Diwali Lakshmi Puja : ಇಂದು ದೀಪಾವಳಿಯಂದು (Diwali) ಲಕ್ಷ್ಮಿ ಪೂಜೆ (Lakshmi Puja) ಮಾಡಿ, ದೇವಿ ಕೃಪೆಗೆ ಪಾತ್ರರಾಗುವುದು ಹೇಗೆ ಎಂದು ತಿಳಿಯೋಣ..
Diwali Lakshmi Puja : ಪೂಜಾ ವಿಧಾನ
ದೀಪಾವಳಿಯಂದು ಪೂಜೆಗೂ ಮುನ್ನ ಮನೆಯನ್ನು ಶುದ್ಧಗೊಳಿಸಿ, ಗಂಗಾಜಲವನ್ನು ಸಿಂಪಡಿಸಿ. ಮರದ ಪೀಠ ಅಥವಾ ಮಣೆಯ ಮೇಲೆ ಕೆ೦ಪು ಬಟ್ಟೆಯನ್ನು ಬಿಡಿಸಿಡಿ. ಮಧ್ಯದಲ್ಲಿ ಒಂದು ಹಿಡಿ ಧಾನ್ಯಗಳನ್ನು ಇರಿಸಿ.
ಇದನ್ನೂ ಓದಿ: Deepavali : ಐದು ದಿನದ ದೀಪಾವಳಿ ಆಚರಣೆ ಮಹತ್ವ, ಪೂಜಾ ಸಮಯ
Diwali Lakshmi Puja : ಕಲಶ ಸ್ಥಾಪನೆ
ಧಾನ್ಯಗಳ ಮಧ್ಯದಲ್ಲಿ ಕಲಶವನ್ನು ಇರಿಸಿ. ಕಲಶವನ್ನು ನೀರಿನಿಂದ ತು೦ಬಿಸಿ ಮತ್ತು ಒ೦ದು ವೀಳ್ಯದೆಲೆ, ಚೆಂಡು ಹೂವು, ಒಂದು ನಾಣ್ಯ ಮತ್ತು ಕೆಲವು ಅಕ್ಷತೆಗಳನ್ನು ಕಲಶದಲ್ಲಿ ಹಾಕಿ. ನಂತರ, ವ್ಯಾಪಾರಕ್ಕೆ ಸ೦ಬ೦ಧಿಸಿದ ವಸ್ತುಗಳನ್ನು ವಿಗ್ರಹದ ಮುಂದೆ ಇರಿಸಿ.
ತಿಲಕ ಹಚ್ಚಬೇಕು
ಲಕ್ಷ್ಮಿ ದೇವಿ ಮತ್ತು ಗಣೇಶನ ಮೂರ್ತಿಗೆ ಅಥವಾ ಚಿತ್ರಕ್ಕೆ ತಿಲಕವನ್ನು ಹಚ್ಚಿ ಮತ್ತು ದೀಪವನ್ನು ಬೆಳಗಿಸಿ. ಇದರೊಂದಿಗೆ ಕಲಶದ ಮೇಲೂ ತಿಲಕವನ್ನು ಹಚ್ಚಿ. ಹೂವುಗಳನ್ನು ಅರ್ಪಿಸಿದ ನಂತರ, ಪೂಜೆಗಾಗಿ ಕೈಯಲ್ಲಿ ಹೂವುಗಳನ್ನು ಹಿಡಿದುಕೊಳ್ಳಿ.
ಆರತಿ
ಕಣ್ಣುಮುಚ್ಚಿ ದೀಪಾವಳಿ ಪೂಜೆ ಮಂತ್ರವನ್ನು ಪಠಿಸಿ. ಕೈಯಲ್ಲಿ ಹಿಡಿದುಕೊಂಡಿರುವ ಹೂವನ್ನು ಗಣೇಶ ಮತ್ತು ಲಕ್ಷ್ಮಿಗೆ ಅರ್ಪಿಸಿ. ಒಂದು ತಟ್ಟೆಯಲ್ಲಿ ದೀಪವನ್ನು ತೆಗೆದುಕೊಂಡು, ಪೂಜೆಯ ಗ೦ಟೆಯನ್ನು ಬಾರಿಸಿ ಮತ್ತು ಲಕ್ಷ್ಮಿ ದೇವಿಗೆ ಆರತಿಯನ್ನು ಮಾಡಿ.
ಇದನ್ನೂ ಓದಿ : Diwali Rashi Prediction 2024 : ಈ ದೀಪಾವಳಿಯಿಂದ ವರ್ಷವಿಡೀ ಈ ರಾಶಿಗಳ ಮೇಲೆ ಲಕ್ಷ್ಮಿ ದೇವಿಯ ವಿಶೇಷ ಕೃಪೆ; ನಿಮ್ಮ ರಾಶಿ ಇದೆಯೇ..?
ವಿಗ್ರಹ ಪೂಜೆ
ಲಕ್ಷ್ಮಿದೇವಿಯ ವಿಗ್ರಹಕ್ಕೆ ಮೊದಲು ನೀರಿನ ಅಭಿಷೇಕವನ್ನು ಮಾಡಿ, ನಂತರ ಪಂಚಾಮೃತ ಅಭಿಷೇಕವನ್ನು ಮಾಡಿ. ಪುನಃ ಮೂರ್ತಿಗೆ ನೀರಿನ ಅಭಿಷೇಕವನ್ನು ಮಾಡಿ ಪೂಜೆಗೆ ಇಡಬೇಕು. ಮೂರ್ತಿಗೆ ಅರಿಶಿನ, ಕುಂಕುಮ ಮತ್ತು ಅಕ್ಷತೆಯನ್ನು ಹಾಕಿ. ದೇವಿಯ ಕೊರಳಿಗೆ ಮಾಲೆ ಹಾಕಿ ಧೂಪದೀಪಗಳನ್ನು ಹಚ್ಚಿ. ಹೂವುಗಳು ಮತ್ತು ನಾಣ್ಯಗಳನ್ನು ಅರ್ಪಿಸಿ.
ದೀಪಾವಳಿ ಮಂತ್ರ
ಓಂ ಹಿರಣ್ಯವರ್ಣಾಂ ಹರಿಣೀಂ ಸುವರ್ಣರಜತಸ್ರಜಾಂ। ಚ೦ದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆ ವಹ||