Kannada Rajyotsava : ಇಂದು ಕರುನಾಡು ತುಂಬಾ ಕನ್ನಡ ರಾಜ್ಯೋತ್ಸವದ ಸಂಭ್ರಮ. 69ನೇ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಇನ್ನು, ಸಿಎಂ ಸಿದ್ದರಾಮಯ್ಯ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದಕ್ಕೂ ಮುನ್ನ ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸಂತೋಷ ಕೂಟ ಆಯೋಜಿಸಲಾಗಿದೆ. ಸಿಎಂ, ಡಿಸಿಎಂ, ಸಚಿವರು ಮತ್ತು ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Kannada Rajyotsava Award | ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2024ರ ಪಟ್ಟಿ ಪ್ರಕಟ; ಸಂಪೂರ್ಣ ಪಟ್ಟಿ ಇಲ್ಲಿದೆ
Kannada Rajyotsava : ಉಸಿರಾಗಲಿ ಕನ್ನಡ.. ಹಸಿರಾಗಲಿ ಕರ್ನಾಟಕ
ಇಂದು ನವೆಂಬರ್ ೧. ಕರ್ನಾಟಕ ರಾಜ್ಯ ಉದಯವಾದ ದಿನ. ಸಮಸ್ತ ಕನ್ನಡಿಗರಿಗೆ ವಿಜಯಪ್ರಭ ನ್ಯೂಸ್ ಕನ್ನಡ ಕಡೆಯಿಂದ ರಾಜ್ಯೋತ್ಸವದ ಶುಭಾಶಯಗಳು. ‘ಕಾವೇರಿಯಿಂದ ಗೋದಾವರಿವರಮಿರ್ದ..’ ಎಂದು ಹೇಳಿದಾಗ ಇಂಗ್ಲಿಷ್ ತೊಟ್ಟಿಲಲ್ಲಿತ್ತು. ಇನ್ನು, ಹಿಂದಿಯ ಜನನವೇ ಆಗಿರಲಿಲ್ಲ. ಅಂತಹ ಒಂದು ಅದ್ಭುತವಾದ ಪ್ರಾಚೀನ ಭಾಷೆ ನಮ್ಮ ಕನ್ನಡ. ಅದು ನಮ್ಮ ಹೆಮ್ಮೆ. ಕನ್ನಡ ಬಳಸಿ, ಕನ್ನಡ ಬೆಳೆಸಿ.
ಇದನ್ನೂ ಓದಿ: Diwali Lakshmi Puja | ಇಂದು ದೀಪಾವಳಿ, ಲಕ್ಷ್ಮಿ ಪೂಜೆ ಹೀಗೆ ಮಾಡಿ; ದೇವಿ ಕೃಪೆಗೆ ಪಾತ್ರರಾಗಿ
Kannada Rajyotsava : ಕನ್ನಡ ರಾಜ್ಯೋತ್ಸವದ ಸಂದೇಶಗಳು
- ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು – ಹುಯಿಲಗೋಳ ನಾರಾಯಣರಾವ್
- ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಅನ್ಯವೆನಲದೆ ಮಿಥ್ಯ! – ಕುವೆಂಪು
- ಕನ್ನಡ ಉಳಿಸಿ – ಕನ್ನಡ ಬೆಳಸಿ ಕನ್ನಡವನೆ ಬಳಸಿ – ಪು.ತಿ.ನರಸಿಂಹಾಚಾರ್
- ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು- ಕುವೆಂಪು
- ಕನ್ನಡವೆ ಧನಧಾನ್ಯ ಕನ್ನಡವೆ ಮನೆಮಾನ್ಯ ಕನ್ನಡವೆಯೆನಗಾಯ್ತು ಕಣ್ಣು ಕಿವಿ ಬಾಯಿ- ಬೆನಗಲ್ ರಾಮರಾವ್