ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಂತರ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಮುಂದೆ ಬರುವ 5 ಸಾಧಕರು ಇವರೇ!

ಸ್ಯಾಂವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸಾಧಕರ ಸಾಧನೆಯ ಹಾದಿಯ ಬಗ್ಗೆ ಪ್ರೇಕ್ಷಕರ ಮುಂದಿಟ್ಟು, ಯುವಜನತೆಗೆ ಸ್ಫೂರ್ತಿ ತುಂಬುತ್ತಿದ್ದ ರಿಯಾಲಿಟಿ ಶೋ

ಕನ್ನಡದ ನಟ ರಮೇಶ್ ಅರವಿಂದ್ ನಡೆಸಿಕೊಡುವ ಈ ಕಾರ್ಯಕ್ರಮ ಮಾರ್ಚ್ 25ರಿಂದ ರಿಂದ ಆರಂಭವಾಗಿದೆ. 

ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ ಆಗಮಿಸಿ ತಮ್ಮ ಜೀವನದಲ್ಲಿ ನಡೆದ ಕೆಲ ಘಟನೆಗಳ ಮೆಲುಕು ಹಾಕಿದ್ದರು.

ರಮ್ಯಾ ಅವರು ನನ್ನ ಜೀವನದ ಮೊದಲ ಪ್ರಭಾವಶಾಲಿ ವ್ಯಕ್ತಿ ನನ್ನ ತಾಯಿ, ಎರಡನೇಯವರು ನನ್ನ ತಂದೆ, ಮೂರನೇ ಅವರು ರಾಹುಲ್ ಗಾಂಧಿ ಎಂದಿದ್ದರು. 

ಈಗ ನಟಿ ರಮ್ಯಾ ಅವರ ನಂತರದಲ್ಲಿ ಯಾರೆಲ್ಲಾ ಬರಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಎರಡನೇ ಅಥಿತಿಯಾಗಿ ಪ್ರಭು ದೇವ

 ವೀಕೆಂಡ್ ವಿತ್ ರಮೇಶ್ ಎರಡನೇ ಅತಿಥಿಯಾಗಿ ನಟ, ನಿರ್ದೇಶಕ, ಡ್ಯಾನ್ಸರ್ ಪ್ರಭುದೇವ ಅವರು ಬರಲಿದ್ದಾರೆ. ರಮ್ಯಾಗೂ ಮೊದಲೇ ನಟ ಪ್ರಭುದೇವ ಬರಬೇಕಿತ್ತು. ಆದರೆ, ಎರಡನೇ ಅತಿಥಿಯಾಗಿ ಆಗಮಿಸಲಿದ್ದಾರೆ.

ಬಹುದ್ದೂರ್, ಪೊಗರು, ಭರ್ಜರಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಕೂಡ ಈ ಬಾರಿ ಮೂರನೇ ಅಥಿತಿಯಾಗಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಬರಲಿದ್ದಾರೆ.

ಸದ್ಯ ನಟ ಧ್ರುವ ಸರ್ಜಾ ಕೆಡಿ ಮತ್ತು ಮಾರ್ಟಿನ್ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

1989ರಲ್ಲಿ  'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಕನಸಿನ ರಾಣಿ ಎಂದೇ ಪ್ರಸಿದ್ಧಿ ಪಡೆದಿರುವ ಮಾಲಾಶ್ರೀ ನಾಲ್ಕನೇ ಅತಿಥಿಯಾಗಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲಿದ್ದಾರೆ.

ದರ್ಶನ್, ಪುನೀತ್, ಸುದೀಪ್, ಉಪೇಂದ್ರ ಸೇರಿದಂತೆ ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅಥಿತಿಯಾಗಿ ಬರಲಿದ್ದಾರೆ. 

ಇಶಾ ಫೌಂಡೇಶನ್ ಸ್ಥಾಪಕ ಸದ್ಗುರು ಎಂದೇ ಜನಪ್ರಿಯರಾಗಿರುವ ಜಗ್ಗಿ ವಾಸುದೇವ್ ಅವರು ಕೂಡ ಈ ಬಾರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಕುರ್ಚಿಯಲ್ಲಿ ಕೂರಲಿದ್ದಾರೆ.