Vomiting while travelling : ಮಾಡುವಾಗ ನೀವು ನೋಡುವ ಚಲನೆಯು ನಿಮ್ಮ ಒಳಗಿನ ಕಿವಿ ಗ್ರಹಿಸುವುದಕ್ಕಿಂತ ಭಿನ್ನವಾದಾಗ ಚಲನೆಯ ಕಾಯಿಲೆ ಸಂಭವಿಸುತ್ತದೆ. ಇದು ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಗೆ (Vomiting) ಕಾರಣವಾಗಬಹುದು. ಕಾರಿನಲ್ಲಿ ಅಥವಾ ರೈಲು, ವಿಮಾನ, ದೋಣಿ ಅಥವಾ ಮನೋರಂಜನಾ ಉದ್ಯಾನವನದ ಸವಾರಿಯಲ್ಲಿ ನೀವು ಚಲನೆಯ ಕಾಯಿಲೆಗೆ ಒಳಗಾಗಬಹುದು.
ಇದನ್ನೂ ಓದಿ: Ajwain water | ಓಮದ ನೀರು ಸೇವಿಸಿದರೆ ಆಗುವ ಆರೋಗ್ಯ ಲಾಭಗಳು
ಚಲನೆಯ ಕಾಯಿಲೆಗೆ ಕಾರಣವಾಗುವ ಸಂದರ್ಭಗಳನ್ನು ತಪ್ಪಿಸುವುದು ಅದನ್ನು ತಡೆಗಟ್ಟಲು ಉತ್ತಮ ಮಾರ್ಗವಾಗಿದೆ, ಆದರೆ ನೀವು ಪ್ರಯಾಣಿಸುವಾಗ ಅದು ಯಾವಾಗಲೂ ಸಾಧ್ಯವಿಲ್ಲ. ಈ ಕೆಳಗಿನ ಪರಿಹಾರಗಳು ಪ್ರಯಾಣ ಮಾಡುವಾಗ ಆಗುವ ವಾಂತಿಯನ್ನು ತಪ್ಪಿಸಲು ಅಥವಾ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.
Vomiting while travelling : ಪ್ರಯಾಣ ಮಾಡುವಾಗ ಆಗುವ ವಾಂತಿಗೆ ಸುಲಭ ಪರಿಹಾರ
- ಮುಂಭಾಗದಲ್ಲಿ ಕುಳಿತುಕೊಳ್ಳಿ
- ಲವಂಗ
- ಗಮನ ಬೇರೆಡೆ ಇರಲಿ
- ತಿನ್ನುವಾಗ ಎಚ್ಚರವಿರಲಿ
- ಮೊಬೈಲ್ ಬಳಕೆ ಬೇಡ
1. ಮುಂಭಾಗದಲ್ಲಿ ಕುಳಿತುಕೊಳ್ಳಿ
ಪ್ರಯಾಣ ಮಾಡುವಾಗ ವಾಕರಿಕೆ ಮತ್ತು ವಾಂತಿಯನ್ನು ತಪ್ಪಿಸಲು, ವಾಹನದ ಮುಂಭಾಗದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು. ಮು೦ಭಾಗದ ಸೀಟಿನಲ್ಲಿ ನೇರವಾಗಿ ಕುಳಿತುಕೊಂಡು, ನೀವು ರಸ್ತೆ ದಿಕ್ಕಿನ ಬದಲಾವಣೆಗಳನ್ನು ಗಮನಿಸುತ್ತಾ ಇದ್ದರೆ ವಾಕರಿಕೆ ಕಡಿಮೆಯಾಗುತ್ತದೆ.
ಇದನ್ನೂ ಓದಿ: Insomnia | ನಿದ್ರಾಹೀನತೆಯಿಂದ ದೂರವಿರಲು ಸುಲಭ ಮನೆಮದ್ದುಗಳು
2. ಲವಂಗ
ಪ್ರಯಾಣಿಸುವಾಗ ವಾಂತಿ ಹೆಚ್ಚಾಗಿ ಕಾಡುತ್ತಿದ್ದರೆ ಲವಂಗ ಪ್ರಯೋಜನಕಾರಿಯಾಗಿದೆ. ಲವಂಗವನ್ನು ಬಾಯಿಯಲ್ಲಿ ಹಾಕಿಕೊಂಡು ಅದರ ರಸ ಹೀರಬೇಕು. ಇದು ವಾ೦ತಿಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಹುಣಸೆ ಹಣ್ಣಿನ ಅಥವಾ ನಿಂಬೆಯ ಚಾಕೋಲೆಟ್‌ಗಳನ್ನು ಒಮ್ಮೆಗೆ ನು೦ಗದೆ ತಿನ್ನಬಹುದು.
3. ಗಮನ ಬೇರೆಡೆ ಇರಲಿ
ನಿಮಗೆ ವಾಕರಿಕೆ ಅನಿಸಿದರೆ, ತಾಜಾ ಗಾಳಿಯನ್ನು ಪಡೆಯಲು ಕಾರಿನ ಕಿಟಕಿಗಳನ್ನು ತೆರೆಯಿರಿ. ಅಥವಾ ಹಾಡುಗಳನ್ನು ಕೇಳುವ ಮೂಲಕ ನಿಮ್ಮ ಮನಸ್ಸನ್ನು ಬೇರೆಡೆ ಯೋಚಿಸುವಂತೆ ಮಾಡಿ. ಇಲ್ಲದಿದ್ದರೆ, ಇತರರೊಂದಿಗೆ ಮಾತನಾಡಿ.
ಇದನ್ನೂ ಓದಿ: Bladder cancer | ನಟ ಶಿವಣ್ಣನಿಗೂ ಕಾಡಿತ್ತು ಈ ಮೂತ್ರಕೋಶದ ಕ್ಯಾನ್ಸರ್!; ಲಕ್ಷಣಗಳೇನು? ಪತ್ತೆ ಹೇಗೆ?
4. ತಿನ್ನುವಾಗ ಎಚ್ಚರವಿರಲಿ
ಪ್ರಯಾಣಕ್ಕೂ ಮುನ್ನ ಅತಿಯಾಗಿ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿ೦ದ ವಾಕರಿಕೆ ಹೆಚ್ಚಾಗುತ್ತದೆ. ಹಾಗಾಗಿ ಸುಲಭವಾಗಿ ಜೀರ್ಣವಾಗುವಂತಹ ಆಹಾರವನ್ನು ಸೇವಿಸುವುದು ಉತ್ತಮ. ಪ್ರವಾಸದ ಸಮಯದಲ್ಲಿ ನಿಮಗೇನಾದರೂ ಹೆಚ್ಚು ವಾಕರಿಕೆ ಮತ್ತು ವಾಂತಿಯಾಗುತ್ತಿದ್ದರೆ ಹಣ್ಣು, ಪಾನೀಯದಂತಹ ಲಘು ಆಹಾರವನ್ನು ಮಾತ್ರ ಸೇವಿಸಿ.
5. ಮೊಬೈಲ್ ಬಳಕೆ ಬೇಡ
ಪ್ರಯಾಣಿಸುವಾಗ ಮೊಬೈಲ್ ಫೋನ್ ಬಳಸಬಾರದು ಎ೦ದು ಹೇಳಲಾಗುತ್ತದೆ. ಏಕೆ೦ದರೆ ಪ್ರಯಾಣಿಸುವಾಗ ಫೋನ್ ಬಳಸುವುದರಿಂದ ಸ್ಕಿನ್ ಮೇಲಿನ ಕ್ಷಿಪ್ರ ಚಲನೆಗಳು ನಿಮ್ಮ ಒಳಗಿನ ಕಿವಿಯಲ್ಲಿ ಗೊಂದಲ ಉಂಟು ಮಾಡಬಹುದು, ಇದು ವಾಂತಿ ಉಂಟು ಮಾಡಬಲ್ಲದು.
ಇದನ್ನೂ ಓದಿ: Vegetables | ಚಳಿಗಾಲದಲ್ಲಿ ತಪ್ಪದೆ ಸೇವಿಸಬೇಕಾದ ಟಾಪ್ 5 ತರಕಾರಿಗಳು