Ajwain water : ಓಮ ಕಾಳಿಗೆ (Ajwain) ಕ್ಯಾರಮ್ ಸೀಡ್ಸ್ ಅಥವಾ ಬಿಷಪ್ ವೀಡ್ ಎಂದೂ ಕರೆಯಲಾಗುತ್ತದೆ. ಇವುಗಳಲ್ಲಿ ಖನಿಜಗಳು ಮತ್ತು ವಿಟಾಮಿನ್‌ಗಳು ಅಪಾರಾವಾಗಿದ್ದು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಓಮವನ್ನು ನೆನೆಸಿಟ್ಟು ಆ ನೀರನ್ನು ಸೇವಿಸಿದರೆ ಈ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಮುಟ್ಟಿನ ನೋವಿಗೆ ಪರಿಹಾರ
ಓಮ ನೀರಿನ ಸೇವನೆಯು ಮುಟ್ಟಿನ ನೋವನ್ನು ಕಡಿಮೆ ಮಾಡುತ್ತದೆ. ಓಮ ಕಾಳುಗಳು ಸೆಳೆತ ಪ್ರತಿರೋಧಕ ಗುಣಗಳನ್ನು ಹೊಂದಿದ್ದು, ನೋವನ್ನು ಕಡಿಮೆ ಮಾಡಲು ನೆರವಾಗುತ್ತವೆ.
ಇದನ್ನೂ ಓದಿ: Insomnia | ನಿದ್ರಾಹೀನತೆಯಿಂದ ದೂರವಿರಲು ಸುಲಭ ಮನೆಮದ್ದುಗಳು
ಕೀಲು ನೋವು
ಓಮ ಕಾಳುಗಳ ನೀರು ನೋವು ನಿವಾರಕ ಗುಣಗಳನ್ನು ಹೊಂದಿದ್ದು ಸಂಧಿವಾತಕ್ಕೆ ಸಂಬಂಧಿಸಿದ ಕೀಲು ನೋವನ್ನು ಕಡಿ ಕೆಡಿಮೆ ಮಾಡುತ್ತದೆ. ಕೀಲುಗಳಲ್ಲಿನ ಉರಿಯೂತವನ್ನು ಕಡಿಮೆಯಾಗಿಸುತ್ತದೆ.
ಚರ್ಮದ ಆರೋಗ್ಯ
ಓಮ ಕಾಳಿನ ನೀರಿನ ಸೇವನೆಯು ಮೊಡವೆ, ಇಸುಬು ಮತ್ತು ಚರ್ಮದ ಇತರ ತೊಂದರೆಗಳನ್ನು ಕಡಿಮೆಯಾಗಿಸುವ ಮೂಲಕ ಸ್ವಚ್ಛ ಮತ್ತು ಹೊಳೆಯುವ ಚರ್ಮಕ್ಕೆ ಪೂರೆಕವಾಗುತ್ತದೆ.
ಇದನ್ನೂ ಓದಿ: Bladder cancer | ನಟ ಶಿವಣ್ಣನಿಗೂ ಕಾಡಿತ್ತು ಈ ಮೂತ್ರಕೋಶದ ಕ್ಯಾನ್ಸರ್!; ಲಕ್ಷಣಗಳೇನು? ಪತ್ತೆ ಹೇಗೆ?
ಜೀರ್ಣಕ್ರಿಯೆ ಸುಧಾರಣೆ
ಓಮ ನೀರಿನ ಸೇವನೆಯು ಜೀರ್ಣಕಾರಿ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸುವ ಮೂಲಕ ಜೀರ್ಣಕ್ರಿಯೆಯೆನ್ನು ಉತ್ತಮಗೊಳಿಸಿ ಅಜೀರ್ಣ, ಹೊಟ್ಟೆಯುಬ್ಬರ ಮತ್ತು ಮಲಬದ್ದತ್ತೆಯೆನ್ನು ಕಡಿಮೆ ಮಾಡುತ್ತದೆ.
ಉಸಿರಾಟ ತೊಂದರೆಗೆ ಪರಿಹಾರ
ಅಸ್ತಮಾ, ಬ್ರಾಂಕೈಟಿಸ್ ಮತ್ತು ಕೆಮ್ಮಿನಂತಹ ಉಸಿರಾಟದ ತೊಂದರೆಗಳಿಂದ ಬಳಲುತ್ತಿರುವ ಜನರಿಗೆ ಓಮ ಕಾಳುಗಳ ನೀರಿನ ಸೇವನೆ ಸಹಕಾರಿಯಾಗಿದೆ. ಇದು ಶ್ವಾಸನಾಳವನ್ನು ಸ್ವಚ್ಛಗೊಳಿಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Vegetables | ಚಳಿಗಾಲದಲ್ಲಿ ತಪ್ಪದೆ ಸೇವಿಸಬೇಕಾದ ಟಾಪ್ 5 ತರಕಾರಿಗಳು