Immune System | ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ಎದುರಾಗುವ ಆರೋಗ್ಯ ಸಮಸ್ಯೆಗಳು ಯಾವುವು? ಇಲ್ಲಿದೆ ಮಾಹಿತಿ

Immune System : ನಮ್ಮ ದೇಹವನ್ನು ಸಾಂಕ್ರಾಮಿಕ ಜೀವಿಗಳಿಂದ ರಕ್ಷಿಸಲು ರೋಗನಿರೋಧಕ ಶಕ್ತಿ (Immune System ) ಸಹಾಯ ಮಾಡುತ್ತದೆ.  ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಇರದಿದ್ದರೆ ನಮ್ಮ ದೇಹಕ್ಕೆ ಹಲವಾರು ರೀತಿಯ ಬ್ಯಾಕ್ಟೀರಿಯಾ,…

Immune System

Immune System : ನಮ್ಮ ದೇಹವನ್ನು ಸಾಂಕ್ರಾಮಿಕ ಜೀವಿಗಳಿಂದ ರಕ್ಷಿಸಲು ರೋಗನಿರೋಧಕ ಶಕ್ತಿ (Immune System ) ಸಹಾಯ ಮಾಡುತ್ತದೆ. 

ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಇರದಿದ್ದರೆ ನಮ್ಮ ದೇಹಕ್ಕೆ ಹಲವಾರು ರೀತಿಯ ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರ ರೋಗಕಾರಕಗಳು ಆಕ್ರಮಿಸಲಿದ್ದು, ಜೀವಿಯೊಂದರ ರೋಗನಿರೋಧಕ ವ್ಯವಸ್ಥೆಯು ಮುಖ್ಯವಾಗಿ ಎರಡು ಬಗೆಯದ್ದಾಗಿರುತ್ತದೆ. ಮೊದಲನೆಯದು ದೇಹದಿಂದ, ಪ್ರಕೃತಿಯಿಂದ ಬಂದ ಸ್ವಾಭಾವಿಕ ರೋಗನಿರೋಧಕ ಶಕ್ತಿಯಾದರೆ ಮತ್ತೊಂದು ಹೊರಗಿನ ಅಂಶಗಳಿಂದ ದೇಹಕ್ಕೆ ಬರುವ ಕೃತಕ ರೋಗನಿರೋಧಕ ಶಕ್ತಿ.

ಇದನ್ನೂ ಓದಿ: Muscle cramps | ಸ್ನಾಯು ಸೆಳೆತಕ್ಕೆ ಇಲ್ಲಿದೆ ಮನೆಮದ್ದುಗಳು

Vijayaprabha Mobile App free

Immune System ದುರ್ಬಲಗೊಳಿಸುವ ಆಹಾರಗಳು ಯಾವುವು? ಇಲ್ಲಿದೆ ಮಾಹಿತಿ

Immune System

ಪ್ರತಿರಕ್ಷಣಾ ವ್ಯವಸ್ಥೆ ಬಲವಾಗಿದ್ದರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯ. ಕೆಲವೊಂದು ಆಹಾರಗಳ ಅತಿಯಾದ ಸೇವನೆಯು ರೋಗನಿರೋಧಕ ಶಕ್ತಿಯನ್ನು ನಿಧಾನಗೊಳಿಸುತ್ತದೆ. ಹೌದು, ಸಂಸ್ಕರಿಸಿದ ಆಹಾರಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಹೆಚ್ಚಿನ ಮಟ್ಟದ ಆಲ್ಕೋಹಾಲ್ ಸೇವನೆಯು ಪ್ರತಿರಕ್ಷಣಾ ಕಾರ್ಯವನ್ನು ನಿಗ್ರಹಿಸುತ್ತದೆ, ಇದು ಸೋಂಕುಗಳಿಗೆ ಕೂಡಾ ಕಾರಣವಾಗುತ್ತದೆ. ಹುರಿದ ಆಹಾರಗಳು, ಅಧಿಕ ಸೋಡಿಯಂ ಆಹಾರಗಳು, ಅತಿಯಾದ ಕೆಫೀನ್ ಕೂಡಾ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

ಇದನ್ನೂ ಓದಿ: Protein shakes | ಪ್ರೋಟಿನ್ ಶೇಕ್ ಸೇವನೆ ಅತಿಯಾದರೆ ಎಷ್ಟೆಲ್ಲಾ ಸಮಸ್ಯೆ ಆಗುತ್ತೆ ಗೊತ್ತಾ?

ಮಕ್ಕಳ Immune System ಹೆಚ್ಚಿಸುವ ಆಯುರ್ವೇದ ಗಿಡಮೂಲಿಕೆಗಳಿವು

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೋಷಕರು ಆಯುರ್ವೇದ ಗಿಡಮೂಲಿಕೆಗಳನ್ನು ಮಕ್ಕಳಿಗೆ ಕೊಡಬಹುದು. ಅದರಲ್ಲಿ ಪ್ರಮುಖವಾದ್ದು ತುಳಸಿ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಅಡಗಿದೆ. ಹಾಗಾಗಿ ಮಕ್ಕಳು ತುಳಸಿಯಿಂದ ರೋಗ ನಿರೋಧಕ ಶಕ್ತಿಯನ್ನು ಪಡೆಯಬಹುದು. ಮಕ್ಕಳ ಮಾನಸಿಕ ಆರೋಗ್ಯಕ್ಕೆ ಒಂದೆಲಗ ಗಿಡಮೂಲಿಕೆ ಎನ್ನಬಹುದು. ಅಶ್ವಗಂಧವನ್ನು ಹಾಲಿನಲ್ಲಿ ಬೆರೆಸಿ ಕುಡಿಯಲು ಕೊಟ್ಟರೆ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಆದ್ರೆ ಎದುರಾಗುವ ಆರೋಗ್ಯ ಸಮಸ್ಯೆಗಳಿವು!

  • ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬೇಗನೆ ಸುಸ್ತಾಗುತ್ತದೆ. ಇವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳಲುತ್ತಾರೆ.
  • ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿದ್ದರೆ ಆಗಾಗ ಅತಿಸಾರ, ಗ್ಯಾಸ್ಟ್ರಿಕ್, ಮಲಬದ್ಧತೆ ಸಮಸ್ಯೆಗಳು ಕಾಡುತ್ತವೆ. ಇವರಿಗೆ ಗಾಯಗಳು ಬೇಗನೆ ಗುಣವಾಗುವುದಿಲ್ಲ.
  • ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿದ್ದರೆ ಹೊಸ ಚರ್ಮ ಬೆಳೆಯಲು ಕೂಡ ನಿಧಾನವಾಗಲಿದ್ದು, ಆಗಾಗ ಸೋಂಕು ಬಾಧಿಸುತ್ತದೆ.
  • ಅಲರ್ಜಿ, ಆಸ್ತಮಾ ಮತ್ತು ಇಮ್ಯುನೊಲಾಜಿ ಅಂತಹ ಸಮಸ್ಯೆಗಳು ದೇಹದಲ್ಲಿ ರೋಗನಿರೋಧಕ ಕೊರತೆಯ ಚಿಹ್ನೆಗಳಾಗಿವೆ.

ಇದನ್ನೂ ಓದಿ: Constipation | ಚಳಿಗಾಲದಲ್ಲಿ ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಇಲ್ಲದೆ ಸುಲಭ ಪರಿಹಾರ

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನೈಸರ್ಗಿಕ ಆಂಟಿ ಬಯೋಟಿಕ್‌ಗಳಿವು!

ಯಾವ ವ್ಯಕ್ತಿ ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾನೆಯೋ ಅವನು ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಂದ ದೂರ ಉಳಿಯುತ್ತಾನೆ. ನಿರ್ದಿಷ್ಟವಾಗಿ ಕೆಲವು ಆಹಾರಗಳು ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ರೋಗಗಳ ವಿರುದ್ಧ ಹೋರಾಡಲು ಪ್ರತಿಜೀವಕಗಳನ್ನು ಅವಲಂಬಿಸುವುದಕ್ಕಿಂತ ನೈಸರ್ಗಿಕವಾಗಿ ಪ್ರತಿಜೀವಕಗಳನ್ನು ಬಳಸುವುದು ಉತ್ತಮ. ಮನೆಯಲ್ಲಿಯೇ ಸಿಗುವ ತುಳಸಿ, ಜೇನು, ಮೊಸರು, ನಿಂಬೆ ಕಾಯಿ, ಅರಿಶಿಣ, ಗ್ರೀನ್ ಟೀ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕೃಪೆ – ವಿಜಯ ಕರ್ನಾಟಕ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.