Ratan Tata : ರತನ್ ಟಾಟಾ ಪ್ರೀತಿಸಿದ್ದರೂ ಬ್ಯಾಚುರಲ್ ಆಗಿ ಉಳಿದಿದ್ದು ಯಾಕೆ? ಮದುವೆಯಾಗದೆ ಇರಲು ಇದೇ ಕಾರಣ?

Ratan Tata : ಸಂದರ್ಶನವೊಂದಲ್ಲಿ ರತನ್ ಟಾಟಾ ಅವರು, ನಾನು ನಾಲ್ಕು ಬಾರಿ ಪ್ರೀತಿಯಲ್ಲಿ ಬಿದ್ದಿದ್ದೆ, ಪ್ರತಿ ಬಾರಿಯೂ ಮದುವೆಯಾಗಲು ಬಯಸಿದ್ದೆ. ಆದರೆ ಸಂದರ್ಭಗಳು ಯಾವಾಗಲೂ ನನ್ನನ್ನು ಮದುವೆಯಾಗುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿತು…

Ratan Tata

Ratan Tata : ಸಂದರ್ಶನವೊಂದಲ್ಲಿ ರತನ್ ಟಾಟಾ ಅವರು, ನಾನು ನಾಲ್ಕು ಬಾರಿ ಪ್ರೀತಿಯಲ್ಲಿ ಬಿದ್ದಿದ್ದೆ, ಪ್ರತಿ ಬಾರಿಯೂ ಮದುವೆಯಾಗಲು ಬಯಸಿದ್ದೆ. ಆದರೆ ಸಂದರ್ಭಗಳು ಯಾವಾಗಲೂ ನನ್ನನ್ನು ಮದುವೆಯಾಗುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿತು ಎಂದು ತಿಳಿಸಿದ್ದರು.

ಇಂಡಿ-ಚೀನಾ ಯುದ್ದದಿಂದ ದೂರ

ಲಾಸ್‌ ಏಂಜಲೀಸ್‌ನಲ್ಲಿ ಟಾಟ ಅವರು ಚೀನಾದ ಯುವತಿಯನ್ನು ಪ್ರೀತಿಸಿದ್ದರು. ಇಬ್ಬರು ಮದುವೆಯಾಗುವುದು ಖಚಿತವಾಗಿತ್ತು. ಅದೇ ಸಮಯದಲ್ಲಿ ಟಾಟ ಅವರ ಅಜ್ಜಿಯ ಆರೋಗ್ಯ ಹದಗೆಟ್ಟ ಕಾರಣ ಅವರು ಭಾರತಕ್ಕೆ ಮರಳಿ ಬ೦ದರು. ಆದರೆ 1962ರ ಇಂಡೋ-ಚೀನಾ ಯುದ್ಧದ ಕಾರಣ ಅವರ ಪ್ರಿಯತಮೆ ಟಾಟ ಅವರೊಂದಿಗೆ ಬರಲು ಸಾಧ್ಯವಾಗದೆ ಅವರಿಬ್ಬರು ದೂರವಾದರು.

ಇದನ್ನೂ ಓದಿ: ಆ ಉದ್ಯೋಗಿಗಳಿಗೆ EPFO ಗುಡ್ ನ್ಯೂಸ್.. ಒಬ್ಬೊಬ್ಬರ ಖಾತೆಗೆ 13,816 ರೂ..!

Vijayaprabha Mobile App free

ಬಾಲಿವುಡ್ ನಟಿಯೊಂದಿಗೆ ಪ್ರೀತಿ; ಕೈಗೂಡದ ಪ್ರೀತಿ

ಬಾಲಿವುಡ್ ನಟಿ ಸಿಮಿ ಗರೆವಾಲ್ ಟಾಟಾ ಅವರ ಮನಸ್ಸು ಗೆದ್ದಿದ್ದರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಜೀವನದಲ್ಲಿಯೂ ಇದು ಮಹತ್ವದ ಘಟ್ಟವಾಗಿತ್ತು. ಸಿಮಿ ಅವರು ಕಾರ್ಜ್, ಸಾಥಿ, ಮೇರಾ ನಾಮ್ ಜೋಕರ್, ದೋ ಬದನ್ ಮತ್ತು ಇತರ ಚಿತ್ರಗಳಲ್ಲಿ ನಟಿಸಿದ್ದಾರೆ.

ಇನ್ನು, ಈ ಜೋಡಿ ಕೆಲವು ದಿನ ಜೊತೆ ಜೊತೆಯಾಗಿ ಓಡಾಡಿಕೊಂಡಿದ್ದರು ಅನ್ನೋ ಸುದ್ದಿ ಕೂಡ ಹರಿದಾಡಿತ್ತು. ರತನ್ ಟಾಟಾ ಹಾಗೂ ಸಿಮಿ ಗರೆವಾಲ್ ಇಬ್ಬರೂ ಮದುವೆ ಹಂತಕ್ಕೂ ಬಂದಿದ್ದರಾದರು ಕೊನೆಯ ಕ್ಷಣದಲ್ಲಿ ಈ ಪ್ರೀತಿ ಕೂಡ ಮುರಿದು ಬಿದ್ದಿತ್ತು.

ಇದನ್ನೂ ಓದಿ : ಟಾಟಾ ಸಮೂಹ ಸಂಸ್ಥೆಗಳಿಗೆ ಸಾರಥಿಯ ನೇಮಕ!

ಮಾಜಿ ಪ್ರೇಯಸಿಯಿಂದ ಹೊಗಳಿಕೆ

ಬಾಲಿವುಡ್ ನಟಿ ಸಿಮಿಯವರು ಟಾಟ ಅವರನ್ನು ‘ಪರ್ಫೆಕ್ಟ್ ಜೆಂಟಲ್‌ಮ್ಯಾನ್’ ಎಂದು ಕರೆದಿದ್ದರು. ಅವರಿಗೆ ಹಾಸ್ಯ ಪ್ರಜ್ಞೆಯೂ ಇತ್ತು. ಅಲ್ಲದೇ ಸಭ್ಯ ಮತ್ತು ಪರಿಪೂರ್ಣ ಸಂಭಾವಿತ ವ್ಯಕ್ತಿ. ಅಷ್ಟೊಂದು ಹಣ ಇದ್ದರೂ ಅವರ ಪ್ರೇರಕ ಶಕ್ತಿ ಹಣವಾಗಿರಲಿಲ್ಲ ಎ೦ದು ಟಾಟ ಅವರನ್ನು ಬಣ್ಣಿಸಿದ್ದರು.

ರತನ್ ಟಾಟಾ ಮದುವೆಯಾಗದೆ ಇರಲು ಕಾರಣ?

ಕೈಗಾರಿಕಾ ಉದ್ಯಮಿ ರತನ್ ಟಾಟಾ ಮದುವೆಯಾಗದೆ ಇರಲು ಮತ್ತೊಂದು ಬಲವಾದ ಕಾರಣವಿದೆ ಎನ್ನುತ್ತಾರೆ ಅವರ ಆಪ್ತರು. ತಾಯಿ ಸೋನೋ ಚಿಕ್ಕವಳಿದ್ದಾಗ ತಂದೆ ನೇವಲ್ ಟಾಟಾ ಅವರಿಂದ ಬೇರ್ಪಟ್ಟರು. ಅವರು ತಮ್ಮ ತಂದೆಯ ಅಜ್ಜಿ ರತನ್ ಜಿ ಟಾಟಾ ಅವರೊಂದಿಗೆ ಬೆಳೆದರು. ಸ್ವಲ್ಪ ಸಮಯದ ನಂತರ, ಅವರ ತಾಯಿ ಎರಡನೇ ಬಾರಿಗೆ ವಿವಾಹವಾದರು. ಟಾಟಾ ಶಾಲೆಯಲ್ಲಿ ತನ್ನ ಸಹಪಾಠಿಗಳಿಂದ ಅಪಹಾಸ್ಯಕ್ಕೊಳಗಾದರು. ಆ ಅವಮಾನಗಳೇ ಮದುವೆ ಆಗದಂತೆ ತಡೆದವು ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.