Renukaswamy murder case : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರಾಗಿದ್ದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಲ್ಲಿಯವರೆಗೆ ನಡೆದಿದ್ದೇನು ನೋಡೋಣ
ಹೌದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೂನ್ 11ರಂದು ನಟ ದರ್ಶನ್ ಬಂಧನಕ್ಕೆ ಒಳಗಾದರು. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟೂ 17 ಜನರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿ ಆಗಿದ್ದರು. ವಿಚಾರಣೆ ವೇಳೆ ದರ್ಶನ್ ಅವರು ರೇಣುಕಾ ಸ್ವಾಮಿಗೆ ಒದ್ದ ವಿಚಾರಗಳನ್ನು ಒಪ್ಪಿಕೊಂಡಿರುವುದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಆಗಿದೆ.
ಇದನ್ನೂ ಓದಿ: Darshan Bail: ಮನೆದೇವರ ಮೊರೆ ಹೋದ ರೇಣುಕಾಸ್ವಾಮಿ ಕುಟುಂಬ
ದರ್ಶನ್ ಅವರನ್ನು ಆರಂಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇಡಲಾಗಿತ್ತು. ಆ ಬಳಿಕ ಅವರನ್ನು ಐಷಾರಾಮಿ ಸವಲತ್ತು ಪಡೆದ ಆರೋಪದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಯಿತು.
Renukaswamy murder case : ಜಾಮೀನು ಕೋರಿ ಕೋರ್ಟ್ ಮೊರೆ
ಚಾರ್ಜ್ಶೀಟ್ ಸಲ್ಲಿಕೆ ಆದ ಬಳಿಕ ದರ್ಶನ್ ಅವರು ಜಾಮೀನು ಕೋರಿ ಕೆಳ ಹಂತದ ಕೋರ್ಟ್ನ ಮೊರೆ ಹೋಗಿದ್ದರು. ಆದರೆ, ಅಲ್ಲಿ ಜಾಮೀನು ಸಿಕ್ಕಿರಲಿಲ್ಲ. ಆ ಬಳಿಕ ದರ್ಶನ್ ಹೈಕೋರ್ಟ್ ಮೊರೆ ಹೋದರು. ತಮ್ಮ ಬೆನ್ನು ನೋವಿನ ಕಾರಣ ನೀಡಿ ದರ್ಶನ್ ಅವರು ಹೈಕೋರ್ಟ್ನಲ್ಲಿ ಜಾಮೀನಿಗೆ ಮನವಿ ಮಾಡಿದ್ದು, ಇದೀಗ ವೈದ್ಯಕೀಯ ಕಾರಣಗಳನ್ನು ಆಧರಿಸಿ ಹೈಕೋರ್ಟ್ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ. ಬೇಲ್ ಕೊಡಿಸಲು ಪತ್ನಿ ವಿಜಯಲಕ್ಷ್ಮಿ ದೇವರ ಮೊರೆ ಹೋಗಿದ್ದರು.
ಇದನ್ನೂ ಓದಿ: Darshan Bail: 131 ದಿನಗಳ ಬಳಿಕ ಇಂದೇ ಜೈಲಿನಿಂದ ದರ್ಶನ್ ರಿಲೀಸ್!
Renukaswamy murder case : ಕೇವಲ 6 ವಾರಗಳ ಕಾಲ ಮಾತ್ರ ಮಧ್ಯಂತರ ಜಾಮೀನು ಮಂಜೂರು
ನಟ ದರ್ಶನ್ ಅವರಿಗೆ ಕೇವಲ ೬ ವಾರಗಳ ಕಾಲ ಮಾತ್ರ ಮಧ್ಯಂತರ ಜಾಮೀನು ಮಂಜೂರಾಗಿದ್ದು, ಅವಧಿ ಬಳಿಕ ಜೈಲಿಗೆ ಮರಳುವ ಸಾಧ್ಯತೆ ಇದೆ. ಅಥವಾ ವೈದ್ಯರು ವಿಶ್ರಾಂತಿ ಸೂಚಿಸಿದಲ್ಲಿ ಮಧ್ಯಂತರ ಅವಧಿ ವಿಸ್ತರಣೆಗೆ ಮನವಿ ಮಾಡುವ ಅವಕಾಶವೂ ಇದ್ದು, ಈ ಅವಧಿಯನ್ನು ಅವರು ಕೇವಲ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ.
ಈ ವಿಚಾರವಾಗಿ ಮಾತನಾಡಿರುವ ದರ್ಶನ್ ಪರ ವಕೀಲ ಸುನೀಲ್, ‘ಇದು ಮಧ್ಯಂತರ ಜಾಮೀನು ಅಷ್ಟೇ. ರೆಗ್ಯುಲರ್ ಬೇಲ್ ಮೇಲೆ ಅವರನ್ನು ಹೊರಕ್ಕೆ ತರಬೇಕಿದೆ. ಆ ಜವಾಬ್ದಾರಿ ನಮ್ಮ ಮೇಲೆ ಇದೆ’ ಎಂದಿದ್ದಾರೆ.