Union Budget 2025 | ಫೆಬ್ರವರಿ 1 ರಂದು ಕೇಂದ್ರ ಬಜೆಟ್‌ ಮಂಡನೆ ; ಈ 5 ಘೋಷಣೆಗಳ ಮೇಲೆ ಹೆಚ್ಚಿನ ನಿರೀಕ್ಷೆ

Union Budget 2025 : ಪ್ರಸಕ್ತ ಋತುವಿನ ಕೇಂದ್ರ ಬಜೆಟ್‌ (Union Budget) ಅಧಿವೇಶನವು ಜ.31ರಿಂದ ಆರಂಭವಾಗಲಿದ್ದು, ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಡೆಯಲಿದೆ. ನೂತನ ಸಂಸತ್ ಭವನದ ಲೋಕಸಭೆಯ…

Union Budget 2025

Union Budget 2025 : ಪ್ರಸಕ್ತ ಋತುವಿನ ಕೇಂದ್ರ ಬಜೆಟ್‌ (Union Budget) ಅಧಿವೇಶನವು ಜ.31ರಿಂದ ಆರಂಭವಾಗಲಿದ್ದು, ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಡೆಯಲಿದೆ.

ನೂತನ ಸಂಸತ್ ಭವನದ ಲೋಕಸಭೆಯ ಸಭಾಂಗಣದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಲಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಶನಿವಾರ (ಫೆಬ್ರವರಿ 1) ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಫೆ. 3 -4ರಂದು ಹಾಗೂ ರಾಜ್ಯಸಭೆಗೆ 3 ದಿನಗಳ ಅವಕಾಶ ನೀಡಲಾಗಿದೆ. ಪ್ರಧಾನಿ ಮೋದಿ ಫೆ. 6ರಂದು ಚರ್ಚೆಗೆ ಉತ್ತರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Ration card | ಪಡಿತರದಾರರಿಗೆ ಗುಡ್ ನ್ಯೂಸ್; ತಿದ್ದುಪಡಿ ಮಾಡುವುದು ಈಗ ಬಲು ಸುಲಭ!

Vijayaprabha Mobile App free

Union Budget 2025 : ಈ 5 ಘೋಷಣೆಗಳ ಮೇಲೆ ಹೆಚ್ಚಿನ ನಿರೀಕ್ಷೆ

2025 ಫೆಬ್ರವರಿ 1 ರಂದು ಮ೦ಡಿಸಲಾಗುವ ಕೇಂದ್ರ ಬಜೆಟ್‌ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು, ಐಸಿಐಸಿಐ ಬ್ಯಾಂಕ್‌ನ ಪರಿಣಿತರು ಈ ಬಜೆಟ್‌ನಲ್ಲಿ ಗಮನಹರಿಸಬಹುದಾದ 5 ವಿಷಯಗಳನ್ನು ಹೆಸರಿಸಿದ್ದಾರೆ.

1. ತೆರಿಗೆ ಇಳಿಕೆ

ತೆರಿಗೆ ಇಳಿಕೆ ವಿಶೇಷವಾಗಿ ವಾರ್ಷಿಕ ರೂ.20 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ಹೆಚ್ಚಿನ ತೆರಿಗೆ ವಿನಾಯಿತಿ ನೀಡಬೇಕೆಂದು ಉದ್ಯಮದ ಪ್ರಮುಖರು ಒತ್ತಾಯಿಸಿದ್ದಾರೆ. ಹೀಗಾಗಿ ಸರ್ಕಾರ ತೆರಿಗೆ ಇಳಿಕೆಗೆ ಮು೦ದಾಗಬಹುದು ಎನ್ನಲಾಗಿದೆ. ವೇತನ ಕಡಿಮೆ ಇರುವುದು, ಹಣದುಬ್ಬರ ಹೆಚ್ಚಿರುವುದು ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

2. ವಿತ್ತೀಯ ಕೊರತೆ ಗುರಿ

ಈ ಬಜೆಟ್‌ನಲ್ಲಿ 2025-26 ವಿತ್ತೀಯ ಕೊರತೆ ಶೇ. 4.5 ಎಂದು ಗುರಿ ನಿಗದಿ ಮಾಡಬಹುದು ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ. ಬಜೆಟ್‌ನಲ್ಲಿ ಆದಾಯ ವೆಚ್ಚದ ಬಗ್ಗೆ ಹೆಚ್ಚು ನಿಗಾ ಇರಿಸುವ ಸಾಧ್ಯತೆಯಿದೆ. ಯಾವ ಇಲಾಖೆಗೆ ಎಷ್ಟು ವೆಚ್ಚದ ಅವಶ್ಯಕತೆ ಎಂದು ನೋಡಿಕೊಂಡು ಹಣ ವಿನಿಯೋಗಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: Sania Mirza | ವಿಚ್ಛೇದನದ ಬಳಿಕ ಸಾನಿಯಾ ಮಿರ್ಜಾ ಪತಿ ಶೋಯೆಬ್ ಮಲಿಕ್‌ರಿಂದ ಪಡೆದ ಜೀವನಾಂಶ ಎಷ್ಟು?

3. PM-KISAN ಮೊತ್ತ ಹೆಚ್ಚಳ

ಕಾರ್ಮಿಕರ ಅವಶ್ಯಕತೆ ಇರುವ ಜವಳಿ ಮೊದಲಾದ ಸೆಕ್ಟರ್‌ಗೆ ಪಿಎಲ್‌ಐ ಸ್ಕಿಮ್ ಅನ್ನು ಹೆಚ್ಚು ಮುತುವರ್ಜಿಯೊಂದಿಗೆ ಮು೦ದುವರಿಸಬಹುದು. ಇದರಿಂದ ಉದ್ಯೋಗಸೃಷ್ಟಿ ಹೆಚ್ಚಾಗಲು ಸಹಾಯವಾಗುತ್ತದೆ. PM-KISAN ಸ್ಟೈಫಂಡ್ ಗಳನ್ನು ವಾರ್ಷಿಕ ರೂ.6,000 ರಿಂದ ರೂ.8,000 ಕ್ಕೆ ಹೆಚ್ಚಿಸಬೇಕು ಎನ್ನಲಾಗಿದೆ.

4. ಉದ್ಯೋಗ ಸೃಷ್ಟಿ

ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವುದು ಮತ್ತು ಆರ್ಥಿಕತೆ ಬೆಳೆಯುತ್ತಿರುವುದರಿಂದ ಹೆಚ್ಚು ಉದ್ಯೋಗಸೃಷ್ಟಿಯ ಅವಶ್ಯಕತೆ ಇದೆ. ಕೌಶಲ್ಯಾಭಿವೃದ್ಧಿ ಸ್ಕಿಮ್‌ಗಳಿಗೆ ಹೆಚ್ಚು ಗಮನ ಇರಲಿದೆ. ಗಾರ್ಮೆಂಟ್, ಪಾದರಕ್ಷೆ, ಪ್ರವಾಸೋದ್ಯಮ & ಪೀಠೋಪಕರಣ ವಲಯಗಳಲ್ಲಿ MSMEಗಳನ್ನು ಒಳಗೊಂಡಿದ್ದು, ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತವನ್ನು ಸ್ಥಾನಿಕರಿಸುವಾಗ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿವೆ.

ಇದನ್ನೂ ಓದಿ: PM Kisan Yojana | ರೈತರಿಗೆ ಸಿಹಿಸುದ್ದಿ, ಇದೇ ದಿನ ರೈತರ ಖಾತೆಗಳಿಗೆ ₹2,000!

5. ಚೈನೀಸ್ ಡಂಪಿಂಗ್

ಜಾಗತಿಕ ಮಾರುಕಟ್ಟೆಗಳಲ್ಲಿ ಚೀನಾದ ಹೆಚ್ಚುವರಿ ಸ್ಟಾಕ್ ಅನ್ನು ಡಂಪ್ ಮಾಡುವುದರಿಂದ ಭಾರತೀಯ ಕೈಗಾರಿಕೆಗಳಿಗೆ ಹಾನಿಯಾಗಿದ್ದು, ದೇಶೀಯ ವ್ಯವಹಾರಗಳನ್ನು ರಕ್ಷಿಸಲು & ನ್ಯಾಯಯುತ ಸ್ಪರ್ಧೆಯನ್ನು ಉತ್ತೇಜಿಸಲು ರಕ್ಷಣಾ ಕ್ರಮಗಳನ್ನು ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸಲಾಗಿದೆ. ಎಂಜಿಎನ್‌ಆರ್‌ಇಜಿಎಸ್‌ ದಿನ ಕೂಲಿಯನ್ನು ರೂ.267 ರಿಂದ ರೂ.375 ಕ್ಕೆ ಹೆಚ್ಚಿಸಲು ಮುಂದಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.