Sesame Seeds | ಚಳಿಗಾಲದಲ್ಲಿ ಕಪ್ಪು ಅಥವಾ ಬಿಳಿ ಎಳ್ಳು ಯಾವುದು ಉತ್ತಮ?

Sesame Seeds : ಚಳಿಗಾಲದಲ್ಲಿ ಕಪ್ಪು ಎಳ್ಳನ್ನು ಹೆಚ್ಚು ತಿನ್ನುವುದು ಉತ್ತಮ. ಏಕೆಂದರೆ ಇದು ಬಿಳಿ ಎಳ್ಳಿಗಿಂತ (Sesame Seeds) ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದ್ದು, ಕಪ್ಪು ಮತ್ತು ಬಿಳಿ ಎಳ್ಳು ಲಡ್ಡುಗಳು ಮತ್ತು ಚಿಕ್ಕಿಗಳು…

Sesame Seeds

Sesame Seeds : ಚಳಿಗಾಲದಲ್ಲಿ ಕಪ್ಪು ಎಳ್ಳನ್ನು ಹೆಚ್ಚು ತಿನ್ನುವುದು ಉತ್ತಮ. ಏಕೆಂದರೆ ಇದು ಬಿಳಿ ಎಳ್ಳಿಗಿಂತ (Sesame Seeds) ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದ್ದು, ಕಪ್ಪು ಮತ್ತು ಬಿಳಿ ಎಳ್ಳು ಲಡ್ಡುಗಳು ಮತ್ತು ಚಿಕ್ಕಿಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಕೂಡ ಹೌದು.

ಮೂಳೆಗಳ ಆರೋಗ್ಯ

ಕಪ್ಪು ಎಳ್ಳು ಬಿಳಿ ಎಳ್ಳಿಗಿಂತ ಉತ್ತಮವಾಗಿದ್ದು, ಇದರಲ್ಲಿ ಕ್ಯಾಲ್ಸಿಯಂ ಅಧಿಕವಿರುವುದರಿಂದ ಚಳಿಗಾಲದಲ್ಲಿ ಬಿಳಿ ಎಳ್ಳನ್ನು ಹೆಚ್ಚಾಗಿ ತಿನ್ನುವ ಬದಲು, ಕಪ್ಪು ಎಳ್ಳು ಲಡ್ಡು ಮತ್ತು ಚಿಕ್ಕಿಗಳನ್ನು ತಿನ್ನುವುದು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Sore Throat | ಚಳಿಗಾಲದಲ್ಲಿ ಕಾಡುವ ಗಂಟಲು ನೋವು ಸಮಸ್ಯೆಗೆ ಸುಲಭ ಮನೆಮದ್ದುಗಳು

Vijayaprabha Mobile App free

ಹೆಚ್ಚು ಪೋಷಕಾಂಶ

ಕಪ್ಪು ಎಳ್ಳು ಬಿಳಿ ಎಳ್ಳಿಗಿಂತ ಸ್ವಲ್ಪ ಹೆಚ್ಚು ಪೋಷಕಾಂಶಗಳನ್ನು ಹೊಂದಿದ್ದು, ಕಪ್ಪು ಎಳ್ಳು ಚಿಪ್ಪನ್ನು ಹೊಂದಿರುವ ಕಾರಣ. ಇದು ಕೆಲವು ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದ್ದು, ಕಪ್ಪು ಎಳ್ಳು ಬಿಳಿ ಎಳ್ಳಿಗಿಂತ ಸ್ವಲ್ಪ ಹೆಚ್ಚು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ.

ಅರೋಗ್ಯಕರ ದೇಹ

ಕಪ್ಪು ಎಳ್ಳು ಹೃದಯ ಸೇರಿದಂತೆ ಇತರ ಅಂಗಗಳನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ಮೆಗ್ನಿಸಿಯಮ್, ರಂಜಕ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.

ಇದನ್ನೂ ಓದಿ: Walking | ವಾಕಿಂಗ್‌ನಿಂದ ಆಗುವ ಆರೋಗ್ಯ ಲಾಭಗಳು

ರೋಗನಿರೋಧಕ ಶಕ್ತಿ ವೃದ್ಧಿ

ಇನ್ನು, ಸೋಂಕು ಅಥವಾ ಇತರ ಕಾಯಿಲೆಗಳನ್ನು ತಪ್ಪಿಸಲು ಚಳಿಗಾಲದಲ್ಲಿ ಕಪ್ಪು ಎಳ್ಳನ್ನು ಹೆಚ್ಚು ಸೇವಿಸುವುದರಿಂದ, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಎಳ್ಳಿನ ಸೇವನೆಯಿ೦ದ ಚಯಾಪಚಯ ಕ್ರಿಯೆಯೂ ನಿಯಂತ್ರಣದಲ್ಲಿರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.