Gold Investment | ಚಿನ್ನದ ಮೇಲೆ ಹೂಡಿಕೆ ಏಕೆ ಮಾಡಬೇಕು? ಉತ್ತಮ ಲಾಭ ಗಳಿಸಲು ಯಾವ ರೀತಿ ಚಿನ್ನ ಖರೀದಿ ಮಾಡಬೇಕು?

Gold Investment : ಭಾರತದಲ್ಲಿ ಚಿನ್ನವು ಹೂಡಿಕೆ ಅಥವಾ ಖರೀದಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದ್ದು, ಚಿನ್ನದ ಮೇಲಿನ ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ. ಚಿನ್ನದ ಹೂಡಿಕೆಯನ್ನು ಆಭರಣಗಳು, ನಾಣ್ಯಗಳು, ಚಿನ್ನದ ವಿನಿಮಯ-ವ್ಯಾಪಾರ ನಿಧಿಗಳು, ಚಿನ್ನದ…

Gold Investment

Gold Investment : ಭಾರತದಲ್ಲಿ ಚಿನ್ನವು ಹೂಡಿಕೆ ಅಥವಾ ಖರೀದಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದ್ದು, ಚಿನ್ನದ ಮೇಲಿನ ಹೂಡಿಕೆಯು ಉತ್ತಮ ಆದಾಯವನ್ನು ನೀಡುತ್ತದೆ.

ಚಿನ್ನದ ಹೂಡಿಕೆಯನ್ನು ಆಭರಣಗಳು, ನಾಣ್ಯಗಳು, ಚಿನ್ನದ ವಿನಿಮಯ-ವ್ಯಾಪಾರ ನಿಧಿಗಳು, ಚಿನ್ನದ ನಿಧಿಗಳು, ಸಾರ್ವಭೌಮ ಚಿನ್ನದ ಬಾಂಡ್ ಯೋಜನೆ ಮುಂತಾದ ರೂಪಗಳಲ್ಲಿ ಮಾಡಬಹುದು. ಮಾರುಕಟ್ಟೆಗಳು ಚಿನ್ನದ ಬೆಲೆಯಲ್ಲಿ ಯಾವಾಗಲೂ ಏರಿಕೆಯನ್ನು ಮಾಡುತ್ತದೆ. ಬಂಗಾರಕ್ಕೆ ಸದಾ ಬೇಡಿಕೆ ಇರುವ ಕಾರಣ ಅದರ ಮೇಲಿನ ಹೂಡಿಕೆಯಿಂದ ಕನಿಷ್ಠ ಬಡ್ಡಿ/ಲಾಭ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: PF withdrawal rules | ಪಿಎಫ್ ಹಿಂಪಡೆಯಲು ಹೊಸ ನಿಯಮಗಳು; ಇನ್ಮುಂದೆ ಸುಲಭವಾಗಿ ಕ್ಲೈಮ್ ಇತ್ಯರ್ಥ!

Vijayaprabha Mobile App free

Gold Investment : ಹಣವನ್ನು ಸುರಕ್ಷಿತವಾಗಿರಿಸಲು ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮ

Gold Investment vijayaprabha news

ಚಿನ್ನದ ಹೂಡಿಕೆಯು ಕಾಲಾನಂತರದಲ್ಲಿ ಹಣಕಾಸಿನ ಲಾಭದ ನಿರೀಕ್ಷೆಯೊಂದಿಗೆ ಚಿನ್ನದ ಆಸ್ತಿಗಳಿಗೆ ಹಣವನ್ನು ಹಂಚುವುದನ್ನು ಒಳಗೊಂಡಿದ್ದು, ಹಣದುಬ್ಬರ ಅಥವಾ ಆರ್ಥಿಕ ಕುಸಿತದ ಅವಧಿಯಲ್ಲಿಯೂ ಕಡಿಮೆ ಅಪಾಯದೊಂದಿಗೆ ಉತ್ತಮ ಆದಾಯಕ್ಕಾಗಿ ಅದರಲ್ಲಿ ಹೂಡಿಕೆ ಮಾಡಬಹುದು.

ಅನೇಕ ಜನರು ಹಣವನ್ನು ಸುರಕ್ಷಿತವಾಗಿರಿಸಲು ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದು, ಚಿನ್ನದ ವಿನಿಮಯ-ವಹಿವಾಟು ನಿಧಿಗಳಲ್ಲಿ ಹೂಡಿಕೆ ಮಾಡಲು, ಒಬ್ಬರು ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು. ಆದರೆ ಭೌತಿಕ ಚಿನ್ನವನ್ನು ಆಭರಣಕಾರರಿಂದ ಖರೀದಿಸಬಹುದು.

ಇದನ್ನೂ ಓದಿ: De-link | ನೀವು ಮನೆ ಬದಲಿಸಿದ್ದೀರಾ? ಗೃಹಜ್ಯೋತಿ ಹಳೆ ಖಾತೆ ಸಂಖ್ಯೆ ಡಿ ಲಿಂಕ್‌ ಹೀಗೆ ಮಾಡಿ!

ಹೂಡಿಕೆ ಮಾಡಿ ಲಾಭ ಗಳಿಸಲು ಯಾವ ರೀತಿಯಲ್ಲಿ ಚಿನ್ನ ಖರೀದಿ ಮಾಡಬೇಕು?

ಚಿನ್ನದ ಮೇಲೆ ಹೂಡಿಕೆ ಮಾಡುವಾಗ ಚಿನ್ನದ ಆಭರಣ, ಚಿನ್ನದ ನಾಣ್ಯ ಹೀಗೆ ಹಲವು ರೀತಿಯಲ್ಲಿ ಚಿನ್ನ ಖರೀದಿ ಮಾಡಬಹುದಾಗಿದ್ದು, ತಜ್ಞರ ಪ್ರಕಾರ ಚಿನ್ನದ ಗಟ್ಟಿ ಖರೀದಿ ಮಾಡೋದು ಹೂಡಿಕೆ ದೃಷ್ಟಿಯಿಂದ ಉತ್ತಮ ಎನ್ನಲಾಗುತ್ತದೆ.

ಏಕೆಂದರೆ ಆಭರಣ ಖರೀದಿ ಮಾಡುವಾಗ ಮೇಕಿಂಗ್, ವೇಸ್ಟೇಜ್ ಅಂತಾ ಹಣ ಕಡಿತವಾಗುತ್ತದೆ. ಮಾರುವಾಗಲೂ ವೇಸ್ಟೇಜ್ ಹಣ ಹೋಗುತ್ತೆ. ಆದರೆ ಚಿನ್ನದ ಗಟ್ಟಿಯಲ್ಲಿ ಹೀಗಿರಲ್ಲ. ಇದ್ದರೂ ತೀರಾ ಕಡಿಮೆ ಇರುತ್ತೆ. ಹೀಗಾಗಿ ಇನ್‌ವೆಸ್ಟ್‌ಮೆಂಟ್ ದೃಷ್ಟಿಯಿಂದ ಗಟ್ಟಿಯನ್ನು ಖರೀದಿ ಮಾಡುವುದು ಉತ್ತಮ.

ಇದನ್ನೂ ಓದಿ: EPFO ಉದ್ಯೋಗಿಗಳಿಗೆ ಕೇಂದ್ರದಿಂದ ಗುಡ್ ನ್ಯೂಸ್?

ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸಿಗುವ ಪ್ರಯೋಜನಗಳು

ಚಿನ್ನದ ಹೂಡಿಕೆಯಿಂದ ಸಿಗುವ ಪ್ರಯೋಜನಗಳು ಹೀಗಿವೆ, ಚಿನ್ನದ ಮೌಲ್ಯವು ಷೇರುಗಳಂತೆ ಜಿಗಿಯದೆ ಸ್ಥಿರವಾಗಿರುತ್ತದೆ. ಸುಲಭವಾಗಿ ಚಿನ್ನವನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದಾಗಿದ್ದು, ಇದು ಪ್ರಪಂಚದ ಎಲ್ಲೆಡೆ ಸ್ವೀಕರಿಸಲ್ಪಟ್ಟಿದೆ.

ಆದ್ದರಿಂದ ನಿಮಗೆ ಅಗತ್ಯವಿರುವಾಗ ಅದನ್ನು ಹಣವಾಗಿ ಪರಿವರ್ತಿಸಬಹುದು. ಹಣದುಬ್ಬರ ಹೆಚ್ಚಾದಾಗ ಚಿನ್ನದ ಮೌಲ್ಯ ಹೆಚ್ಚಾಗುತ್ತದೆ. ಹಣದುಬ್ಬರದ ಸಮಯದಲ್ಲಿ, ಚಿನ್ನವು ನಗದಿಗಿಂತ ಹೆಚ್ಚು ಸ್ಥಿರ ಹೂಡಿಕೆಯಾಗಿದೆ. ಈಕ್ವಿಟಿ ಮಾರುಕಟ್ಟೆಗಳು ಕುಸಿದಾಗ ಚಿನ್ನದ ಹೂಡಿಕೆಯು ಮೇಲುಗೈ ಸಾಧಿಸುತ್ತದೆ.

ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಹೂಡಿಕೆ ಮಾಡುವುದರ ಲಾಭವೇನು? 

ಚಿನ್ನವನ್ನು ಡಿಜಿಟಲ್ ರೂಪದಲ್ಲಿ ವಿವಿಧ ವೇದಿಕೆಗಳ ಮೂಲಕ ಖರೀದಿಸಬಹುದಾಗಿದ್ದು, ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನವು ವ್ಯಾಪಾರಿಗಳು ಮತ್ತು ಚಿನ್ನ ತಯಾರಕರೊಂದಿಗೆ ಸಹಭಾಗಿತ್ವವನ್ನು ಹೊಂದಿವೆ. ಚಿನ್ನದಲ್ಲಿ ಹೂಡಿಕೆ ಮಾಡಲು ಇದು ಸುರಕ್ಷಿತ ಆಯ್ಕೆಯಾಗಿದೆ. ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸುವುದು ಮತ್ತು ಅದನ್ನು ಡಿಜಿಟಲ್‌ನಲ್ಲಿ ಸಂಗ್ರಹಿಸುವುದು ಹೇಗೆಂದು ವಿಡಿಯೋದಲ್ಲಿ ನೋಡಬಹುದು.
ಕೃಪೆ: Tv9 Kannada

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.