ತೆರಿಗೆದಾರರು ಅಟಲ್ ಪಿಂಚಣಿ ಯೋಜನೆಗೆ ಸೇರಲು ಅರ್ಹರಲ್ಲ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಹೊಸ ನಿಯಮ ಅಕ್ಟೋಬರ್ 1, 2022 ರಿಂದ ಜಾರಿಗೆ ಬರಲಿದೆ.
ಹೌದು, ಕೇಂದ್ರ ಹಣಕಾಸು ಆಯೋಗ ಗೆಜೆಟ್ ಅಧಿಸೂಚನೆಯ ಪ್ರಕಾರ, ಆದಾಯ ತೆರಿಗೆ ಪಾವತಿಸುವ ಯಾರಾದರೂ ಅಕ್ಟೋಬರ್ 1 2022 ರಿಂದ ಅಟಲ್ ಪಿಂಚಣಿ ಯೋಜನೆಗೆ ಸೇರಲು ಸಾಧ್ಯವಿಲ್ಲ. ಯಾರಾದರೂ ಅಕ್ಟೋಬರ್ 1ರಂದು ಅಥವಾ ನಂತರ ಯೋಜನೆಗೆ ಸೇರಿದರೆ ಆದಾಯ ತೆರಿಗೆ ಪಾವತಿದಾರರು ಎಂದು ಗುರುತಿಸಿಕೊಂಡರೆ ಖಾತೆಯು ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.
ಈ ಯೋಜನೆ ಮೇ 2015ರಲ್ಲಿ ಆರಂಭವಾಗಿದ್ದು, 4.01 ಕೋಟಿ ಜನರು ಇದರ ಲಾಭ ಪಡೆಯುತ್ತಿದ್ದಾರೆ. ಅಟಲ್ ಪಿಂಚಣಿ ಯೋಜನೆ ನಿಯಮಗಳ ಪ್ರಕಾರ 18 ರಿಂದ 40 ವರ್ಷದೊಳಗಿನವರು ಈ ಯೋಜನೆಗೆ ಸೇರಬಹುದು. ಮಾಸಿಕ ₹ 42 ರಿಂದ ₹ 1,454 ವರೆಗೆ ಠೇವಣಿ ಮಾಡಿದರೆ 60 ವರ್ಷಗಳ ಬಳಿಕ ₹ 1,000 – ₹ 5,000 ವರೆಗೆ ಪಿಂಚಣಿ ಸಿಗುತ್ತದೆ.




