ಬಾಗಲಕೋಟೆ: ವಿದ್ಯುತ್ ಶಾಕ್ ತಗುಲಿ 12 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನಡೆದಿದೆ. ಪ್ರೀತಮ್ ವಿಠ್ಠಲ ಮಾದರ(12) ಮೃತ ದುರ್ದೈವಿ ಬಾಲಕನಾಗಿದ್ದಾನೆ.
ಮನೆಯಲ್ಲಿ ಪಂಪ್ ಮೂಲಕ ನೀರು ತುಂಬುತ್ತಿದ್ದು, ನೀರು ತುಂಬಿದ ಬಳಿಕ ಮಷಿನ್ ಸ್ವಿಚ್ ತೆಗೆಯಲು ಬಾಲಕನಿಗೆ ಹೇಳಿದ್ದಾರೆ. ಈ ವೇಳೆ ಬಾಲಕ ನೀರಿನ ಮಷಿನ್ ಸ್ವಿಚ್ ತೆಗೆಯಲು ಹೋದಾಗ ವಿದ್ಯುತ್ ತಗುಲಿದ್ದು, ಮನೆಯವರ ಕಣ್ಣು ಎದುರೇ ಬಾಲಕ ಸಾವನ್ನಪ್ಪಿದ್ದಾನೆ.
ಬಾಲಕ ಸಾವನ್ನಪ್ಪಿದ ಹಿನ್ನಲೆ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಸ್ಥಳಕ್ಕೆ ಲೋಕಾಪುರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.