Vaikuntha Ekadashi | ವೈಕುಂಠ ಏಕಾದಶಿ ಉಪವಾಸ ಆಚರಣೆ ಹೇಗೆ & ಅದರ ಮಹತ್ವ

Vaikuntha Ekadashi : ಈ ವರ್ಷ ವೈಕುಂಠ ಏಕಾದಶಿಯು (Vaikuntha Ekadashi) ಜನವರಿ 9 ರ೦ದು ಮಧ್ಯಾಹ್ನ 12:22 ಕ್ಕೆ ಪ್ರಾರಂಭವಾಗಿ ಜನವರಿ 10 (ಇಂದು) ರಂದು ಬೆಳಿಗ್ಗೆ 10:19 ಕ್ಕೆ ಕೊನೆಗೊಳ್ಳಲಿದೆ. ಉದಯ…

Vaikuntha Ekadashi

Vaikuntha Ekadashi : ಈ ವರ್ಷ ವೈಕುಂಠ ಏಕಾದಶಿಯು (Vaikuntha Ekadashi) ಜನವರಿ 9 ರ೦ದು ಮಧ್ಯಾಹ್ನ 12:22 ಕ್ಕೆ ಪ್ರಾರಂಭವಾಗಿ ಜನವರಿ 10 (ಇಂದು) ರಂದು ಬೆಳಿಗ್ಗೆ 10:19 ಕ್ಕೆ ಕೊನೆಗೊಳ್ಳಲಿದೆ. ಉದಯ ತಿಥಿಯ ಪ್ರಕಾರ, ವೈಕುಂಠ ಏಕಾದಶಿಯ ಉಪವಾಸವನ್ನು ಜನವರಿ 10 (ಇಂದು) ರಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: Rashi bhavishya | ಶುಕ್ರವಾರದ ರಾಶಿ ಭವಿಷ್ಯ, 10 ಜನವರಿ 2025

Vaikuntha Ekadashi ಉಪವಾಸದ ಮಹತ್ವ

Vaikuntha Ekadashi

Vijayaprabha Mobile App free

ವೈಕುಂಠ ಏಕಾದಶಿಯಂದು ಉಪವಾಸ ಮಾಡುವವರ ಎಲ್ಲಾ ಪಾಪಗಳು ನಾಶವಾಗುತ್ತವೆ. ಉಪವಾಸ ಮತ್ತು ಪೂಜೆ ಮಾಡುವವರಿಗೆ ವಿಷ್ಣುವಿನ ವಿಶೇಷ ಅನುಗ್ರಹ ದೊರಕುತ್ತದೆ. ಉಪವಾಸದಿಂದ ಪ್ರಾಪಂಚಿಕ ಸುಖ ಸಿಗುವುದಲ್ಲದೆ, ಮರಣಾನಂತರ ಮೋಕ್ಷವು ಸಿಗುತ್ತದೆ ಎ೦ದು ನ೦ಬಲಾಗಿದೆ.

ಇದನ್ನೂ ಓದಿ: Tuesday Puja Method | ಮಂಗಳವಾರ ಹೀಗೆ ಮಾಡಿದರೆ ಎಲ್ಲ ಸಮಸ್ಯೆಗಳು ಮಾಯ

Vaikuntha Ekadashi ಪೂಜಾ ವಿಧಾನ

  • ಬ್ರಾಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು.
  • ಬಳಿಕ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಬೇಕು. ನಂತರ ಅಲ್ಲಿ ವಿಷ್ಣುವಿನ ವಿಗ್ರಹ ಅಥವಾ ಚಿತ್ರವನ್ನು ಇಡಬೇಕು.
  • ಉಪವಾಸ ವ್ರತವನ್ನು ಆರಂಭಿಸಬೇಕು.
  • ವಿಷ್ಣುವಿಗೆ ನೀರಿನಿಂದ ಅಭಿಷೇಕ ಮಾಡಬೇಕು.
  • ಅಭಿಷೇಕದ ನಂತರ ಗಂಧ ಮತ್ತು ಹೂವುಗಳನ್ನು ಅರ್ಪಿಸಬೇಕು.
  • ನಂತರ ವಿಷ್ಣುವಿನ ಮಂತ್ರಗಳನ್ನು ಜಪಿಸಬೇಕು.
  • ಹಣ್ಣುಗಳು ಮತ್ತು ನೈವೇದ್ಯವನ್ನು ವಿಷ್ಣುವಿಗೆ ಅರ್ಪಿಸಿ ಬಳಿಕ ಆರತಿ ಮಾಡಬೇಕು.

ಇದನ್ನೂ ಓದಿ: Household items | ಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ ಎದುರಾಗುತ್ತದೆ ದುರಾದೃಷ್ಟ

ಲಕ್ಷ್ಮಿಯ ಅನುಗ್ರಹ

ಮುಕ್ಕೋಟಿ ಏಕಾದಶಿಯೆ೦ದು ಕರೆಯಲ್ಪಡುವ ಈ ಏಕಾದಶಿಯು ವಿಷ್ಣುವಿಗೆ ಶ್ರೇಯಸ್ಕರವಾದ ದಿನವಾಗಿದೆ. ಈ ದಿನ ಪೂಜೆ ಮಾಡಿದರೆ ನೀವು ವಿಷ್ಣು ದೇವರ ಅನುಗ್ರಹ ಮಾತ್ರವಲ್ಲದೆ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯಬಹುದು. ಹಾಗಾಗಿ ಈ ದಿನ ದಾನಗಳನ್ನು, ಅಗತ್ಯವಿರುವವರಿಗೆ ಸಹಾಯವನ್ನೂ ತಪ್ಪದೆ ಮಾಡಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.