Sukanya Samriddhi Yojana : ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಮಹತ್ವದ್ದಾಗಿದ್ದು,. ಯಾವುದೇ ಭಾರತೀಯ ಪ್ರಜೆ ತಮ್ಮ ಮಗಳ ಹೆಸರಿನಲ್ಲಿ ಈ ಯೋಜನೆಯನ್ನು ಆರಂಭಿಸಬಹುದು.
ಈ ಯೋಜನೆಗೆ ಅರ್ಹರಾಗಲು ಮಗಳ ವಯಸ್ಸು 0 ರಿಂದ 10 ವರ್ಷಗಳ ನಡುವೆ ಇರಬೇಕು. ಈ ಯೋಜನೆಯನ್ನು ಅಂಚೆ ಕಚೇರಿಯ ಯಾವುದೇ ಶಾಖೆಯಲ್ಲಿ ತೆರೆಯಬಹುದು. ಈ ಯೋಜನೆಯಡಿಯಲ್ಲಿ ನೀವು ಒಟ್ಟು 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಅದರ ಅನಂತರ 21 ವರ್ಷಗಳು ಪೂರ್ಣಗೊಂಡ ತಕ್ಷಣ ಪೂರ್ಣ ಮೊತ್ತವನ್ನು ಮುಕ್ತಾಯದ ಮೇಲೆ ನೀಡಲಾಗುತ್ತದೆ.
ಇದನ್ನೂ ಓದಿ: ಏನಿದು ಪೋಸ್ಟಲ್ ಲೈಫ್ ಇನ್ಸುರೆನ್ಸ್? ಕೇವಲ 399 ರೂಗೆ ಸಿಗಲಿದೆ 10 ಲಕ್ಷ ರೂ..!
Sukanya Samriddhi Yojana : ಇಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಿ
ಸುಕನ್ಯಾ ಸಮೃದ್ಧಿ ಯೋಜನೆ ವಿಶೇಷವಾಗಿ ಬಾಲಕಿಯರಿಗಾಗಿ ಪರಿಚಯಿಸಲಾಗಿದೆ. ಎನ್ಪಿಎಸ್ ವಾತ್ಸಲ್ಯ ಯೋಜನೆಯಡಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಖಾತೆಯನ್ನ ತೆರೆಯಬಹುದು. ಮಕ್ಕಳು ಮೇಜರ್ ಆದ ನಂತರ, ಆ ಖಾತೆಗಳನ್ನ ಸಾಮಾನ್ಯ ಎನ್ಪಿಎಸ್ ಖಾತೆಗಳಾಗಿ ಪರಿವರ್ತಿಸಲಾಗುತ್ತದೆ. 60 ವರ್ಷ ವಯಸ್ಸಾದ ನಂತರ, ಎನ್ಪಿಎಸ್ ನಿಧಿಯ ಶೇಕಡಾ 60 ರಷ್ಟು ಹಣವನ್ನ ಒಂದೇ ಬಾರಿಗೆ ಹಿಂಪಡೆಯಬಹುದು. ಉಳಿದ 40 ಪ್ರತಿಶತದೊಂದಿಗೆ ವರ್ಷಾಶನ ಯೋಜನೆಗಳನ್ನು ಖರೀದಿಸಬೇಕು. ಎನ್ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನೀವು 2 ಲಕ್ಷ ರೂ.ಗಳವರೆಗೆ ತೆರಿಗೆ ಕಡಿತವನ್ನ ಪಡೆಯಬಹುದು.
ಇದನ್ನೂ ಓದಿ: ಯಜಮಾನಿಯರಿಗೆ ಗುಡ್ ನ್ಯೂಸ್: ಖಾತೆಗೆ ಹಣ ಪಾವತಿ ಕುರಿತು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ
Sukanya Samriddhi Yojana : ಈ ಯೋಜನೆಯಲ್ಲಿ ನಿಮ್ಮ ಮಗಳು 71 ಲಕ್ಷ ರೂ. ಪಡೆಯಲು ಸಾಧ್ಯ..!
ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ವಾರ್ಷಿಕವಾಗಿ 1.5 ಲಕ್ಷ ರೂ.ಗಳನ್ನು 15 ವರ್ಷಗಳವರೆಗೆ ಠೇವಣಿ ಮಾಡಿ, ಅದರ ಮೇಲೆ ನಿಮಗೆ ಗರಿಷ್ಠ ಪ್ರಯೋಜನವನ್ನು ನೀಡಲಾಗುತ್ತದೆ. ಈ ಮೊತ್ತವನ್ನು 15 ವರ್ಷಗಳವರೆಗೆ ಠೇವಣಿ ಮಾಡಿದರೆ ಒಟ್ಟು 22,50,000 ರೂ. ಮುಕ್ತಾಯದ ಅನಂತರ 71,82,119 ರೂ. ಪಡೆಯಬಹುದು. ಬಡ್ಡಿಯಿಂದ ಪಡೆದ ಒಟ್ಟು ಮೊತ್ತ 49,32,119 ರೂ. ಮೆಕ್ಯೂರಿಟಿಯಲ್ಲಿ ಪಡೆದ ಈ ಮೊತ್ತದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್: ಈ ದಿನ ರೈತರ ಖಾತೆಗೆ 18ನೇ ಕಂತಿನ ಹಣ ಜಮಾ
Sukanya Samriddhi Yojana : ಅಕ್ಟೋಬರ್ 1ರಿಂದ ಹೊಸ ನಿಯಮ
ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆ ನೀಡುವ ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮಗಳಲ್ಲಿ ಬದಲಾವಣೆ, ಅಕ್ಟೋಬರ್ 1ರಿಂದ ಅನ್ವಯ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಆರಂಭಿಸಲಾದ ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಅಕ್ಟೋಬರ್ 1ರಿಂದ ಹೊಸ ನಿಯಮ ಅನ್ವಯವಾಗಲಿದೆ.
ಹೊಸ ನಿಯಮಗಳ ಪ್ರಕಾರ, ಕಾನೂನಾತ್ಮಕ ಪಾಲಕರು ಅಥವಾ ಪೋಷಕರಿಂದ ತೆರೆಯಲ್ಪಟ್ಟ ಖಾತೆಗಳು ಮುಂದುವರಿಯಬೇಕಾದರೆ ಅವುಗಳನ್ನು ಮೂಲ ಪೋಷಕರ ಅಡಿಯಲ್ಲಿ ವರ್ಗಾಯಿಸಬೇಕಾಗುತ್ತದೆ. ಅದರಂತೆ ಸುಕನ್ಯಾ ಸಮೃದ್ಧಿ ಖಾತೆಯನ್ನು ಪೋಷಕರ ಬದಲು ಅಜ್ಜಿಯರು ತೆರೆದಿದ್ದರೆ ರಕ್ಷಕತ್ವ ವರ್ಗಾವಣೆಯನ್ನು ಮಾಡಬೇಕು. ಇಲ್ಲದಿದ್ದರೆ ಅದನ್ನು ಕಾನೂನು ಪಾಲಕರಿಗೆ ವರ್ಗಾಯಿಸಲಾಗುತ್ತದೆ. ಒಂದೇ ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಖಾತೆಗಳಿದ್ದರೆ ಅವುಗಳನ್ನು ಮುಚ್ಚಬೇಕು.