New ration card : ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಆರಂಭ; ಇ-ಶ್ರಮ ಕಾರ್ಡ್ ಇದ್ದವರಿಗೂ ರೇಷನ್ ಕಾರ್ಡ್

New ration card :  ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಈಗ ಮತ್ತೆ ಅವಕಾಶ ನೀಡಲಾಗಿದೆ. ಅರ್ಹರು ಮೊಬೈಲ್, ಕಂಪ್ಯೂಟರ್, ಸೇವಾಸಿಂಧು,…

new ration card vijayaprabha news

New ration card :  ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿರುವವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಈಗ ಮತ್ತೆ ಅವಕಾಶ ನೀಡಲಾಗಿದೆ.

ಅರ್ಹರು ಮೊಬೈಲ್, ಕಂಪ್ಯೂಟರ್, ಸೇವಾಸಿಂಧು, ಗ್ರಾಮಾ ಒನ್ ಪೋರ್ಟಲ್​​ಗಳಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಈಗಾಗಲೇ ಪಡಿತರ ಚೀಟಿ ಹೊಂದಿರಬಾರದು, ಹೊಸದಾಗಿ ಮದುವೆಯಾದ ದಂಪತಿಗಳು ಅರ್ಹರು. ಅರ್ಜಿ ಸಲ್ಲಿಕೆಯ ಎಲ್ಲ ವಿವರಣೆಗಳಿಗೆ ಇಲಾಖೆಯ ವೇಬ್‌ಸೈಟ್‌ https://ahara.kar.nic.in/ ಬೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

ಇದನ್ನೂ ಓದಿ: 10 ಸಾವಿರ ಕುಟುಂಬಗಳ BPL ಕಾರ್ಡ್ ರದ್ದು: ಗೃಹಲಕ್ಷ್ಮಿ 2000 ರೂ ಬಂದ್!

Vijayaprabha Mobile App free

New ration card : ಇ-ಶ್ರಮ ನೋಂದಾಯಿತ ಕಾರ್ಮಿಕರಿಗೆ ರೇಷನ್ ಕಾರ್ಡ್

E-Shram Card

ಅರ್ಹ ಇ-ಶ್ರಮ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ವಿತರಣೆ ಕಾರ್ಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆರಂಭ ಆಗಿದ್ದು, ಅರ್ಜಿ ಸಲ್ಲಿಸುವ ವಿಧಾನಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಅರ್ಹ ಕಾರ್ಮಿಕರು ಆದ್ಯಾತಾ ಪಡಿತರ ಚೀಟಿ ಪಡೆಯಲು ನಿಮ್ಮ ಹತ್ತಿರದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯನ್ನು ಸಂಪರ್ಕಿಸಬಹುದಾಗಿದ್ದು, ಅರ್ಹರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 1800 425 9339 ಅಥವಾ ಸಹಾಯವಾಣಿ 1969ಕ್ಕೆ ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ: Ration Card EKYC : ಪಡಿತರ ಚೀಟಿದಾರರೇ ಗಮನಿಸಿ; `E-KYC’ ಮಾಡದಿದ್ದರೆ ಮುಂದಿನ ತಿಂಗಳಿನಿಂದ ಸಿಗಲ್ಲ ರೇಷನ್!

New ration card : ಪಡಿತರ ಚೀಟಿ ಪಡೆಯಲು ಸರ್ಕಾರಕ್ಕೆ ಮೋಸ ಮಾಡಿದ್ರೆ ಜೈಲುವಾಸ ಫಿಕ್ಸ್

ಪಡಿತರ ಚೀಟಿಯನ್ನು ಪಡೆಯಲು ಸರ್ಕಾರ ಅನೇಕ ಮಾನದಂಡಗಳನ್ನೂ ಸೂಚಿಸಿದ್ದು, ಸರ್ಕಾರದ ಮಾನದಂಡ ಪ್ರಕಾರ ಕಾರ್ ಅಥವಾ ಟ್ರ್ಯಾಕ್ಟರ್‌ ನಂತಹ ವಾಹನವನ್ನು ಹೊಂದಿದ್ದರೆ ಅವರು ಪಡಿತರ ಚೀಟಿಯನ್ನು ಹೊಂದಲು ಅರ್ಹರಲ್ಲ.

ಇನ್ನೂ ಮನೆಯಲ್ಲಿ ರೆಫ್ರಿಜರೇಟರ್‌ ಅಥವಾ ಏರ್ ಕಂಡಿಷನರ್‌ಗಳಂತಹ ವಸ್ತುಗಳನ್ನು ಹೊಂದಿದ್ದರೆ ಕೂಡ ಅಂತಹ ಮನೆಯನ್ನು ಪಡಿತರ ಚೀಟಿ ಯೋಜನೆಯಿಂದ ಅನರ್ಹಗೊಳಿಸಲಾಗುತ್ತದೆ. ಒಂದು ವೇಳೆ ಸರ್ಕಾರದ ತನಿಖೆ ವೇಳೆ ಪಡಿತರ ಚೀಟಿ ದುರುಪಯೋಗ ಮಾಡಿ ಸಿಕ್ಕಿಬಿದ್ದರೆ ದಂಡ ಅಥವಾ ಜೈಲು ಶಿಕ್ಷೆ ಸಿಗುವ ಸಾಧ್ಯತೆ ಇದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.