pm kisan yojana : ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM-Kisan Samman Nidhi) ಭಾರತ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಡಿ, ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ
ಹೌದು, ಈ ಹಣವನ್ನು ಮೂರು ಸಮಾನ ಕಂತುಗಳಲ್ಲಿ, ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2,000 ರೂಪಾಯಿಗಳಂತೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. 2018ರ ಡಿಸೆಂಬರ್ 1ರಂದು ಪ್ರಾರಂಭವಾದ ಈ ಯೋಜನೆಯು ರೈತರ ಆದಾಯವನ್ನು ಸ್ಥಿರಗೊಳಿಸಲು ಮತ್ತು ಕೃಷಿ ಚಟುವಟಿಕೆಗಳಿಗೆ ಆರ್ಥಿಕ ಬೆಂಬಲ ನೀಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪ್ಯಾನ್ ಕಾರ್ಡ್ ಯಾಕೆ ಅಗತ್ಯ? ಅದರ ಮಹತ್ವಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲು ಯಾರು ಅರ್ಹರು? Eligible for pm kisan yojana
ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಪಿಎಂ ಕಿಸಾನ್ ಯೋಜನೆಯ ಸದುಪಯೋಗ ಪಡೆಯಬಹುದು. ಎರಡು ಹೆಕ್ಟೇರ್‌ವರೆಗಿನ ಕೃಷಿ ಭೂಮಿ ಹೊಂದಿರುವ ಯಾವುದೇ ರೈತರು ಸಹ ಈ ಯೋಜನೆಯ ಫಲಾನುಭವಿಗಳಾಗಬಹುದು.
ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ, ಜಮೀನು ಹೊಂದಿರುವ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ ಕಿಸಾನ್) ಲಾಭವನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ. ಈ ಯೋಜನೆಯಡಿ, ಅರ್ಹ ರೈತರು ವರ್ಷಕ್ಕೆ ₹6,000/- ಹಣವನ್ನು ಮೂರು ಸಮಾನ ಕಂತುಗಳಲ್ಲಿ ಪಡೆಯುತ್ತಾರೆ.
ಇದನ್ನೂ ಓದಿ: ಈ ಯೋಜನೆಯಡಿ ನಿಮ್ಮ ಮಗಳಿಗೆ 71 ಲಕ್ಷ ರೂ; ಅಕ್ಟೋಬರ್ 1ರಿಂದ ಹೊಸ ನಿಯಮ!
ಪಿಎಂ ಕಿಸಾನ್ ಯೋಜನೆಗೆ ಇವರು ಅರ್ಹರಲ್ಲ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಕೆಲವು ರೈತರು ಅರ್ಹರಲ್ಲ. ಆದಾಯ ತೆರಿಗೆ ಪಾವತಿಸುವ ರೈತರು ಈ ಯೋಜನೆಗೆ ಅರ್ಹರಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರು, ನಿವೃತ್ತಿ ಹೊಂದಿದವರು ಮತ್ತು ಕೃಷಿ ಭೂಮಿಯು ಸಂಸ್ಥೆಗಳ ಹೆಸರಿನಲ್ಲಿ ಇದ್ದರೆ, ಆ ಸಂಸ್ಥೆಯ ಮಾಲೀಕರು ಈ ಯೋಜನೆಗೆ ಅರ್ಹರಲ್ಲ. ವೈದ್ಯರು, ಇಂಜಿನಿಯರ್‌ಗಳು, ವಕೀಲರು, ಸಿಎಗಳು ಮತ್ತು ಇತರ ವೃತ್ತಿಪರರು ಈ ಯೋಜನೆಗೆ ಅರ್ಹರಲ್ಲ. 10 ರೂಪಾಯಿಗಿಂತ ಅಧಿಕ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು ಅರ್ಹರಲ್ಲ.
ಪಿಎಂ ಕಿಸಾನ್ ಸ್ಕಿಮ್ ನಲ್ಲಿ ನೀವು ಫಲಾನುಭವಿಯಾ ಎಂದು ಪರಿಶೀಲಿಸುವುದು ಹೇಗೆ? – pm kisan yojana beneficiary list
- ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬೈಟ್ www.pmkisan.gov.inಗೆ ಭೇಟಿ ನೀಡಿ
- ಫಾರ್ಮರ್ಸ್ ಕಾರ್ನರ್ ಸೆಕ್ಷನ್ನಲ್ಲಿ ‘ಬೆನಿಫಿಷಿಯರಿ ಸ್ಟೇಟಸ್’ ಅನ್ನು ಕಾಣಬಹುದು
- ಇಲ್ಲಿ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯುತ್ತದೆ
- ಇಲ್ಲಿ ನೊಂದಾಯಿತ ಮೊಬೈಲ್ ನಂಬರ್, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ಆಧಾರ್ ನಂಬರ್ ಅನ್ನು ತುಂಬಬೇಕು
- ಕ್ಯಾಪ್ಟಾ ಕೋಡ್ ಹಾಕಿ, ‘ಗೆಟ್ ಡಾಟಾ’ ಕ್ಲಿಕ್ ಮಾಡಿದಾಗ ನಿಮ್ಮ ಬೆನಿಫಿಷಿಯರಿ ಸ್ಟೇಟಸ್ ಏನು ಎಂಬುದು ಗೊತ್ತಾಗುತ್ತದೆ
ಇದನ್ನೂ ಓದಿ: Postal Life Insurance : ಏನಿದು ಪೋಸ್ಟಲ್ ಲೈಫ್ ಇನ್ಸುರೆನ್ಸ್? ಕೇವಲ 399 ರೂಗೆ ಸಿಗಲಿದೆ 10 ಲಕ್ಷ ರೂ..!
ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? Application for pm kisan yojana
- ಅಧಿಕೃತ ವೆಬ್‌ಸೈಟ್ www.pmkisan.gov.inಗೆ ಭೇಟಿ ನೀಡಿ
- ಹೋಮ್ ಪೇಜ್‌ನಲ್ಲಿ ಫಾರ್ಮರ್ ಕಾರ್ನರ್ ತೆರೆಯಿರಿ
- ನಂತರ ನ್ಯೂ ಫಾರ್ಮರ್ ರಿಜಿಸ್ಟ್ರೇಶನ್ ಕ್ಲಿಕ್ಕಿಸಿ
- ಆಧಾರ್, ಮೊಬೈಲ್ ಸಂಖ್ಯೆಯನ್ನು ನಮೂದಿಸಿ
- ಕ್ಯಾಪ್ಟ ಕೋಡ್ ನಮೂದಿಸಿ
- ಮುಂದಿನ ಪುಟದಲ್ಲಿ ವಿವರಗಳನ್ನು ಭರ್ತಿಗೊಳಿಸಿ
- ಬ್ಯಾಂಕ್ ಖಾತೆಯ ವಿವರಗಳನ್ನು ಸಲ್ಲಿಸಬೇಕು
- ನಂತರ ಸಬ್‌ಮಿಟ್ ಮಾಡಬೇಕು