Tata Trust: ಟಾಟಾ ಸಮೂಹ ಸಂಸ್ಥೆಗಳಿಗೆ ಸಾರಥಿಯ ನೇಮಕ!

ಮುಂಬೈ: ಟಾಟಾ ಸಮೂಹದ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕಗೊಂಡಿದ್ದಾರೆ. ಮಲಸಹೋದರ ರತನ್ ಟಾಟಾ ಅವರು ಅಕ್ಟೋಬರ್ 9ರಂದು 86 ನೇ ವಯಸ್ಸಿನಲ್ಲಿ ನಿಧನರಾದ ಕಾರಣ ಇಂದು ಮುಂಬೈನಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ…

ಮುಂಬೈ: ಟಾಟಾ ಸಮೂಹದ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕಗೊಂಡಿದ್ದಾರೆ.

ಮಲಸಹೋದರ ರತನ್ ಟಾಟಾ ಅವರು ಅಕ್ಟೋಬರ್ 9ರಂದು 86 ನೇ ವಯಸ್ಸಿನಲ್ಲಿ ನಿಧನರಾದ ಕಾರಣ ಇಂದು ಮುಂಬೈನಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ನೋಯೆಲ್ ಅವರನ್ನು ಆಯ್ಕೆ ಮಾಡಲಾಗಿದೆ.

ರತನ್ ಟಾಟಾ ಮದುವೆಯಾಗದೆ, ಮಕ್ಕಳಿರಲಿಲ್ಲ. ಟಾಟಾ ಟ್ರಸ್ಟ್‌ನ ಮುಂದಿನ ಉತ್ತರಾಧಿಕಾರಿಯನ್ನು ಸೂಚಿಸಿರಲಿಲ್ಲ.  150 ವರ್ಷಗಳಿಗಿಂತಲೂ ಹಳೆಯದಾದ ಟಾಟಾ ಬ್ರಾಂಡ್‌ನ ಅಡಿಯಲ್ಲಿ ವಿವಿಧ ಸಂಸ್ಥೆಗಳ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್‌ನ 66% ಅನ್ನು ಟಾಟಾ ಟ್ರಸ್ಟ್‌ಗಳು ಹೊಂದಿರುವುದರಿಂದ ನೋಯೆಲ್ ಅವರ ನೇಮಕವು ಮಹತ್ವದ್ದಾಗಿದೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.