Bladder cancer | ನಟ ಶಿವಣ್ಣನಿಗೂ ಕಾಡಿತ್ತು ಈ ಮೂತ್ರಕೋಶದ ಕ್ಯಾನ್ಸರ್‌!; ಲಕ್ಷಣಗಳೇನು? ಪತ್ತೆ ಹೇಗೆ?

Bladder cancer : ಮೂತ್ರಕೋಶದ ಅಂಗಾಂಶಗಳಲ್ಲಿ ಮಾರಣಾಂತಿಕ ಜೀವಕೋಶಗಳು ರೂಪುಗೊಂಡಾಗ ಮೂತ್ರಕೋಶದ ಕ್ಯಾನ್ಸರ್ (Bladder cancer) ಸಂಭವಿಸುತ್ತದೆ, ಮೂತ್ರವನ್ನು ಸಂಗ್ರಹಿಸುವ ಅಂಗ. ಪ್ರತಿ ವರ್ಷ ಸುಮಾರು 43,00,000 ಜನರು ಮೂತ್ರಕೋಶದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ದೇಶದಲ್ಲಿ…

What are the symptoms of bladder cancer that afflicted actor Shivarajkumar

Bladder cancer : ಮೂತ್ರಕೋಶದ ಅಂಗಾಂಶಗಳಲ್ಲಿ ಮಾರಣಾಂತಿಕ ಜೀವಕೋಶಗಳು ರೂಪುಗೊಂಡಾಗ ಮೂತ್ರಕೋಶದ ಕ್ಯಾನ್ಸರ್ (Bladder cancer) ಸಂಭವಿಸುತ್ತದೆ, ಮೂತ್ರವನ್ನು ಸಂಗ್ರಹಿಸುವ ಅಂಗ. ಪ್ರತಿ ವರ್ಷ ಸುಮಾರು 43,00,000 ಜನರು ಮೂತ್ರಕೋಶದ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ.

ದೇಶದಲ್ಲಿ 2020ರಲ್ಲಿ ಸುಮಾರು 18,921 ಜನರು ಮೂತ್ರಕೋಶದ ಕಾಯಿಲೆಗೆ ಒಳಗಾಗಿದ್ದಾರೆ. ಪ್ರತಿ ಒಂದು ಲಕ್ಷ ಜನರಲ್ಲಿ ಪುರುಷರು 2.4 ರ ಅನುಪಾತದಲ್ಲಿ ಹಾಗೂ ಮಹಿಳೆಯರು 0.7 ಅನುಪಾತದಲ್ಲಿ ಒಳಗಾಗುತ್ತಿದ್ದಾರೆ. ಮರಣದ ಪ್ರಮಾಣ ಪುರುಷರಲ್ಲಿ 1.3 ಮತ್ತು ಮಹಿಳೆಯರಲ್ಲಿ 0.3 ರಷ್ಟಿದೆ ಎನ್ನಲಾಗಿದೆ.

ಇದನ್ನೂ ಓದಿ: Vegetables | ಚಳಿಗಾಲದಲ್ಲಿ ತಪ್ಪದೆ ಸೇವಿಸಬೇಕಾದ ಟಾಪ್ 5 ತರಕಾರಿಗಳು

Vijayaprabha Mobile App free

ಮೂತ್ರಕೋಶದ ಕ್ಯಾನ್ಸರ್ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳು (Precautions to prevent bladder cancer)

Bladder cancer

ಮೂತ್ರಕೋಶದ ಕ್ಯಾನ್ಸರ್ ಜೀವನ ಶೈಲಿ ಮತ್ತು ಹವ್ಯಾಸಗಳಿಂದ ಪ್ರಚೋದನೆ ಪಡೆದುಕೊಳ್ಳುತ್ತವೆ. ಧೂಮಪಾನ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ಸೇವಿಸುವ ಹವ್ಯಾಸವನ್ನು ಹೊಂದಿದ್ದರೆ ಅದನ್ನು ಮೊದಲು ತ್ಯಜಿಸಬೇಕು.

ಧೂಮಪಾನವು ಸಿಗರೇಟ್, ಸಿಗಾರ್ ಮತ್ತು ಪೈಪ್‌ಗಳು ಸಹ ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗಲಿದ್ದು, ಕೆಲಸ ಮಾಡುವ ಅಥವಾ ಉದ್ಯೋಗ ಕ್ಷೇತ್ರದಲ್ಲಿ ರಾಸಾಯನಿಕ ವಸ್ತುಗಳ ಬಳಕೆ ಮಾಡುತ್ತಿದ್ದರೆ ಅಂತಹ ಪ್ರದೇಶದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮದಲ್ಲಿ ಕೆಲಸ ನಿರ್ವಹಿಸಬೇಕು.

ಇದನ್ನೂ ಓದಿ: Sesame Seeds | ಚಳಿಗಾಲದಲ್ಲಿ ಕಪ್ಪು ಅಥವಾ ಬಿಳಿ ಎಳ್ಳು ಯಾವುದು ಉತ್ತಮ?

ಮೂತ್ರಕೋಶ ಕ್ಯಾನ್ಸರ್​ನ ಲಕ್ಷಣಗಳೇನು? (What are the symptoms of bladder cancer)

ಮೂತ್ರದ ಜತೆ ರಕ್ತ ಬರುವುದು, ಮೂತ್ರ ವಿಸರ್ಜಿಸುವಾಗ ನೋವು, 40 ವರ್ಷದ ನಂತರ ಮೂತ್ರದಲ್ಲಿ ರಕ್ತ ಮಿಶ್ರಿತವಾಗುವುದು ಮೂತ್ರಕೋಶ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಾಗಿವೆ. ಕ್ಯಾನ್ಸರ್‌ ಅನ್ನು ರಕ್ತ ಪರೀಕ್ಷೆ, ಸಿಟಿ ಸ್ಕ್ಯಾನ್, ಎಂಡೋಸ್ಕೋಪಿಕ್ ಪರೀಕ್ಷೆಯ ಮೂಲಕ ತಿಳಿದುಕೊಳ್ಳಲಾಗುವುದು. ಈ ತಪಾಸಣೆಯ ಮಾರ್ಗಗಳು ಕ್ಯಾನ್ಸರ್‌ನ ಹಂತ ಮತ್ತು ಸ್ಥಿತಿಯನ್ನು ವ್ಯಕ್ತಪಡಿಸುತ್ತವೆ. ಆರಂಭಿಕ ಮತ್ತು ಬಾಹ್ಯ ಗಡ್ಡೆಗಳನ್ನು ಎಂಡೋಸ್ಕೋಪಿಕ್‌ಗಳ ಮೂಲಕ ನಿರ್ವಹಿಸಬಹುದು.

ಇದನ್ನೂ ಓದಿ: Sore Throat | ಚಳಿಗಾಲದಲ್ಲಿ ಕಾಡುವ ಗಂಟಲು ನೋವು ಸಮಸ್ಯೆಗೆ ಸುಲಭ ಮನೆಮದ್ದುಗಳು

ಸ್ಯಾಂಡಲ್‌ವುಡ್‌ನ ಶಿವಣ್ಣನಿಗೆ ಕಾಡಿತ್ತು ಈ ಮೂತ್ರಕೋಶದ ಕ್ಯಾನ್ಸರ್‌! (Actor Shivarajkumar suffers from bladder cancer)

ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ಅವರು ಕೂಡಾ ಈ ಕ್ಯಾನ್ಸರ್‌ನಿಂದ ತೊಂದರೆಗೊಳಗಾಗಿದ್ದರು. ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್‌ನಲ್ಲಿ ಶಿವಣ್ಣ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಸುಮಾರು 6 ಗಂಟೆಗಳ ಕಾಲ ತಜ್ಞ ವೈದ್ಯರು ಶಿವಣ್ಣನಿಗೆ ಆಪರೇಷನ್ ಮಾಡಿ, ಕ್ಯಾನ್ಸರ್ ತಗುಲಿದ್ದ ಅವರ ಮೂತ್ರಕೋಶವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದ್ದು, ಸರ್ಜರಿ ಬಳಿಕ ಅವರದ್ದೇ ಕರಳು ಬಳಸಿ ಕೃತಕ ಮೂತ್ರಕೋಶ ಮತ್ತೆ ಅಳವಡಿಸಲಾಗಿದೆ. ಶಿವಣ್ಣ ಈಗ ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ: Walking | ವಾಕಿಂಗ್‌ನಿಂದ ಆಗುವ ಆರೋಗ್ಯ ಲಾಭಗಳು

ಮೂತ್ರಕೋಶದ ಕ್ಯಾನ್ಸರ್‌ ಪತ್ತೆ ಹಚ್ಚುವುದು ಹೇಗೆ? (How to detect bladder cancer)

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಇದರಲ್ಲಿ ವಿವಿಧ ಬಗೆಗಳಿರುವುದನ್ನು ಕಾಣಬಹುದು. ಅವುಗಳಲ್ಲಿ ಮೂತ್ರಕೋಶದ ಕ್ಯಾನ್ಸರ್ ಸಹ ಒಂದು. ಮೂತ್ರಕೋಶದ ಅಂಗಾಂಶಗಳಲ್ಲಿ ಮಾರಣಾಂತಿಕ ಜೀವಕೋಶಗಳು ರೂಪುಗೊಂಡಾಗ ಮೂತ್ರಕೋಶದ ಕ್ಯಾನ್ಸರ್ ಸಂಭವಿಸುತ್ತದೆ, ಮೂತ್ರವನ್ನು ಸಂಗ್ರಹಿಸುವ ಅಂಗ. ಮಹಿಳೆಯರಿಗಿಂತ ಪುರುಷರಿಗೆ ಈ ಮೂತ್ರಕೋಶದ ಕ್ಯಾನ್ಸರ್ ಅಪಾಯ ಹೆಚ್ಚು. ಚಿಕಿತ್ಸೆಯ ನಂತರ ಕೂಡ ಕ್ಯಾನ್ಸರ್ ಮರುಕಳಿಸಬಹುದು. ಮೂತ್ರಕೋಶದ ಕ್ಯಾನ್ಸರ್‌ ಪತ್ತೆ ಹಚ್ಚುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಕೃಪೆ – ವಿಜಯ ಕರ್ನಾಟಕ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.