ಸ್ಯಾಮ್ ಸಂಗ್ ಭಾರಿ ಡಿಸ್ಕೌಂಟ್: ಕೇವಲ ರೂ.6750ಕ್ಕೆ Samsung Galaxy M04 ಸ್ಮಾರ್ಟ್‌ಫೋನ್‌

ಸ್ಯಾಮ್ ಸಂಗ್ ಕಂಪನಿಗೆ ಸೇರಿದ ಸ್ಮಾರ್ಟ್ ಫೋನ್ ಭಾರಿ ಡಿಸ್ಕೌಂಟ್ ಆಫರ್ ನಲ್ಲಿ ಲಭ್ಯವಿದ್ದು, Amazon ಮತ್ತು Samsung.com ನಲ್ಲಿ ಸಹ ಪಡೆಯಬಹುದು.

ಇನ್ನು, Amazon ನಲ್ಲಿ ಖರೀದಿಸುವ ಮೂಲಕ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಕೊಡುಗೆಗಳು ಸಹ ಲಭ್ಯವಿದ್ದು, ಕಂಪನಿಯು Samsung Galaxy M04 ಸ್ಮಾರ್ಟ್‌ಫೋನ್‌ನಲ್ಲಿ ಭಾರಿ ರಿಯಾಯಿತಿಯನ್ನು ನೀಡುತ್ತಿದೆ. 

Samsung Galaxy M04 ಲೈಟ್ ಗ್ರೀನ್ ಫೋನ್ MRP ಬೆಲೆ ರೂ.11,499ಇದ್ದು, ಸ್ಯಾಮ್‌ಸಂಗ್ ಪ್ರಸ್ತುತ ಭಾರಿ ರಿಯಾಯಿತಿಯಲ್ಲಿ ರೂ.7,499 ಕ್ಕೆ  ಫೋನ್ ನೀಡುತ್ತಿದೆ . 

ಅಂದರೆ MRP ಮೇಲೆ ಸುಮಾರು 38 ಪ್ರತಿಶತದಷ್ಟು ರಿಯಾಯಿತಿ ನೀಡುತ್ತಿದ್ದು, ರೂ.4000 ವರೆಗೆ ರಿಯಾಯಿತಿ ಲಭ್ಯವಿದೆ. ಅಷ್ಟೇ ಅಲ್ಲದೆ, ಇನ್ನು ಹಲವು ಆಫರ್‌ಗಳಿವೆ.

ನೀವು Samsung Galaxy M04 ಲೈಟ್ ಗ್ರೀನ್ ಫೋನ್ ಅನ್ನು ಅಮೆಜಾನ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ ಮೂಲಕ ಖರೀದಿಸಿದರೆ, ನಿಮಗೆ ರೂ.749 ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. 

ಅಂದರೆ 7,499 ರಿಂದ ಇನ್ನೂ 749 ರೂ. ಕಡಿಮೆಯಾಗಲಿದ್ದು ಈ ಫೋನ್ ಅನ್ನು ರೂ.6,750 ಗೆ ಪಡೆಯಬಹುದು. ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಬಯಸುವವರು ಈ ಆಫರ್ ಅನ್ನು ಪಡೆಯಬಹುದು. ಈ ಆಫರ್ ಸೀಮಿತ ಅವಧಿಗೆ ಮಾತ್ರ. 

ನೋ ಕಾಸ್ಟ್ EMI ಆಫರ್‌ನಲ್ಲಿಯೂ ಕೂಡ ಈ ಫೋನ್ ಲಭ್ಯವಿದ್ದು, ಮಾಸಿಕ EMI ರೂ.358 ರಿಂದ ಪ್ರಾರಂಭವಾಗುತ್ತದೆ .ಅಷ್ಟೇ ಅಲ್ಲ, ಆರು ತಿಂಗಳ Spotify ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುವ ಅವಕಾಶವೂ ಇದೆ. 

4GB RAM, 64GB ಮೆಮೊರಿ ಮತ್ತು 4GB RAM, 128GB ಮೆಮೊರಿ ಸೇರಿದಂತೆ ಈ ಫೋನ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಈ ಫೋನ್ 13 MP ಜೊತೆಗೆ 2 MP ಹಿಂಬದಿಯ ಕ್ಯಾಮೆರಾ ಮತ್ತು 5 MP ಸೆಲ್ಫಿ ಕ್ಯಾಮೆರಾ, 6.5 ಇಂಚಿನ ಎತ್ತರದ ಡಿಸ್ಪ್ಲೇ ಹೊಂದಿದೆ.

5000 mAh ಲಿಥಿಯಂ ಐಯಾನ್ ಬ್ಯಾಟರಿ ಇದರ ವಿಶೇಷತೆ. ಈ ಫೋನ್‌ನಲ್ಲಿ ಒಂದು ವರ್ಷದ ಉತ್ಪಾದನಾ ವಾರಂಟಿ ಮತ್ತು ಇತರ ಸಾಧನಗಳಲ್ಲಿ 6 ತಿಂಗಳ ವಾರಂಟಿ ಇದೆ.