ATM robbery case | ಮೃತ ಸಿಬ್ಬಂದಿ ಕುಟುಂಬಕ್ಕೆ 18 ಲಕ್ಷ ರೂ ಪರಿಹಾರ ಘೋಷಣೆ!

ATM robbery case : ಎಸ್.ಬಿ.ಐ ಬ್ಯಾಂಕ್ ಎಟಿಎಂ ದರೋಡೆ ದಾಳಿಯಲ್ಲಿ ಕೊಲೆಯಾದ ಭದ್ರತಾ ಸಿಬ್ಬಂದಿ ಗಿರಿ ವೆಂಕಟೇಶ್ ಅವರ ಬೇಮಳಖೇಡ್ ಮನೆಗೆ ಸಚಿವ ಈಶ್ವರ್ ಖಂಡ್ರೆ (Ishwar Khandre) ಭೇಟಿ ನೀಡಿದ್ದು, ಒಟ್ಟು…

ATM robbery case Bidar

ATM robbery case : ಎಸ್.ಬಿ.ಐ ಬ್ಯಾಂಕ್ ಎಟಿಎಂ ದರೋಡೆ ದಾಳಿಯಲ್ಲಿ ಕೊಲೆಯಾದ ಭದ್ರತಾ ಸಿಬ್ಬಂದಿ ಗಿರಿ ವೆಂಕಟೇಶ್ ಅವರ ಬೇಮಳಖೇಡ್ ಮನೆಗೆ ಸಚಿವ ಈಶ್ವರ್ ಖಂಡ್ರೆ (Ishwar Khandre) ಭೇಟಿ ನೀಡಿದ್ದು, ಒಟ್ಟು 18 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

ಹೌದು, ಈ ಕುರಿತು ತಮ್ಮ X ಖಾತೆಯಲ್ಲಿ ಮಾಹಿತಿ ನೀಡಿರುವ ಸಚಿವ ಈಶ್ವರ್ ಖಂಡ್ರೆ, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸಮಗ್ರ ಪರಿಹಾರ ಒದಗಿಸಲು ಬದ್ಧವಾಗಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ₹8 ಲಕ್ಷ ಪರಿಹಾರ ಮತ್ತು ಹೆಚ್ಚುವರಿಯಾಗಿ ₹10 ಲಕ್ಷ, ಪಿಂಚಣಿ ಹಾಗೂ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: LIC Bima Sakhi Yojana | ಮಾಸಿಕ ₹7,000 ಗಳಿಸಬಹುದಾದ ‘ಬಿಮಾ ಸಖಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್; ಅರ್ಜಿ ಸಲ್ಲಿಕೆ ಹೇಗೆ?

Vijayaprabha Mobile App free

ATM robbery case : ಮೃತ ಸಿಬ್ಬಂದಿ ಕುಟುಂಬಕ್ಕೆ 18 ಲಕ್ಷ ರೂ. ಪರಿಹಾರ

ATM robbery case Bidar

ಇನ್ನು,  ಬೀದರ್‌ನಲ್ಲಿ ಹಾಡಹಗಲೇ ಆಗಂತುಕರು ನಡೆಸಿದ ಗುಂಡಿನ ದಾಳಿಯಲ್ಲಿ ಬ್ಯಾಂಕ್ ಸಿಬ್ಬಂದಿ ಗಿರಿ ವೆಂಕಟೇಶ್‌ ಸಾವನ್ನಪ್ಪಿದ್ದರು. ನಂತರ 83 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು. ಇದೀಗ ಸರ್ಕಾರ ಇವರ ಕುಟುಂಬದ ನೆರವಿಗೆ ಧಾವಿಸಿದೆ. ಮೃತ ಸಿಬ್ಬಂದಿಯ ಕುಟುಂಬಕ್ಕೆ ವಿಶೇಷ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಬೆನ್ನಲ್ಲೇ ಸಮಾಜಕಲ್ಯಾಣ ಇಲಾಖೆ ಸಹ ಪ್ರತ್ಯೇಕವಾಗಿ 8 ಲಕ್ಷ ರೂ. ಪರಿಹಾರ ಪ್ರಕಟಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.