Insomnia : ಮೈಂಡ್‌ಫುಲ್‌ನೆಸ್ ಧ್ಯಾನದಂತಹ ಅಭ್ಯಾಸಗಳನ್ನು ಅಭ್ಯಾಸ ಮಾಡುವುದು ಮತ್ತು ಮೆಗ್ನೀಸಿಯಮ್‌ನಂತಹ ಆಹಾರಗಳನ್ನು ತೆಗೆದುಕೊಳ್ಳುವುದರಿಂದ ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಹಾಯವಾಗುತ್ತದೆ. ಆದರೆ ನಿಮಗೆ ನಿದ್ರಾಹೀನತೆ (Insomnia) ಸಮಸ್ಯೆ ಬಗೆಹರಿಯದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು
ಇದನ್ನೂ ಓದಿ: Bladder cancer | ನಟ ಶಿವಣ್ಣನಿಗೂ ಕಾಡಿತ್ತು ಈ ಮೂತ್ರಕೋಶದ ಕ್ಯಾನ್ಸರ್!; ಲಕ್ಷಣಗಳೇನು? ಪತ್ತೆ ಹೇಗೆ?
ನಿದ್ರಾಹೀನತೆಗೆ ಮನೆಮದ್ದುಗಳು (Home Remedies for Insomnia)
- ಬೆಚ್ಚಗಿನ ಹಾಲು
- ಹರ್ಬಲ್ ಚಹಾ
- ಬೆಚ್ಚಗಿನ ನೀರಿನ ಸ್ನಾನ
- ಲ್ಯಾವೆಂಡರ್ ಎಣ್ಣೆ
- ಕಾಫಿ ಕುಡಿಯಬೇಡಿ
1. ಬೆಚ್ಚಗಿನ ಹಾಲು
ಒಂದು ಕಪ್ ಬೆಚ್ಚಗಿನ ಹಾಲಿಗೆ ಜೇನುತುಪ್ಪ ಬೆರೆಸಿ ಕುಡಿಯುವುದು ನಿದ್ರೆ ಬರಲು ಸಹಕಾರಿಯಾಗಿದೆ. ಅಲ್ಲದೆ ಅರಶಿನ ಬೆರೆಸಿದ ಹಾಲಿನ ಸೇವನೆಯಿಂದಲು ನಿದಾಹೀನತೆ ದೂರವಾಗುತ್ತದೆ. ಹಾಲಿನಲ್ಲಿರುವ ಟ್ರಿಸ್ಟೋಫಾನ್ ಅಮಿನೋ ಆಸಿಡ್ ನೈಸರ್ಗಿಕವಾಗಿ ನಿದ್ರೆ ಬರಿಸುವ ಕೆಲಸ ಮಾಡುತ್ತದೆ.
ಇದನ್ನೂ ಓದಿ: Vegetables | ಚಳಿಗಾಲದಲ್ಲಿ ತಪ್ಪದೆ ಸೇವಿಸಬೇಕಾದ ಟಾಪ್ 5 ತರಕಾರಿಗಳು
2. ಹರ್ಬಲ್ ಚಹಾ
ರಾತ್ರಿ ಮಲಗುವ ಮುನ್ನ ಹರ್ಬಲ್ ಚಹಾ ಕುಡಿಯುವುದರಿಂದ ನೀವು ಶೀಘ್ರವೇ ನಿದ್ರಿಸಬಹುದು. ಅಲ್ಲದೆ ಇದು ನಿಮ್ಮ ದೇಹವನ್ನು ಉಲ್ಲಾಸಿತವಾಗಿರಿಸುತ್ತದೆ. ಇದಲ್ಲದೆ ಪ್ಯಾಷನ್ ಫ್ಲವರ್ ಟೀ ಅಥವಾ ಕ್ಯಾಮೊಮೈಲ್ ಚಹಾವನ್ನೂ ಕೂಡ ಸೇವಿಸುವುದು ನಿದ್ರಾಹೀನತೆ ನಿವಾರಣೆಗೆ ಸಹಕಾರಿಯಾಗಿದೆ.
3. ಬೆಚ್ಚಗಿನ ನೀರಿನ ಸ್ನಾನ
ನಿಮ್ಮ ಸಂಪೂರ್ಣ ದಿನ ದಣಿವಿನಿಂದ ಕೂಡಿದ್ದರೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಕೊಳ್ಳುವುದು ಉತ್ತಮ. ಇದು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಿ ನಿದ್ರೆಗೆ ಪ್ರೇರೇಪಿಸುತ್ತದೆ. ನೀವು ನಿದ್ರಿಸುವ ಎರಡು ಗಂಟೆಯ ಮುನ್ನ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದರೆ ಒಳ್ಳೆಯದು.
ಇದನ್ನೂ ಓದಿ: Sesame Seeds | ಚಳಿಗಾಲದಲ್ಲಿ ಕಪ್ಪು ಅಥವಾ ಬಿಳಿ ಎಳ್ಳು ಯಾವುದು ಉತ್ತಮ?
4. ಲ್ಯಾವೆಂಡರ್ ಎಣ್ಣೆ
ಲ್ಯಾವೆಂಡರ್ ಎಣ್ಣೆ ನಿದ್ರೆಯನ್ನು ಉತ್ತೇಜಿಸುತ್ತದೆ. ಲ್ಯಾವೆಂಡರ್ ಸಪ್ಲಿಮೆಂಟ್‌ಗಳು ಅಥವಾ ಕೆಲವು ಡ್ರಾಪ್‌ಗಳಷ್ಟು ಎಣ್ಣೆಯನ್ನು ಕೈಗೆ ಹಾಕಿಕೊ೦ಡು ವಾಸನೆ ತೆಗೆದುಕೊಳ್ಳಿ. ಇದು ರಾತ್ರಿಯ ನಿದ್ರೆಯೊಂದಿಗೆ ಬೆಳಗ್ಗೆ ಎದ್ದ ಬಳಿಕವೂ ಚೈತನ್ಯದಿಂದ ಕೂಡಿರಲು ಸಹಾಯ ಮಾಡುತ್ತದೆ.
5. ಕಾಫಿ ಕುಡಿಯಬೇಡಿ
ರಾತ್ರಿಯ ವೇಳೆ ನಿಕೋಟಿನ್, ಕೆಫೀನ್ ಮತ್ತು ಆಸ್ಕೋಹಾಲ್ ಸೇವನೆ ಕೂಡ ನಿದ್ರೆಗೆ ತೊ೦ದರೆ ಮಾಡಲಿದ್ದು, ನಿಕೋಟಿನ್ ಮತ್ತು ಕೆಫೀನ್‌ನ ಉತ್ತೇಜಕ ಪರಿಣಾಮಗಳು ನಿದ್ರೆ ಮಾಡಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ನಿದ್ರೆಗೆ ಅಡ್ಡಿಪಡಿಸುತ್ತದೆ. ಹಾಗಾಗಿ ಮಲಗುವ ಮುನ್ನ ಕಾಫಿ ಸೇವಿಸಬೇಡಿ.