಗಳಲ್ಲಿ 3 ವರ್ಷಗಳ ಕಂಪ್ಯೂಟರ್ ಸಾಕ್ಷರತೆ ಕಡ್ಡಾಯವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ 08382-226761 ಸಂಪರ್ಕಿಸುವಂತೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.