ದಾವಣಗೆರೆ | ಗಲಾಟೆ ಪ್ರಕರಣದಿಂದ ಹೆಸರು ಕೈಬಿಡಲು ಲಂಚ; ASIಗೆ ಬಲೆ ಬೀಸಿತು ಲೋಕಾಯುಕ್ತ

ದಾವಣಗೆರೆ: ಪೊಲೀಸರೇ ಲಂಚಕ್ಕೆ ಕೈ ಚಾಚದಿರಿ. ಅಪರಾಧಿಗಳ ಕೈಗೆ ಬೇಡಿ ತೊಡಿಸುವ ನಿಮ್ಮನ್ನೇ ಜೈಲಿಗೆ ತಳ್ಳುತ್ತದೆ ಲೋಕಾಯುಕ್ತ! ಪೊಲೀಸ್ ಠಾಣೆ ಒಳಗಾಗಲಿ, ಹೊರಗಾಗಲಿ ದೂರುದಾರರಿಂದ ಲಂಚ ಪಡೆಯಲು ಮುಂದಾದರೆ ಹಠಾತ್ ಎದುರಾಗುತ್ತದೆ ಲೋಕಾಯುಕ್ತ. ಹೌದು,…

ದಾವಣಗೆರೆ: ಪೊಲೀಸರೇ ಲಂಚಕ್ಕೆ ಕೈ ಚಾಚದಿರಿ. ಅಪರಾಧಿಗಳ ಕೈಗೆ ಬೇಡಿ ತೊಡಿಸುವ ನಿಮ್ಮನ್ನೇ ಜೈಲಿಗೆ ತಳ್ಳುತ್ತದೆ ಲೋಕಾಯುಕ್ತ!

ಪೊಲೀಸ್ ಠಾಣೆ ಒಳಗಾಗಲಿ, ಹೊರಗಾಗಲಿ ದೂರುದಾರರಿಂದ ಲಂಚ ಪಡೆಯಲು ಮುಂದಾದರೆ ಹಠಾತ್ ಎದುರಾಗುತ್ತದೆ ಲೋಕಾಯುಕ್ತ.

ಹೌದು, ಇಂಥದ್ದೊಂದು ಘಟನೆ, ಪ್ರಕರಣ ದಾವಣಗೆರೆಯಲ್ಲಿ ನಡೆದಿದೆ. ASI ಒಬ್ಬರು ಪ್ರಕರಣವೊಂದರಲ್ಲಿ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

Vijayaprabha Mobile App free

ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆ ಎಎಸ್‌ಐ ಈರಣ್ಣ ಲೋಕಾಯುಕ್ತರು ಬೀಸಿದ ಬಲೆಗೆ ಸಿಲುಕಿದ್ದಾರೆ.

ಏನಿದು ಲಂಚ ಪ್ರಕರಣ?

ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆ ಎಎಸ್ ಐ ಈರಣ್ಣ ಅವರು ಗಲಾಟೆ ಪ್ರಕರಣವೊಂದರಲ್ಲಿ ದೋಷಾರೋಪ ಪಟ್ಟಿಯಿಂದ ಇಬ್ಬರು ಮಹಿಳೆಯರ ಹೆಸರನ್ನು ಕೈ ಬಿಡಲು 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅದರ ಮೊದಲ ಕಂತಾಗಿ 50,000 ರು. ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರು ಎಂಟ್ರಿ ಕೊಟ್ಟು ಲಂಚದ ಹಣ ಸಮೇತ ವಶಕ್ಕೆ ಪಡೆದಿದ್ದಾರೆ

ಗಲಾಟೆ ವಿಚಾರವಾಗಿ ಮಣಿಕಂಠ ಆಚಾರ್ಯ, ಮತ್ತವರ ತಾಯಿ ಭಾಗ್ಯಮ್ಮ ಮತ್ತು ಪತ್ನಿ ಅರ್ಚನಾ ವಿರುದ್ಧ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಪ್ರಕರಣದಿಂದ ಭಾಗ್ಯಮ್ಮ ಮತ್ತು ಅರ್ಚನಾ ಅವರ ಹೆಸರು ಕೈ ಬಿಡುವಂತೆ ಒತ್ತಡ ಕೇಳಿಬಂದಿತ್ತು. ಇದರ ಲಾಭ ಪಡೆಯಲು ಮುಂದಾದ ASI ಈರಣ್ಣ ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈ ಸಂಬಂಧ ಮಣಿಕಂಠ ಆಚಾರ್ಯ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಿ.ಮಧುಸೂದನ್‌, ಪ್ರಭು ಬಸೂರಿನ ಹಾಗೂ ಪಿ.ಸರಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಲಂಚ ಪಡೆಯುತ್ತಿದ್ದಾಗಲೆ ASI ಈರಣ್ಣ ಅವರನ್ನು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.