Magha Gupta Navratri | ಮಾಘ ಗುಪ್ತ ನವರಾತ್ರಿ ಕಲಶ ಪ್ರತಿಷ್ಠಾಪನೆ, ಪೂಜಾ ವಿಧಾನ

Magha Gupta Navratri : ಹಿ೦ದೂ ಧರ್ಮದಲ್ಲಿ, ನವರಾತ್ರಿಯ ದಿನಗಳನ್ನು ಅತ್ಯಂತ ಪವಿತ್ರ & ಮ೦ಗಳಕರವೆ೦ದು ಪರಿಗಣಿಸಲಾಗುತ್ತದೆ. ಒ೦ದು ವರ್ಷದಲ್ಲಿ 4 ನವರಾತ್ರಿಗಳಿದ್ದು, 2 ಗುಪ್ತ ನವರಾತ್ರಿ & 2 ಪ್ರತ್ಯಕ್ಷ ನವರಾತ್ರಿ. ಗುಪ್ತ…

Magha gupta navratri Kalash Installation, Puja Method

Magha Gupta Navratri : ಹಿ೦ದೂ ಧರ್ಮದಲ್ಲಿ, ನವರಾತ್ರಿಯ ದಿನಗಳನ್ನು ಅತ್ಯಂತ ಪವಿತ್ರ & ಮ೦ಗಳಕರವೆ೦ದು ಪರಿಗಣಿಸಲಾಗುತ್ತದೆ. ಒ೦ದು ವರ್ಷದಲ್ಲಿ 4 ನವರಾತ್ರಿಗಳಿದ್ದು, 2 ಗುಪ್ತ ನವರಾತ್ರಿ & 2 ಪ್ರತ್ಯಕ್ಷ ನವರಾತ್ರಿ. ಗುಪ್ತ ನವರಾತ್ರಿಯ ( Magha Gupta Navratri) ಉಪವಾಸವನ್ನು ಮಾಘ & ಆಷಾಢ ಮಾಸಗಳಲ್ಲಿ ಆಚರಿಸಲಾಗುತ್ತದೆ ಹಾಗೂ ದುರ್ಗಾ ಮಾತೆಯನ್ನು ರಹಸ್ಯವಾಗಿ ಪೂಜಿಸಲಾಗುತ್ತದೆ.

ಇದನ್ನೂ ಓದಿ: Pushya Sankashta Chaturthi | ಪುಷ್ಯ ಸಂಕಷ್ಟ ಚತುರ್ಥಿ ಶುಭ ಮುಹೂರ್ತ, ಪೂಜೆ ವಿಧಾನ

ಗುಪ್ತ ನವರಾತ್ರಿ ಯಾವಾಗ? (When is Gupta Navratri)

Magha Gupta Navratri

Vijayaprabha Mobile App free

ಪ೦ಚಾ೦ಗದ ಪ್ರಕಾರ, ಈ ವರ್ಷ ಮಾಘ ಗುಪ್ತ ನವರಾತ್ರಿಯು ಜನವರಿ 30 ರಂದು ಪ್ರಾರಂಭವಾಗಿ, ಫೆಬ್ರವರಿ 7 ರಂದು ಕೊನೆಗೊಳ್ಳುತ್ತದೆ. ಜ. 30 ರಂದು ಕಲಶ ಸ್ಥಾಪನೆ ಬೆಳಿಗ್ಗೆ 9.25 ಕ್ಕೆ ಪ್ರಾರಂಭವಾಗಿ, ಬೆಳಗ್ಗೆ 10.46 ರವರೆಗೆ ಈ ಶುಭ ಮುಹೂರ್ತ ನಡೆಯಲಿದೆ. 2 ನೇ ಶುಭ ಮುಹೂರ್ತವು ಮಧ್ಯಾಹ್ನ 12:13 ರಿಂದ 12:56 ರವರೆಗೆ ಇರುತ್ತದೆ.

ಇದನ್ನೂ ಓದಿ: Rashi bhavishya | ಮಂಗಳವಾರದ ರಾಶಿ ಭವಿಷ್ಯ , 21 ಜನವರಿ 2025

ಮಾಘ ಗುಪ್ತ ನವರಾತ್ರಿ ಕಲಶ ಪ್ರತಿಷ್ಠಾಪನೆ ಹೇಗೆ ? (Magha Gupta Navratri Kalash Installation)

  • ಗುಪ್ತ ನವರಾತ್ರಿಯ ಮೊದಲ ದಿನ ಈಶಾನ್ಯ
  • ಮೂಲೆಯಲ್ಲಿ ಮಣ್ಣಿನ ಕಲಶ ಸ್ಥಾಪಿಸಿ ಮೊದಲಿಗೆ, ಸ್ವಲ್ಪ ಮಣ್ಣು & ಬಾರ್ಲಿಯನ್ನು ಕಲಶದಲ್ಲಿ ಹಾಕಬೇಕು
  • ಮಣ್ಣಿನ ಪದರದ ಮೇಲೆ ನೀರು ಚಿಮುಕಿಸಬೇಕು.
  • ಮಡಕೆಯನ್ನು ಮೇಲ್ಬಾಗದವರೆಗೆ ಮಣ್ಣಿನಿಂದ ತುಂಬಿಸಿ
  • ನಂತರ ಕೆಂಪು ಬಟ್ಟೆ ಮೇಲೆ ಕಲಶವನ್ನು ಸ್ಥಾಪಿಸಿ ಭಕ್ತಿಯಿಂದ ಪೂಜಿಸಿ
  • ಕಲಶದ ಮೇಲೆ ಚ೦ದನ್ ಸ್ವಸ್ತಿಕವನ್ನು ಮಾಡಬೇಕು.

ಇದನ್ನೂ ಓದಿ: Rashi bhavishya | ಸೋಮವಾರದ ರಾಶಿ ಭವಿಷ್ಯ, 20 ಜನವರಿ 2025

ಮಾಘ ಗುಪ್ತ ನವರಾತ್ರಿ ಪೂಜಾ ವಿಧಾನ (Magha Gupta Navratri Puja Method)

  • ಈ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಮನೆ ಸ್ವಚ್ಛಗೊಳಿಸಿ
  • ಬಳಿಕ ತಾಯಿಯ ವಿಗ್ರಹ & ಚಿತ್ರವನ್ನು ಇಡಬೇಕು
  • ಕಲಶವನ್ನು ಶುಭ ಮುಹೂರ್ತದಲ್ಲಿ ಸ್ಥಾಪಿಸಬೇಕು.
  • ದೇಸಿ ತುಪ್ಪದಿಂದ ಮಾಡಿದ ದೀಪವನ್ನು ಹಚ್ಚಿ, ತಾಯಿಗೆ ಕೆಂಪು ಹೂವು ಅರ್ಪಿಸಿ
  • ಪಂಚಾಮೃತ, ತೆಂಗಿನಕಾಯಿ, ಹಣ್ಣುಗಳು & ಸಿಹಿತಿಂಡಿಗಳನ್ನು ಅರ್ಪಿಸಿ

ದುರ್ಗಾ ದೇವಿಯ ರಹಸ್ಯ ಪೂಜೆ

ಗುಪ್ತ ನವರಾತ್ರಿ ಅಘೋರಿಗಳಿಗೆ, ಸಾಧುಗಳಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದೇ ಸಮಯದಲ್ಲಿ ಅವರು ಮಂತ್ರ & ತಂತ್ರದ ಸಾಧನೆಗಾಗಿ ರಹಸ್ಯವಾಗಿ ದೇವಿಯನ್ನು ಪೂಜಿಸುತ್ತಾರೆ. ತಮ್ಮ ಬಯಕೆಗಳ ಈಡೇರಿಕೆಗಾಗಿ & ದುಃಖದಿಂದ ಪರಿಹಾರ ಕಂಡುಕೊಳ್ಳಲು ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ಇನ್ನು, ನಂಬಿಕೆಗಳ ಪ್ರಕಾರ, ದುರ್ಗಾ ದೇವಿಯ ಪೂಜೆಯನ್ನು ಹೆಚ್ಚು ರಹಸ್ಯವಾಗಿ ಮಾಡಿದಷ್ಟು ಪೂಜೆಯ ಫಲಿತಾಂಶಗಳು ಬೇಗನೆ ಈಡೇರುತ್ತವೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.