Vegetables : ಶೀತ ವಾತಾವರಣದಲ್ಲಿ, ನಿಮ್ಮ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ, ಅಂದರೆ ರಕ್ತದ ಹರಿವು ನಿರ್ಬಂಧಿಸಲ್ಪಡುತ್ತದೆ ಮತ್ತು ನಿಮ್ಮ ಹೃದಯವು ದೇಹದಾದ್ಯಂತ ರಕ್ತವನ್ನು ಪಂಪ್ ಮಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ.
ಪರಿಣಾಮವಾಗಿ, ನಿಮ್ಮ ರಕ್ತದೊತ್ತಡ ಮತ್ತು ಹೃದಯ ಬಡಿತ ಹೆಚ್ಚಾಗಬಹುದು ಮತ್ತು ನಿಮ್ಮ ರಕ್ತ ಪರಿಚಲನೆ ನಿಧಾನವಾಗಬಹುದು. ಇದು ದೇಹದ ಉಷ್ಣತೆಯಲ್ಲಿ ಇಳಿಕೆಗೆ ಕಾರಣವಾಗುತ್ತದೆ ಮತ್ತು ಶೀತಕ್ಕೆ ಕಾರಣವಾಗುತ್ತದೆ. ಕಾಲೋಚಿತ ಪರಿಣಾಮಗಳನ್ನು ನಿವಾರಿಸಲು, ನಿಮ್ಮನ್ನು ಬೆಚ್ಚಗಾಗಲು ಸಹಾಯ ಮಾಡುವ ಕೆಲವು ತರಕಾರಿಗಳಿವೆ.
ಇದನ್ನೂ ಓದಿ: Sesame Seeds | ಚಳಿಗಾಲದಲ್ಲಿ ಕಪ್ಪು ಅಥವಾ ಬಿಳಿ ಎಳ್ಳು ಯಾವುದು ಉತ್ತಮ?
Vegetables : ಚಳಿಗಾಲದಲ್ಲಿ ತಪ್ಪದೆ ಸೇವಿಸಬೇಕಾದ ಟಾಪ್ 5 ತರಕಾರಿಗಳು
- ಮೂಲಂಗಿ
- ಸಿಹಿಗೆಣಸು
- ಕ್ಯಾರೆಟ್
- ಬೀಗ್ರೂಟ್
- ಹಸಿರು ಬಟಾಣಿ
1. ಮೂಲಂಗಿ
ಮೂಲಂಗಿ ಚಳಿಗಾಲದಲ್ಲಿ ಹೇರಳವಾಗಿ ದೊರೆಯುವ ತರಕಾರಿ. ಇದನ್ನು ಸಾಂಬಾರ್, ಸಲಾಡ್, ಚಟ್ಟಿ, ಉಪ್ಪಿನಕಾಯಿ, ಕೋಫ್ತಾ, ಜ್ಯೂಸ್ ಸೇರಿದಂತೆ ಇನ್ನಿತರ ಅಡುಗೆಗಳಲ್ಲಿ ಬಳಸಹುದು. ಮೂಲಂಗಿ ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ದೇಹಕ್ಕೆ ಅಗತ್ಯವಿರುವ ನಾರಿನ೦ಶದ ಸಮೃದ್ಧ ಮೂಲವಾಗಿದೆ.
2. ಸಿಹಿಗೆಣಸು
ಸಿಹಿಗೆಣಸು ಕರುಳಿನ ಬ್ಯಾಕ್ಟಿರಿಯಾಗಳಿಗೆ ಉತ್ತಮ ಆಹಾರದ ಮೂಲವಾಗಿದೆ. ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಗುಣಲಕ್ಷಣಗಳು ವಿಟಮಿನ್ ಎ ಮತ್ತು ಸಿ ಆಗಿ ವಿಕಸನಗೊಳ್ಳುತ್ತದೆ, ಇದು ರೋಗ ನೀರೋಧಕ ಶಕ್ತಿ ಮತ್ತು ದೇಹದ ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Sore Throat | ಚಳಿಗಾಲದಲ್ಲಿ ಕಾಡುವ ಗಂಟಲು ನೋವು ಸಮಸ್ಯೆಗೆ ಸುಲಭ ಮನೆಮದ್ದುಗಳು
3. ಕ್ಯಾರೆಟ್
ಕ್ಯಾರೆಟ್, ಬೀಟಾ-ಕ್ಯಾರೋಟಿನ್‌ನ ಅತ್ಯುತ್ತಮ ಮೂಲವಾಗಿದ್ದು, ಅದನ್ನು ವಿಟಮಿನ್ ಎ ಆಗಿ ಪರಿವರ್ತಿಸುವುದಲ್ಲದೆ, ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡಲಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಉತ್ಕರ್ಷಣ ನಿರೋಧಕ ಕ್ಯಾರೊಟಿನ್‌ಗಳಿಂದ ಕೂಡಿದೆ. ಅಲ್ಲದೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
4. ಬೀಗ್ರೂಟ್
ಬೀಗ್ರೂಟ್ ಹಲವಾರು ಪೋಷಕಾಂಶಗಳಿಂದ ಕೂಡಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಉತ್ಕರ್ಷಣ ನಿರೋಧಕಗಳು ಮತ್ತು ಡಿಟಾಕ್ಸಿಫೈಂಗ್ ಎಜೆಂಟ್ ಅನ್ನು ಹೊಂದಿದೆ, ಜೊತೆಗೆ ಚಳಿಗಾಲದಲ್ಲಿ ಬೀಟ್ರೋಟ್ ಚರ್ಮದ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ.
ಇದನ್ನೂ ಓದಿ: Walking | ವಾಕಿಂಗ್‌ನಿಂದ ಆಗುವ ಆರೋಗ್ಯ ಲಾಭಗಳು
5. ಹಸಿರು ಬಟಾಣಿ
ಹಸಿರು ಬಟಾಣಿ ರುಚಿಕರ ಮಾತ್ರವಲ್ಲದೆ ಪೌಷ್ಟಿಕಾಂಶ ಮತ್ತು ನಾರಿನ ಅಂಶ ಇರುವ ಅಹಾರವಾಗಿದೆ. ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಬಳಸಿದರೆ ಆರೋಗ್ಯ ವೃದ್ಧಿಸುತ್ತದೆ. ಇದು ದೇಹಕ್ಕೆ ಕಬ್ಬಿಣಾಂಶ ಒದಗಿಸುವ ಉತ್ತಮ ಮೂಲವಾಗಿದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.