Agricultural pumpset aadhaar linking : ಇದು ರೈತರು ಓದಲೇಬೇಕಾದ ಸುದ್ದಿ. ಕೃಷಿ ನೀರಾವರಿ ಪಂಪ್‌ಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್‌ಸೆಟ್‌ನ RR ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಲು ಇಂದು(ಸೆ.23) ಕೊನೆಯ ದಿನವಾಗಿದ್ದು, ಇನ್ನೂ ಜೋಡಣೆ ಮಾಡಿಕೊಳ್ಳದವರಿಗೆ ಸಹಾಯಧನ ಬಿಡುಗಡೆಗೆ ತೊಂದರೆಯಾಗುವ ಸಾಧ್ಯತೆಯಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಹಾಗು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ತನ್ನ 2024-25ರ ವಿದ್ಯುತ್ ದರ ಪರಿಷ್ಕರಣೆ ಆದೇಶದಲ್ಲಿ ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದ್ದು, ಎಲ್ಲಾ ಎಸ್ಕಾಂಗಳು 10 ಎಚ್‌ಪಿ ಸಾಮರ್ಥ್ಯದ ಪಂಪ್ ಸೆಟ್‌ಗಳನ್ನು ಹೊಂದಿರುವ ರೈತರಿಂದ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುತ್ತಿವೆ.
ಇದನ್ನೂ ಓದಿ: ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ; ಅರ್ಜಿಯಲ್ಲಿ ಏನಿದೆ ಗೊತ್ತಾ..?
Agricultural pumpset aadhaar linking; ಇಂದೇ ಕೊನೆ ದಿನ
ಇದು ರೈತರು ಓದಲೇಬೇಕಾದ ಸುದ್ದಿ. ಕೃಷಿ ನೀರಾವರಿ ಪಂಪ್‌ಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್‌ಸೆಟ್‌ನ RR ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಿಸಬೇಕು. ವಿಫಲವಾದರೆ ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡದ RR ಸಂಖ್ಯೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಸಬ್ಸಿಡಿ ಬಿಡುಗಡೆ ಮಾಡುವುದಿಲ್ಲ ಎಂದು KERC ತನ್ನ ಆದೇಶದಲ್ಲಿ ಈಗಾಗಲೇ ತಿಳಿಸಿದೆ. ಆಧಾರ್ ಲಿಂಕ್ ಮಾಡಲು ಇಂದು ಕೊನೆಯ ದಿನವಾಗಿದೆ.
ಇದನ್ನೂ ಓದಿ: ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯದಲ್ಲಿ ಉದ್ಯೋಗಾವಕಾಶ: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Agricultural pumpset aadhaar linking; ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ
ಈ ಬಗ್ಗೆ ಸ್ಪಷ್ಟಣೆ ನೀಡಿರುವ ಇಂಧನ ಸಚಿವ ಕೆಜೆ ಜಾರ್ಜ್, ಕೃಷಿ ಪಂಪ್‌ಗಳಿಗೆ ಆಧಾರ್ ಜೋಡಿಸದ ರೈತರಿಗೆ ಆತಂಕ ಬೇಡ. ಒಟ್ಟು 34ಲಕ್ಷ ಪೈಕಿ 32ಲಕ್ಷ(95.4%) ಕೃಷಿ ಪಂಪ್‌ಸೆಟ್‌ಗಳಿಗೆ ಈಗಾಗಲೇ ಆಧಾರ್ ಲಿಂಕ್ ಆಗಿದೆ. ಇದರಿಂದ ಅರ್ಹರಿಗೆ ಸಹಾಯಧನ ಹೋಗುತ್ತಿದೆಯೇ ಎನ್ನುವುದು ಗೊತ್ತಾಗಲಿದ್ದು, ಲಿಂಕ್ ಮಾಡದವರಿಗೆ ಸಹಾಯಧನ ಕಡಿತ ಮಾಡುವುದಿಲ್ಲ ಎಂದಿದ್ದಾರೆ. ಇಂದೇ ನಿಮ್ಮ ಸಮೀಪದ ಬೆಸ್ಕಾಂ ಶಾಖಾ ಕಚೇರಿಗೆ ತೆರಳಿ ಜೋಡಣೆ ಮಾಡಿಸಿ.