Postal Life Insurance : ಪೋಸ್ಟಲ್ ಲೈಫ್ ಇನ್ಸುರೆನ್ಸ್ ಕೂಡಾ ಸಾಮಾನ್ಯ ಜೀವವಿಮಾ ಕಂಪನಿಯಂತೆಯೇ ಕೆಲಸ ಮಾಡುತ್ತದೆ. ವಿಶೇಷವೆಂದರೆ ಈ ಪಾಲಿಸಿಗಳನ್ನು ನಿರ್ವಹಿಸುವುದು ಅಂಚೆ ಇಲಾಖೆ (Post office).
ಇದರಲ್ಲಿ ಕೇವಲ ಸಾಂಪ್ರದಾಯಿಕ ಜೀವವಿಮಾ ಪಾಲಿಸಿಗಳನ್ನು ಪಡೆಯಬಹುದಾಗಿದೆ. ಇದರಲ್ಲಿ ಟರ್ಮ ಇನ್ಸುರೆನ್ಸ್ ಯೋಜನೆಗಳು ಇಲ್ಲ. ಅಂಚೆ ಇಲಾಖೆಯು ತಮ್ಮ ನೌಕರರಿಗಾಗಿ 1994 ರಲ್ಲಿ ಪ್ರಥಮ ಬಾರಿಗೆ ಅಂಚೆ ಜೀವ ವಿಮೆ ಯೋಜನೆ ಆರಂಭಿಸಲಾಯಿತು. ಪ್ರಸ್ತುತ ಸಾಮಾನ್ಯ ಜನರಿಗಾಗಿ ನಾನಾ ರೀತಿಯ ಪಿಎಲ್‌ಐ ಯೋಜನೆಗಳಿವೆ.
ಇದನ್ನೂ ಓದಿ: ಯಜಮಾನಿಯರಿಗೆ ಗುಡ್ ನ್ಯೂಸ್: ಖಾತೆಗೆ ಹಣ ಪಾವತಿ ಕುರಿತು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ
Postal Life Insurance : ಪೋಸ್ಟ್ ಆಫೀಸ್ ವಿಮೆ ಪಡೆಯಲು ಯಾರು ಅರ್ಹರು?
ಪೋಸ್ಟ್ ಆಫೀಸ್ ಆರೋಗ್ಯ ವಿಮೆ ಪಡೆಯಲು 18 ರಿಂದ 65 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಮೇಲಿನ ಮೂರು ಪಾಲಿಸಿಗಳನ್ನು ತೆಗೆದುಕೊಳ್ಳಬಹುದು. ಈ ವಿಮೆ ಪಾಲಿಸಿಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಪಡೆಯಬೇಕು.
ಈ ವಿಮೆ ಬಡವರಿಗೆ, ಮಧ್ಯಮ ವರ್ಗ ಜನರಿಗೆ ಅತಿ ಹೆಚ್ಚು ಅನುಕೂಲವಾಗುತ್ತದೆ. ಕುಟುಂಬಕ್ಕೆ ಆಸರೆಯಾಗುವ ಈ ಜೀವ ವಿಮೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್: ಈ ದಿನ ರೈತರ ಖಾತೆಗೆ 18ನೇ ಕಂತಿನ ಹಣ ಜಮಾ
Postal Life Insurance : ವರ್ಷಕ್ಕೆ 755 ರೂ. ಪಾವತಿಸಿದರೆ ಸಿಗಲಿದೆ ಅಂಚೆ ಜೀವ ವಿಮೆ !
ತಮ್ಮ ಸಾವಿನ ನಂತರವೂ ಕುಟುಂಬಕ್ಕೆ ಆಸರೆಯಾಗಲಿ ಎಂದು ಜೀವ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವರು ಹೆಚ್ಚು ಟರ್ಮ್ ಪಾಲಿಸಿಗಳನ್ನು ತೆಗೆದುಕೊಂಡು ಕಷ್ಟಪಡುತ್ತಾರೆ. ಹಾಗಾದಾಗ ಅಂಚೆ ಜೀವ ವಿಮೆ ಮಾಡಿಸುವುದು ಬೆಸ್ಟ್.
ಅಂಚೆ ಕಚೇರಿಯಲ್ಲಿ ವರ್ಷಕ್ಕೆ 755 ರೂ. ಪಾವತಿಸಿದರೆ ಸಾಕು ಈ ವಿಮಾದಾರರು ಅಪಘಾತದಿಂದ ಮೃತಪಟ್ಟರೇ ನಾಮಿನಿಯಾದ ಕುಟುಂಬದ ಸದಸ್ಯನಿಗೆ 15 ಲಕ್ಷ ರೂ. ಸಿಗುತ್ತದೆ. ವಿಮೆ ತೆಗೆದುಕೊಂಡವರು ಶಾಶ್ವತ ಅಂಗವೈಕಲ್ಯಕ್ಕೆ ಒಳಾಗದರೂ 15 ಲಕ್ಷ ರೂ. ಪಾವತಿಸಲಾಗುತ್ತಿದೆ.
ಇದನ್ನೂ ಓದಿ: ಬಿಗ್‌ಬಾಸ್ ಕನ್ನಡ ಸೀಸನ್-11ರ ಸ್ಪರ್ಧಿಗಳು ಯಾರ‍್ಯಾರು? ಇಲ್ಲಿದೆ ಲಿಸ್ಟ್
Postal Life Insurance : ಕೇವಲ 399 ರೂ.ಗೆ ಸಿಗಲಿದೆ 10 ಲಕ್ಷ ರೂ. ಕವರೇಜ್..!
ಅಂಚೆ ಕಚೇರಿಯಲ್ಲಿ ಹಲವಾರು ಯೋಜನೆ, ಆರೋಗ್ಯ ವಿಮೆ ಬಗ್ಗೆ ಕೇಳಿದ್ದೀವಿ. ಅದರಲ್ಲೂ, 399 ರೂಪಾಯಿ ವಿಮಾ ಯೋಜನೆಯಲ್ಲಿ 10 ಲಕ್ಷದ ವರೆಗೆ ಕ್ಲೈಮ್ ಮಾಡ್ಬಹುದು. ಆಕಸ್ಮಿಕ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ, ಶಾಶ್ವತ ಭಾಗಶಃ ಅಂಗವೈಕಲ್ಯ ಮತ್ತು ಆಕಸ್ಮಿಕವಾಗಿ ಅಂಗವಿಕಲತೆ ಮತ್ತು ಪಾರ್ಶ್ವವಾಯು ಸಂಭವಿಸಿದಲ್ಲಿ ನಿಮಗೆ 10 ಲಕ್ಷ ರೂಪಾಯಿ ನೀಡುವ ಭರವಸೆಯನ್ನು ಈ ವಿಮೆ ಸಿಗಲಿದೆ.
Sukanya Samriddhi Yojana: ಈ ಯೋಜನೆಯಡಿ ನಿಮ್ಮ ಮಗಳಿಗೆ 71 ಲಕ್ಷ ರೂ; ಅಕ್ಟೋಬರ್ 1ರಿಂದ ಹೊಸ ನಿಯಮ!