ಜೈದೇವ್ ನನ್ನು ಅತಿಯಾಗಿ ನಂಬಿ ಭೂಮಿಕಾ ಮುಂದೆ ಹಾರಾಡಿದ್ದ ಮಲ್ಲಿ, ಸೀಮಂತ ಮಗಿಸಿಕೊಂಡು ಕಾರಿನಲ್ಲಿ ಕರೆದುಕೊಂಡು ಹೋಗುವಾಗ, ಸತ್ಯ ಗೊತ್ತಾಗಿದೆ.
ಹೌದು, ಜೈ ದೇವ್ ಅರ್ಧಕ್ಕೆ ಕಾರು ನಿಲ್ಲಿಸಿ ದಿಯಾ ಜತೆ ಅತ್ಯಂತ ಸಲುಗೆಯಿಂದ ಇದ್ದದ್ದು ಮಲ್ಲಿ ಕಣ್ಣಿಗೆ ಬಿದ್ದಿದೆ. ಜೈದೇವ್‌ನ ದುಷ್ಟತನ ಮಲ್ಲಿ ಮುಂದೆ ಬಯಲಾಗಿದ್ದು, ಭೂಮಿಕಾ ಹೇಳಿರೋ ಮಾತು ಸತ್ಯ ಅಂತ ಅರಿವಾಗಿದೆ.
ಇನ್ನು ಗೌತಮ್ ಕೂಡ ದಿಯಾ ಜತೆಗಿನ ಜೈದೇವ್ ಸಲುಗೆ ಇದ್ದದ್ದು ಗೊತ್ತಾಗಿದ್ದು, ಎಲ್ಲ ಸರಿ ಮಾಡಬೇಕು ಎಂದು ಪಣ ತೊಟ್ಟಿರುತ್ತಾನೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಜೈದೇವ್ ಮಾತ್ರ ತನ್ನ ಕಳ್ಳಾಟವನ್ನು ಮುಂದುವರಿಸುತ್ತಲೇ ಇದ್ದಾನೆ.
ದಿಯಾ ಜತೆ ಜೈದೇವ್ ದೂರ ಆಗಬೇಕು ಅಂದರೆ ಜೈದೇವ್ ಮಲ್ಲಿ ಹತ್ತಿರ ಇರಲೇಬೇಕು ಎಂದು ಗೌತಮ್ ಪ್ಲ್ಯಾನ್ ಮಾಡಿದ್ದು, ಮಲ್ಲಿ ಹಳ್ಳಿಗೆ ಜೈದೇವ್‌ನನ್ನೂ ಕಳುಹಿಸಿಕೊಟ್ಟರೆ ದಿಯಾ ಜತೆಯಿಂದ ದೂರ ಆಗಬಹದು ಎಂದು ಅಂದುಕೊಂಡಿದ್ದಾನೆ.