History of Mysore Ambari : ಮೈಸೂರು ಅಂಬಾರಿಯು (Mysore Ambari) ವಿವರವಾದ ವಿನ್ಯಾಸಗಳೊಂದಿಗೆ 80 ಕೆಜಿ ತೂಕದ ಚಿನ್ನದ ಹಾಳೆಗಳಿಂದ ಆವೃತವಾದ ಭವ್ಯವಾದ ಮರದ ರಚನೆಯಾಗಿದೆ. ಇದನ್ನು ನಿರ್ಮಿಸಿದವರು ‘ಸ್ವರ್ಣಕಲಾ ನಿಪುಣ, ಸಿಂಗಣ್ಣಾಚಾರ್ಯರು. ಮೈಸೂರು ಅಂಬಾರಿ 750 ಕೆಜಿ ತೂಗುತ್ತದೆ. ಇದು ರಾಜಮನೆತನದ ಸದಸ್ಯರಿಗೆ ಕುಳಿತಕೊಳ್ಳಲು ಎರಡು ವಿಶಾಲವಾದ ಆಸನಗಳನ್ನು ಒಳಗೊಂಡಿದೆ.
ಮಹಾರಾಷ್ಟ್ರ ಮತ್ತು ಕುಮ್ಮಟದುರ್ಗ
ಇತಿಹಾಸದ ಪ್ರಕಾರ ಮಹಾರಾಷ್ಟ್ರದ ದೇವಗಿರಿಯಲ್ಲಿ ಮೊದಲಿಗೆ ಅಂಬಾರಿ ಇತ್ತು. ರತ್ನ ಖಚಿತವಾಗಿರುವ ಅಂಬಾರಿಯನ್ನು ದೇವಗಿರಿಯ ಅರಸರು ಕಾಪಾಡಿಕೊಂಡು ಬಂದಿದ್ದರು. ಬಳಿಕ ಅವರು ಬಳ್ಳಾರಿ ಜಿಲ್ಲೆಯ ರಾಮದುರ್ಗಾ ಮುಮ್ಮಡಿ ಸಿಂಗನಾಯಕರಿಗೆ ಅಂಬಾರಿಯನ್ನು ಹಸ್ತಾಂತರಿಸಿದ್ದರು. ಮುಂದೆ ಗಂಡುಗಲಿ ಕುಮಾರರಾಮನು ಕುಮ್ಮಟದುರ್ಗಾದಿಂದ ಆಡಳಿತ ನಡೆಸಿದ್ದ ಸಂದರ್ಭದಲ್ಲಿ ಅಂಬಾರಿಯು ಕುಮಾರರಾಮನ ಬಳಿ ಇತ್ತು.
ಇದನ್ನೂ ಓದಿ: ಇಂದು ನವರಾತ್ರಿಯ ಒಂಬತ್ತನೇ ದಿನ ಸಿದ್ದಿದಾತ್ರೀ ಆರಾಧನೆ: ಪೂಜಾ ವಿಧಾನ, ಮಹತ್ವ
ಹೂತಿಟ್ಟಿದ್ದ ಅಂಬಾರಿ
1327ರಲ್ಲಿ ಕುಮಾರರಾಮನು ದೆಹಲಿ ಸುಲ್ತಾನರಿಂದ ಯುದ್ಧದಲ್ಲಿ ಮರಣ ಹೊಂದಿದ ಸುಲ್ತಾನರಿಂದ ಅಂಬಾರಿಯನ್ನು ರಕ್ಷಿಸಲು ಮುಂದಿನ ಆರು ವರ್ಷಗಳ ಕಾಲ ಈ ಅಂಬಾರಿಯನ್ನು ಕುಮಾರರಾಮನ ಸೋದರ ಮಾವಂದಿರಾದ ಹಕ್ಕ ಬುಕ್ಕರು ಹಂಪಿಯ ಬಳಿಯಲ್ಲಿಯ ಹುತ್ತದಲ್ಲಿ ಹೂತಿಟ್ಟಿದ್ದರು.
ಮಹಾನವಮಿ ದಿಬ್ಬ
ಹಂಪಿಯಲ್ಲಿ 1336ರಲ್ಲಿ ವಿಜಯ ನಗರ ಸಾಮ್ರಾಜ್ಯ ಹುಟ್ಟಿಕೊಂಡಿತು. ವಿಜಯನಗರ ಕಾಲದಲ್ಲಿ ಅದ್ದೂರಿಯಾಗಿ ದಸರಾ ನಡೆಯುತ್ತಿತ್ತು ಎನ್ನಲಾಗಿದೆ. ಇದಕ್ಕೆ ಕುರುಹಾಗಿ ಹಂಪಿಯಲ್ಲಿ ಆಕರ್ಷಕ ಮಹಾನವಮಿ ದಿಬ್ಬ ಇರುವುದು ಸಾಕ್ಷಿಯಾಗಿದೆ. ಇಲ್ಲಿ ಅಂಬಾರಿಯ ಬಳಕೆಯಾಗುತ್ತಿತ್ತು ಎನ್ನಲಾಗುತ್ತದೆ.
ಇದನ್ನೂ ಓದಿ: ಇಂದು ಆಯುಧಪೂಜೆ; ಉಪವಾಸ ದೀಕ್ಷೆಗೆ ಶುಭ ಸಮಯ ಯಾವಾಗ..?
ಮೈಸೂರಿಗೆ ಸೇರ್ಪಡೆ
ಸಾಳ್ವ, ಸಂಗಮ ಹಾಗು ಅರವಿಡು ವಂಶಸ್ಥರ ನಂತರ ವಿಜಯನಗರ ತಾಳಿಕೋಟಿ ಕದನದಲ್ಲಿ ಸಾಮ್ರಾಜ್ಯ ಪತನವಾಯಿತು. ಈ ಸಂದರ್ಭದಲ್ಲಿ ಅಂಬಾರಿಯನ್ನು ಆಂಧ್ರ ಪ್ರದೇಶದ ಪೆನಗುಂಡಿಗೆಯಲ್ಲಿ ಸಂರಕ್ಷಿಸಲಾಗಿದ್ದು, ನಂತರದಲ್ಲಿ ಶ್ರೀರಂಗಪಟ್ಟಣದಲ್ಲಿ ಸಾಮ್ರಾಜ್ಯ ಸ್ಥಾಪನೆಯಾದ ಮೇಲೆ ಮೈಸೂರಿಗೆ ಅಂಬಾರಿಯನ್ನು ಸ್ಥಳಾಂತರಗೊಳಿಸಲಾಯಿತು.