Muscle cramps : ಸ್ನಾಯು ಸೆಳೆತವು ಒಂದು ಅಥವಾ ಹೆಚ್ಚಿನ ಸ್ನಾಯುಗಳ ಹಠಾತ್, ಅನಿರೀಕ್ಷಿತ ಬಿಗಿಗೊಳಿಸುವಿಕೆಯಾಗಿದೆ. ಕೆಲವೊಮ್ಮೆ ಚಾರ್ಲಿ ಹಾರ್ಸ್ ಎಂದು ಕರೆಯಲ್ಪಡುವ ಸ್ನಾಯು ಸೆಳೆತವು ತುಂಬಾ ನೋವಿನಿಂದ ಕೂಡಿರುತ್ತದೆ. ವ್ಯಾಯಾಮ ಮಾಡುವುದು ಅಥವಾ ಕಷ್ಟಪಟ್ಟು ಕೆಲಸ ಮಾಡುವುದು, ವಿಶೇಷವಾಗಿ ಶಾಖದಲ್ಲಿ, ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು. ಕೆಲವು ಔಷಧಿಗಳು ಮತ್ತು ಕಾಯಿಲೆಗಳು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು.
ಸ್ನಾಯು ಸೆಳೆತಗಳು ಸಾಮಾನ್ಯವಾಗಿ ಹಾನಿಕಾರಕವಲ್ಲ. ಸ್ವ-ಆರೈಕೆ ಕ್ರಮಗಳು ಹೆಚ್ಚಿನ ಸ್ನಾಯು ಸೆಳೆತಗಳಿಗೆ ಚಿಕಿತ್ಸೆ ನೀಡಬಹುದು.
Muscle cramps : ಸ್ನಾಯು ಸೆಳೆತಕ್ಕೆ ಇಲ್ಲಿದೆ ಮನೆಮದ್ದುಗಳು
- ಎಪ್ಸಂ ಉಪ್ಪು
- ಆಪಲ್ ಸೈಡರ್ ವಿನೆಗರ್
- ಲೆಮನ್ ಗ್ರಾಸ್
- ಚೆರ್ರಿ ಹಣ್ಣು
- ತಂಪು ಶಾಖ
ಇದನ್ನೂ ಓದಿ: Protein shakes | ಪ್ರೋಟಿನ್ ಶೇಕ್ ಸೇವನೆ ಅತಿಯಾದರೆ ಎಷ್ಟೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ?
1. ಎಪ್ಸಂ ಉಪ್ಪು
ಒಂದು ಕಪ್ ಎಪ್ಸಂ ಉಪ್ಪನ್ನು ಒಂದು ಬಕೆಟ್ ಬೆಚ್ಚಗಿನ ನೀರಿನಲ್ಲಿ ಬೆರೆಸಿ. ಬಳಿಕ ನೋಯುತ್ತಿರುವ ಸ್ನಾಯುಗಳನ್ನು ಮುಳುಗಿಸಿ ನೀರು ತಣ್ಣಗಾಗುವವರೆಗೂ ಹಾಗೇ ಇಟ್ಟುಕೊಳ್ಳಿ. ಇದರಿಂದ ಉತ್ತಮ ಪರಿಣಾಮ ಪಡೆಯಲು ವಾರಕ್ಕೆ ಮೂರು ಬಾರಿ ಮಾಡಬಹುದು. ಸ್ನಾಯುಗಳಲ್ಲಿ ಸಂಗ್ರಹಗೊಂಡಿದ್ದ ನೀರನ್ನು ಮೆಗ್ನಿಶಿಯಮ್ ಹೀರಿಕೊಳ್ಳುವ ಮೂಲಕ ನೋವನ್ನು ಇಲ್ಲವಾಗಿಸುತ್ತದೆ.
2. ಆಪಲ್ ಸೈಡರ್ ವಿನೆಗರ್
ನೋಯುತ್ತಿರುವ ಸ್ನಾಯುಗಳಿಗೆ ಆಪಲ್ ಸೈಡರ್ ವಿನೆಗರ್ ಕೂಡಾ ಉತ್ತಮ ಪರಿಹಾರವಾಗಿದೆ. ಸುಮಾರು ಒಂದು ಚಮಚ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ ಅಥವಾ ನೋವಿರುವ ಭಾಗಕ್ಕೆ ಹಚ್ಚಿಕೊಳ್ಳಬಹುದು. ಇದರ ಉರಿಯೂತ ನಿವಾರಕ ಮತ್ತು ಕ್ಷಾರೀಯ ಗುಣಗಳಿಂದ ಸ್ನಾಯುಗಳ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ.
3. ಲೆಮನ್ ಗ್ರಾಸ್
ಸ್ನಾಯುಗಳ ನೋವಿಗೆ ಲೆಮನ್ ಗ್ರಾಸ್ ಅಥವಾ ಪುದೀನಾ ತೈಲಗಳನ್ನು ಪ್ರಯತ್ನಿಸಬಹುದು. ಕೊಬ್ಬರಿ ಎಣ್ಣೆ ಅಥವಾ ನಿಮ್ಮ ಆಯ್ಕೆಯ ಯಾವುದೇ ಎಣ್ಣೆಯಲ್ಲಿ ಒಂದೆರಡು ತೊಟ್ಟು ಈ ತೈಲಗಳನ್ನು ಬೆರೆಸಿ ನೋವಿರುವ ಭಾಗಕ್ಕೆ ನಯವಾದ ಮಸಾಜ್ ಮಾಡುವ ಮೂಲಕ ಹಚ್ಚಿಕೊಂಡರೆ ನೋವು ಉಪಶಮನವಾಗುತ್ತದೆ.
ಇದನ್ನೂ ಓದಿ: Constipation | ಚಳಿಗಾಲದಲ್ಲಿ ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಇಲ್ಲದೆ ಸುಲಭ ಪರಿಹಾರ
4. ಚೆರ್ರಿ ಹಣ್ಣು
ಟಾರ್ಟ್ ಚೆರ್ರಿ ಹಣ್ಣು ಸ್ನಾಯು ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸ್ನಾಯುಗಳ ನೋವಿನಿ೦ದ ಪರಿಹಾರ ಪಡೆಯಲು ಟಾರ್ಟ್ ಚೆರ್ರಿ ಜ್ಯೂಸ್ ಪರಿಣಾಮಕಾರಿಯಾಗಿದೆ. ಅಲ್ಲದೆ ನೀವು ಇದನ್ನು ಸ್ಕೂದಿ ಅಥವಾ ಮಿಲ್ಕ್ಶೇಕ್‌ನಂತಹ ಯಾವುದೇ ಪಾನೀಯದಲ್ಲಿ ಬೆರೆಸಿ ಸೇವಿಸಬಹುದು.
5. ತಂಪು ಶಾಖ
ಸ್ನಾಯುಗಳಲ್ಲಿನ ಸೆಳೆತಕ್ಕೆ ತ೦ಪು ಶಾಖ ನೀಡಬಹುದು, ಇದರಿಂದ ನೋವು ತಗ್ಗುವುದು ಮತ್ತು ಸ್ನಾಯುಗಳಲ್ಲಿ ಉರಿಯೂತ ಕಡಿಮೆಯಾಗಿ ಆರಾಮ ಸಿಗುವುದು. ಒಮ್ಮೆಗೆ 15 ನಿಮಿಷ ಕಾಲ ತಂಪು ಶಾಖ ನೀಡಬಹುದು. ಅಲ್ಲದೆ ಸ್ನಾಯುಗಳಿಗೆ ಆರಾಮ ಸಿಗಲು ತಣ್ಣೀರಿನ ಸ್ನಾನ ಮಾಡಬಹುದು.