ಮಂಗಳೂರು: ಆನ್ಲೈನ್ ಹೂಡಿಕೆ ಹಗರಣದಲ್ಲಿ 10.32 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಕೇರಳದ ತ್ರಿಶೂರ್ ಮೂಲದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತ್ರಿಶೂರ್ ನಿವಾಸಿ ಕೆ.ಎಸ್. ನಿತಿನ್ ಕುಮಾರ್ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
2024 ರಲ್ಲಿ ಸೈಬರ್ ಎಕನಾಮಿಕ್ ಅಂಡ್ ನಾರ್ಕೋಟಿಕ್ (ಸಿಇಎನ್) ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಉತ್ತಮ ಆದಾಯದ ಭರವಸೆ ನೀಡಿದ ವಂಚಕರಿಗೆ ವ್ಯಕ್ತಿಯೊಬ್ಬ 10.32 ಲಕ್ಷ ರೂ.ಕಳೆದುಕೊಂಡಿದ್ದಾನೆ.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯ ಜಾಡು ಹಿಡಿದು ಕುಮಾರ್ ಖಾತೆಗೆ 1 ಲಕ್ಷ ರೂ. ಬಂದಿರುವುದನ್ನು ಗಮನಿಸಿದರು. ಈ ಮೊತ್ತವು ವಿವಿಧ ಖಾತೆಗಳಿಗೆ 10.32 ಲಕ್ಷ ರೂಪಾಯಿಗಳನ್ನು ವರ್ಗಾಯಿಸಲು ಕುಮಾರ್ ಪಡೆದ ಕಮಿಷನ್ ಆಗಿತ್ತು ಎಂದು ವರದಿಯಾಗಿದೆ.
ಸಿಇಎನ್ ಪೊಲೀಸರು ಕುಮಾರ್ ಅವರನ್ನು ಬಂಧಿಸಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು, ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಇತರ ಆರೋಪಿಗಳಿಗಾಗಿ ತನಿಖೆ ನಡೆಯುತ್ತಿದೆ.