Mahalakshmi murder : ಮಹಿಳೆಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಿ 50 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ಆರೋಪಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕನಗರದಲ್ಲಿ ನಡೆದಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಹಾಗು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಮಹಾಲಕ್ಷ್ಮಿ (29) ಕೊಲೆಯಾದ ಮಹಿಳೆ. ವೈಯಾಲಿಕಾವಲ್‌ನ ಪೈಪ್‌ಲೈನ್ ರಸ್ತೆಯಲ್ಲಿ ಭೀಕರ ಹತ್ಯೆ ನಡೆದಿದೆ. ಮಹಿಳೆಯನ್ನು ಕೊಂದು ನಂತರ ಮೃತದೇಹವನ್ನು ಪೀಸ್ ಪೀಸ್ ಆಗಿ ಕತ್ತರಿಸಿ ಬಳಿಕ ಫ್ರಿಡ್ಜ್ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಆಧಾರ್ ಜೋಡಣೆ ಮಾಡಲು ಇಂದೇ ಕೊನೆದಿನ, ಮಾಡಿಸದಿದ್ದರೆ ಸಬ್ಸಿಡಿ ರದ್ದು- ಸ್ಪಷ್ಟನೆ
Mahalakshmi murder : ಕುರಿ ಮಾಂಸ ಕತ್ತರಿಸಿದಂತೆ ಮಹಾಲಕ್ಷ್ಮಿ ದೇಹ ಕತ್ತರಿಸಿದ ಹಂತಕ..!
ಮಹಾಲಕ್ಷ್ಮಿ ದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಜ್‌ನಲ್ಲಿಟ್ಟು ಹಂತಕ ಪರಾರಿಯಾಗಿದ್ದಾನೆ. ಈ ವೇಳೆ ದೇಹದ ತುಂಡುಗಳಿಂದ ರಕ್ತ ತೊಟ್ಟಿಕ್ಕಿದೆ. ಹಂತ ಹಂತವಾಗಿ ರಕ್ತ ಫ್ರೀಜ್ ನಿಂದ ತೊಟ್ಟಿಕ್ಕಲು ಆರಂಭಿಸಿದೆ. ರಕ್ತ ತೊಟ್ಟಿಕ್ಕಿ ನೆಲದ ಮೇಲೆ ಹರಿದಿದ್ದು, ಅದರಲ್ಲಿ ಗೊಬ್ಬರ ಮಾದರಿಯ ಹುಳಗಳು ಜನ್ಮತಾಳಿವೆ ಎನ್ನಲಾಗಿದೆ. ಸದ್ಯ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡದಿಂದ ಮಾಹಿತಿ ಕಲೆಹಾಕಾಗುತ್ತಿದೆ. ಈ ವೇಳೆ ಸೋಕೊ, ಎಫ್ ಎಸ್ ಎಲ್ ಅವರಿಂದ ಎಲ್ಲಾ ಆಯಾಮ ದಲ್ಲಿ ಸ್ಯಾಂಪಲ್ ಕಲೆ ಹಾಕಲಾಗುತ್ತಿದೆ.
ಇದನ್ನೂ ಓದಿ: ದ್ವಿತೀಯ ಪಿಯಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್
Mahalakshmi murder ಈ ನಾಲ್ವರ ಮೇಲೆ ಅನುಮಾನ
ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಮಹಾಲಕ್ಷ್ಮಿ ಕೊಲೆ ಪ್ರಕರಣದಲ್ಲಿ, ಕುಟುಂಬದವರು ನೀಡಿದ ಸುಳಿವಿನ ಆಧಾರದ ಮೇಲೆ ಪೊಲೀಸರು ನಾಲ್ವರ ಬೆನ್ನು ಬಿದ್ದಿದ್ದಾರೆ. ವೈಯಾಲಿಕಾವೆಲ್ ಪೊಲೀಸರು ಒಟ್ಟು ನಾಲ್ಕು ಮಂದಿಯ ಹುಡುಕಾಟದಲ್ಲಿದ್ದಾರೆ.
ಮಹಾಲಕ್ಮೀಯ ಗಂಡ ಅಶ್ರಫ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೆ, ಮಹಾಲಕ್ಷ್ಮಿ ತಮ್ಮನಿಂದ ಮೂವರ ಮೇಲೆ ಅನುಮಾನ ವ್ಯಕ್ತವಾಗಿದೆ. ಶಶಿಧರ್, ಸುನೀಲ್ ಶಾಪ್ ಮ್ಯಾನೇಜರ್, ಮುಕ್ತ ಅವರ ಮೇಲೆ ಅನುಮಾನ ಪಟ್ಟಿದ್ದು ಈ ನಾಲ್ವರ ಹುಡುಕಾಟದಲ್ಲಿ ಪೊಲೀಸ್ ಇದ್ದಾರೆ.
ಇದನ್ನೂ ಓದಿ: ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ.. ಸುಪ್ರೀಂ ಐತಿಹಾಸಿಕ ತೀರ್ಪು
Mahalakshmi murder ಆರೋಪಿ ಪತ್ತೆಗೆ ಆರು ವಿಶೇಷ ತಂಡ ರಚನೆ
ವೈಯಾಲಿಕಾವಲ್ ಮಹಿಳೆಯ ಭೀಕರ ಹತ್ಯೆ ಪ್ರಕರಣದ ಆರೋಪಿ ಪತ್ತೆಗೆ ಪೊಲೀಸರು ಆರು ವಿಶೇಷ ತಂಡ ರಚನೆ ಮಾಡಿದ್ದಾರೆ. ಕೃತ್ಯ ನಡೆದು ಹತ್ತು ದಿನಗಳಾಗಿರುವ ಹಿನ್ನೆಲೆಯಲ್ಲಿ ಆರೋಪಿ ಹೊರರಾಜ್ಯಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ. ಜತೆಗೆ ಕೃತ್ಯ ನಡೆಸಿ ತನ್ನ ಚಹರೆಯನ್ನೇ ಬದಲಿಸಿರುವ ಶಂಕೆಯೂ ಇದೆ.
ಕೃತ್ಯ ನಡೆದ ಬಳಿಕ ತಕ್ಷಣ ಆರೋಪಿಯ ಬಂಧನ ಮಾಡಬೇಕು. ಸಾಕ್ಷಿನಾಶ , ಹೊರರಾಜ್ಯಗಳಲ್ಲಿ ಪರಾರಿಯಾಗಲು ಅವಕಾಶ ಸಿಕ್ಕಿದರೆ ಆರೋಪಿಯ ಬಂಧನ ತುಸು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಟೀಂ, ಆನ್ ಫೀಲ್ಡ್ ಟೀಂ , ಎನ್ಕೌರಿ ಟೀಂ ಎಂದು ಆರು ತಂಡಗಳನ್ನು ಕೇಂದ್ರ ವಿಭಾಗ ಪೊಲೀಸರು ರಚನೆ ಮಾಡಿದ್ದಾರೆ.
ಮಹಾಲಕ್ಷ್ಮಿ ಕೊಲೆಗೆ ಪರಸಂಗದ ಅನುಮಾನ..?
ಮಹಾಲಕ್ಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸಂಗದ ಪೀಕಲಾಟಕ್ಕೆ ಕೊಲೆಯಾದಳಾ ಎಂಬ ಹಲವು ಅನುಮಾನ ಮೂಡಿದೆ. ಮೆನ್ಸ್ ಬ್ಯೂಟಿ ಪಾರ್ಲರ್ ವ್ಯಕ್ತಿ ಜತೆ ಮಹಾಲಕ್ಷ್ಮಿ ಆತ್ಮೀಯವಾಗಿ ಇದ್ದಳು. ಆದರೆ ಕೆಲ ದಿನಗಳಿಂದ ಇಬ್ಬರ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು ಎನ್ನಲಾಗಿದೆ. ಹೀಗಾಗಿ ಮೆನ್ಸ್ ಪಾರ್ಲರ್ ವ್ಯಕ್ತಿಯ ಮೇಲೆ ಅನುಮಾನ ಮೂಡಿದೆ. ಸದ್ಯ ಎರಡು ದಿನಗಳ ಹಿಂದೆ ಮನೆಯ ಬಳಿ ಬಂದು ಬಾಗಿಲು ತೆಗೆದು ಪರಾರಿ ಆಗಿದ್ದಾನೆ. 8 ದಿನವಾದರೂ ಯಾರಿಗೂ ವಿಷಯ ತಿಳಿಯದ ಕಾರಣ, ಮನೆ ಬಾಗಿಲು ತೆಗೆದು ಪರಾರಿ ಆಗಿದ್ದಾನೆ.
ಗಂಡನ ಬಿಟ್ಟು ಅಶ್ರಫ್ ಹಿಂದೆ ಬಂದಿದ್ದಳಾ ಮಹಾಲಕ್ಷ್ಮೀ?
ಮಹಾಲಕ್ಷ್ಮಿ ಕೊಲೆ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಪ್ರಕರಣದ ಸುತ್ತ ಅನುಮಾನದ ಹುತ್ತ ಸೃಷ್ಟಿಯಾಗಿದೆ. ಮಹಿಳೆ ಜೊತೆಗೆ ಸ್ನೇಹ ಬೆಳೆಸಿದ್ದ ಮೆನ್ಸ್ ಪಾರ್ಲರ್ ವ್ಯಕ್ತಿ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ಮಹಾಲಕ್ಷ್ಮೀ ಜೊತೆಗೆ ಆತ್ಮಿಯತೆ ಹೊಂದಿದ್ದ,. ಆದರೆ 2 ತಿಂಗಳ ಹಿಂದೆ ಇಬ್ಬರ ಮಧ್ಯೆ ಬಿರುಕು ಉಂಟಾಗಿದೆ ಅನ್ನೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮೆನ್ಸ್ ಪಾರ್ಲರ್ ವ್ಯಕ್ತಿಯ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಗಂಡನಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಮಹಾಲಕ್ಷ್ಮಿ
ಮಹಾಲಕ್ಷ್ಮೀ ತನ್ನ ಗಂಡನಿಗೆ ಆದಾಗ ಕಿರುಕುಳ ನೀಡುತ್ತಿದ್ದಳು ಎಂದು ಹೇಳಲಾಗುತ್ತಿದೆ. ಮಹಾಲಕ್ಷ್ಮೀ ಆಗಾಗ ಹಣ ಬೇಕೆಂದು ಗಂಡನನ್ನು ಪೀಡಿಸುತ್ತಿದ್ದಳು. ಹಣ ಕೊಡದಿದ್ದರೆ ಮೊಬೈಲ್ ಶಾಪ್ ಬಳಿಯೇ ಹಲ್ಲೆ ಮಾಡುತ್ತಿದ್ದಳು. ಹೇಮಂತ್ ದಾಸ್‌ನ ಎದೆ ಹಾಗೂ ಹೊಟ್ಟೆಗೆ ಕಚ್ಚುತ್ತಿದ್ದಳು. ಹಣದ ವಿಚಾರಕ್ಕೆ, ದಾಂಪತ್ಯದಲ್ಲಿ ಖುಷಿ ಇಲ್ಲವೆಂದು ಪದೇಪದೆ ಜಗಳ ನಡೆಯುತ್ತಿತ್ತು. ಇದಕ್ಕೆಲ್ಲ ಬೇಸತ್ತು ಪತಿ 2023ರ ಡಿಸೆಂಬರ್ 1ರಂದು ನೆಲಮಂಗಲ ಟೌನ್ ಠಾಣೆಗೆ ದೂರು ನೀಡಿದ್ದರು.
ಪಶ್ಚಿಮ ಬಂಗಾಳದಲ್ಲಿ ಮಹಾಲಕ್ಷ್ಮೀ ಹಂತಕ?
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಮಹಾಲಕ್ಷ್ಮೀ ಭೀಕರ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಸಂಬಂಧ ಆರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಶಂಕಿತ ಆರೋಪಿ ಪಶ್ಚಿಮ ಬಂಗಾಳದಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆಯಿದ್ದು, ಆತನ ಪತ್ತೆಗೆ ತಂಡ ತೆರಳಿದೆ. ಶೀಘ್ರದಲ್ಲೇ ಪ್ರಕರಣ ಭೇದಿಸುವ ವಿಶ್ವಾಸವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪತಿಯಿಂದ ದೂರವಾದ ಬಳಿಕ ಯುವಕನೊಬ್ಬನ ಜೊತೆ ಮಹಾಲಕ್ಷ್ಮೀ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹೇಳಲಾಗುತ್ತಿದೆ.