ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿಜವಾದ ಹೆಸರೇನು? ಹೆಸರು ಬದಲಾಯಿಸಿಕೊಂಡ ಸೌತ್ ನಟಿಯರು ಇವರೇ 

ಕೆಲವು ವ್ಯಕ್ತಿಗಳ ಹೆಸರು ದಾಖಲೆಗಳಲ್ಲಿ ಒಂದು, ಸಮಾಜದಲ್ಲಿ ಬೇರೆ ಇರುತ್ತದೆ. ಅವರು ಮಾಡುವ ಕೆಲಸಗಳು, ವೃತ್ತಿ, ಇತರ ಅಂಶಗಳ ಆಧಾರದ ಮೇಲೆ ಮೂಲ ಹೆಸರುಗಳು ನಿಕ್ ನೇಮ್ ಗಳು ಹೈಲೆಟ್ ಆಗುತ್ತವೆ.

ಕೆಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ರಿಂದ ನಟಿ ಅಂಜಲಿವರೆಗೆ ಚಿತ್ರರಂಗದಲ್ಲಿ ಹೆಸರುಗಳನ್ನು ಬದಲಾಯಿಸಿಕೊಂಡ ಸೆಲಬ್ರಿಟೀಸ್ ಪಟ್ಟಿ ಹೀಗಿದೆ..

ಸ್ಯಾಂಡಲ್ ವುಡ್ ಕ್ವೀನ್ ಎಂದೇ ಕರೆಯಲ್ಪಡುವ ಮೋಹಕತಾರೆ ರಮ್ಯಾ ಅವರ ಹುಟ್ಟು ಹೆಸರು ದಿವ್ಯ ಸ್ಪಂದನ.

ನಟಿ ರಕ್ಷಿತಾ ಮೂಲ ಹೆಸರು ಶ್ವೇತಾ. ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ಛಾಯಾಗ್ರಹಕರಾಗಿದ್ದ ಬಿ.ಸಿ. ಗೌರಿಶಂಕರ್  ಮತ್ತು ಮಮತಾ ರಾವ್ ಅವರ ಮಗಳು 

ಖ್ಯಾತ ನಟಿ ಶೃತಿ ಅವರ ಮೂಲ ಹೆಸರು ಗಿರಿಜಾ. ದ್ವಾರಕೇಶ್ ನಿರ್ದೇಶನದ “ಶೃತಿ” ಚಿತ್ರದಲ್ಲಿ ನಟಿಸುವ ಮೂಲಕ  ಗಿರಿಜಾ ಇದ್ದ ಮೂಲ ಹೆಸರು ಶೃತಿ ಎಂದು ಕರೆಯಲಾಯಿತು

ಪ್ರಿಯಾಮಣಿ ಮೂಲ ಹೆಸರು ಪ್ರಿಯಾ ವಾಸುದೇವ್ ಮಣಿ ಅಯ್ಯರ್

ಮಿಲ್ಕಿ ಬ್ಯೂಟಿ ತಮನ್ನಾ (Tamanna) ಕೂಡ ಹೆಸರು ಬದಲಾಯಿಸಿಕೊಂಡಿದ್ದು, ಸ್ಕ್ರೀನ್ ನೇಮ್‌ ಅನ್ನು Tamannaah Bhatia ಆಗಿ ಪ್ರಜೆಂಟ್ ಮಾಡುತ್ತಿದ್ದಾರೆ.

ಅನುಷ್ಕಾ ಶೆಟ್ಟಿಯ ಮೂಲ ಹೆಸರು ಸ್ವೀಟಿ ಶೆಟ್ಟಿ (Sweet Shetty)

ಕೇರಳದಲ್ಲಿ ಜನಿಸಿದ ಲೇಡಿ ಸೂಪರ್ ಸ್ಟಾರ್ ನಯನತಾರ ಮೂಲ ಹೆಸರು ಡಯಾನಾ ಮರಿಯನ್ ಕುರಿಯನ್ ((Diana Marian Kurian)

ಬಾಲಿವುಡ್, ಟಾಲಿವುಡ್‌ನಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿರುವ ಟಬು ಅವರ ನಿಜವಾದ ಹೆಸರು ತಬಸ್ಸುಮ್ ಫಾತಿಮಾ ಹಶ್ಮಿ

ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿರುವ ನಟಿ ಭೂಮಿಕಾ ಚಾವ್ಲಾ ನಿಜವಾದ ಹೆಸರು ರಚನಾ ಚಾವ್ಲಾ 

ಸೌತ್ ಇಂಡಸ್ಟ್ರಿಯ ಫೇಮಸ್ ನಟಿ ಎಂದು ಪರಿಗಣಿಸಲ್ಪಟ್ಟಿರುವ ಅಂಜಲಿ ನಿಜವಾದ ಹೆಸರು ಬಾಲಾತ್ರಿಪುರಸುಂದರಿ.