Sore Throat | ಚಳಿಗಾಲದಲ್ಲಿ ಕಾಡುವ ಗಂಟಲು ನೋವು ಸಮಸ್ಯೆಗೆ ಸುಲಭ ಮನೆಮದ್ದುಗಳು

Sore Throat : ಗಂಟಲು ನೋವು (Sore Throat) ಸಾಮಾನ್ಯವಾಗಿ ನೋವು, ತುರಿಕೆ ಅಥವಾ ಕಿರಿಕಿರಿಯನ್ನು ಉಂಟುಮಾಡುತ್ತದೆ. ನೀವು ನುಂಗುವಾಗ ನೋವು ಉಲ್ಬಣಗೊಳ್ಳಬಹುದು, ಆಹಾರ ಮತ್ತು ದ್ರವಗಳನ್ನು ಸೇವಿಸಲು ಕಷ್ಟವಾಗುತ್ತದೆ. ಗಂಟಲು ನೋವು ವೈದ್ಯರ…

Home Remedies for Sore Throat

Sore Throat : ಗಂಟಲು ನೋವು (Sore Throat) ಸಾಮಾನ್ಯವಾಗಿ ನೋವು, ತುರಿಕೆ ಅಥವಾ ಕಿರಿಕಿರಿಯನ್ನು ಉಂಟುಮಾಡುತ್ತದೆ. ನೀವು ನುಂಗುವಾಗ ನೋವು ಉಲ್ಬಣಗೊಳ್ಳಬಹುದು, ಆಹಾರ ಮತ್ತು ದ್ರವಗಳನ್ನು ಸೇವಿಸಲು ಕಷ್ಟವಾಗುತ್ತದೆ.

ಗಂಟಲು ನೋವು ವೈದ್ಯರ ಬಳಿಗೆ ಹೋಗುವಷ್ಟು ಗಂಭೀರವಾಗಿಲ್ಲದಿದ್ದರೂ ಸಹ, ಅದು ಇನ್ನೂ ನೋವಿನಿಂದ ಕೂಡಿರುತ್ತದೆ ಮತ್ತು ನಿಮಗೆ ರಾತ್ರಿಯ ಉತ್ತಮ ನಿದ್ರೆ ಸಿಗದಂತೆ ತಡೆಯಬಹುದು. ಮನೆಮದ್ದುಗಳು ನೋವು ಮತ್ತು ಕಿರಿಕಿರಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Walking | ವಾಕಿಂಗ್‌ನಿಂದ ಆಗುವ ಆರೋಗ್ಯ ಲಾಭಗಳು

Vijayaprabha Mobile App free

ಜೇನುತುಪ್ಪ, ಉಪ್ಪು ನೀರು ಮತ್ತು ಗಿಡಮೂಲಿಕೆಗಳು ಸೇರಿದಂತೆ ನೈಸರ್ಗಿಕ ಪರಿಹಾರಗಳು ಗಂಟಲು ನೋವನ್ನು ನಿರ್ವಹಿಸಲು ಸಹಾಯ ಮಾಡಬಹುದು. ಆದರೆ ಅದು ಸುಧಾರಿಸದಿದ್ದರೆ, ನಿಮಗೆ ವೈದ್ಯಕೀಯ ಆರೈಕೆ ಅಥವಾ ಓವರ್-ದಿ-ಕೌಂಟರ್ (OTC) ಔಷಧಿಗಳು ಬೇಕಾಗಬಹುದು.

ಗಂಟಲು ನೋವು ಸಮಸ್ಯೆಗೆ ಸುಲಭ ಮನೆಮದ್ದುಗಳು (Home Remedies for Sore Throat)

Home Remedies for Sore Throat
Home Remedies for Sore Throat
  1. ಉಪ್ಪು ನೀರು
  2. ಅರಶಿನ ಹಾಲು
  3. ಚಹಾಗಳು
  4. ಬೆಣ್ಣೆ ಮತ್ತು ಬೆಲ್ಲ
  5. ಲೆಮನ್ ಟೀ

1. ಉಪ್ಪು ನೀರು

ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಸಲ್ಪ ಉಪ್ಪು ಹಾಕಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ಶೀಘ್ರವೇ ಗುಣವಾಗುತ್ತದೆ. ಅಲ್ಲದೆ ಗಂಟಲಿನ ಭಾಗದಲ್ಲಿ ಕ೦ಡುಬರುವ ಊತವನ್ನು ಇದು ಬೇಗನೆ ಪರಿಹರಿಸುತ್ತದೆ.

2. ಅರಶಿನ ಹಾಲು

ಒಂದು ಗ್ಲಾಸ್ ಹಾಲಿನಲ್ಲಿ 1 ಚಮಚ ಅರಿಶಿನ ಪುಡಿ ಹಾಕಿ ಬೆಚ್ಚಗೆ ಮಾಡಿ ರಾತ್ರಿ ಮಲಗುವ ಮೊದಲು ಕುಡಿಯಿರಿ. ಅರಿಶಿನದಲ್ಲಿ ಆಂಟಿ-ಸೆಪ್ಟಿಕ್ ಗುಣವಿದ್ದು ಅದು ಗಂಟಲು ನೋವನ್ನು ಶಮನಗೊಳಿಸುತ್ತದೆ ಮತ್ತು ಉರಿತವನ್ನು ನಿವಾರಿಸುತ್ತದೆ.

ಇದನ್ನೂ ಓದಿ: Immune System | ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ಎದುರಾಗುವ ಆರೋಗ್ಯ ಸಮಸ್ಯೆಗಳು ಯಾವುವು? ಇಲ್ಲಿದೆ ಮಾಹಿತಿ

3. ಚಹಾಗಳು

ಶುಂಠಿ, ಪುದೀನ ಚಹಾ ಇವುಗಳನ್ನು ಕುಡಿಯುವುದರಿಂದ ಗಂಟಲು ಕೆರೆತ ಮತ್ತು ನೋವನ್ನು ದೂರವಾಗುತ್ತದೆ. ಇವುಗಳಲ್ಲಿ ಆಂಟಿ ಇಂಪ್ಲಾಮೆಟರಿ ಗುಣಲಕ್ಷಣಗಳಿದ್ದು, ಗಂಟಲು ಕಿರಿಕಿರಿ ಮತ್ತು ನೋವು ನಿವಾರಣೆಗೆ ಸಹಾಯ ಮಾಡುತ್ತದೆ.

4. ಬೆಣ್ಣೆ ಮತ್ತು ಬೆಲ್ಲ

ಒಂದು ಚಿಕ್ಕ ತುಂಡು ಬೆಣ್ಣೆ ಮತ್ತು ಬೆಲ್ಲವನ್ನು ಬೆರೆಸಿ ಸೇವಿಸಿ. ನು೦ಗದೆ ಬಾಯಿಯಲ್ಲಿ ಕರಗಲು ಕಾಯಿರಿ. ಇದು ಗಂಟಲನ್ನು ತಣ್ಣಗಾಗಿಸುತ್ತದೆ ಮತ್ತು ಶೀತದಿಂದ ಉಂಟಾಗುವ ನರಗಳ ಕಿರಿಕಿರಿ ನಿವಾರಿಸುತ್ತದೆ.

5. ಲೆಮನ್ ಟೀ

ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆಹಣ್ಣಿನ ರಸ ಹಿಂಡಿಕೊಂಡು ಅದರ ಜೊತೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ. ಜೇನುತುಪ್ಪ ಗಂಟಲಿನ ಭಾಗಕ್ಕೆ ರಕ್ಷಣಾತ್ಮಕ ಪದರವನ್ನು ಒದಗಸಿ ಗಂಟಲಿನ ಕಿರಿಕಿರಿಯನ್ನು ದೂರ ಮಾಡುತ್ತದೆ.

ಇದನ್ನೂ ಓದಿ: Muscle cramps | ಸ್ನಾಯು ಸೆಳೆತಕ್ಕೆ ಇಲ್ಲಿದೆ ಮನೆಮದ್ದುಗಳು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.