India world record in T20 cricket : ಹೈದರಾಬಾದ್‌ನಲ್ಲಿ ನಡೆದ ಬಾಂಗ್ಲಾ ವಿರುದ್ಧದ ಕೊನೆಯ T20 ಮ್ಯಾಚ್‌ನಲ್ಲಿ ಭಾರತ ರನ್‌ಗಳ ಸುರಿಮಳೆಗೈದಿದೆ. ಆ ಮೂಲಕ 20 ಓವರ್‌ನಲ್ಲಿ 6ವಿಕೆಟ್‌ಗೆ 297 ರನ್ ಗಳಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದು, ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದಿದೆ.
ಹೌದು, 2019ರಲ್ಲಿ ಐರ್ಲ್ಯಾಂಡ್ ವಿರುದ್ಧ ಅಫ್ಘಾನ್ ಗಳಿಸಿದ್ದ 278ರನ್ ಇಲ್ಲಿವರೆಗಿನ T20 ಅತ್ಯಧಿಕ ಸ್ಕೋರ್ ಆಗಿತ್ತು. ಆದರೆ, ಸೂರ್ಯ, ಸಂಜು, ಪಾಂಡ್ಯ &ಪರಾಗ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಆ ದಾಖಲೆಯನ್ನು ಭಾರತ ಮುರಿದಿದೆ. 2017ರಲ್ಲಿ ಶ್ರೀಲಂಕಾ ವಿರುದ್ಧದ 260 ರನ್ ಭಾರತದ ಇಲ್ಲಿವರೆಗಿನ ಅತ್ಯಧಿಕ ಟಿ20 ಸ್ಕೋರ್ ಆಗಿತ್ತು.
ಇದನ್ನೂ ಓದಿ: ಸ್ಯಾಮ್ಸನ್ ಭರ್ಜರಿ ಶತಕ, ಸೂರ್ಯ ಅಬ್ಬರದ ಅರ್ಧಶತಕ; ಭಾರತಕ್ಕೆ 133 ರನ್ ಗಳ ಭರ್ಜರಿ ಜಯ, ಸರಣಿ ಕ್ಲೀನ್ ಸ್ವೀಪ್
ಒಂದೇ ಪಂದ್ಯದಲ್ಲಿ ದಾಖಲೆ ಮೇಲೆ ದಾಖಲೆ
- 297 ರನ್ ಕಲೆಹಾಕಿದ ಭಾರತಕ್ಕೆ ಇದು ಟಿ20I ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಸ್ಕೋರ್.
- ಕೇವಲ 7.1 ಓವರ್‌ಗಳಲ್ಲಿ 100 ರನ್‌ಗಳ ಗಡಿ ಪೂರೈಸಿ ವಿಶ್ವದಾಖಲೆ.
- 10 ಓವರ್‌ಗಳಲ್ಲಿ ಗರಿಷ್ಠ ಸ್ಕೋರ್ (152) ಮಾಡಿದ ದಾಖಲೆ.
- ಭಾರತ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗದ 100, 150, 200 & 250 ರನ್ ಪೂರೈಸಿದೆ.
- ಟಿ20I ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು (22).
ಭಾರತೀಯರ 2ನೇ ವೇಗದ ಶತಕ ದಾಖಲೆ
T20 ಕ್ರಿಕೆಟ್‌ನಲ್ಲಿ ಸತತ ವೈಫಲ್ಯದಿಂದಾಗಿ ಟೀಕೆಗಳಿಗೆ ಗುರಿಯಾಗಿದ್ದ ಬ್ಯಾಟರ್ ಸಂಜು ಸಾಮ್ಸನ್ ಸ್ಫೋಟಕ ಶತಕ ಸಿಡಿಸುವ ಜತೆಗೆ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
ಸಂಜು ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಆ ಮೂಲಕ ಟಿ20ಯಲ್ಲಿ ಅತಿವೇಗದ ಶತಕ ಸಿಡಿಸಿದ ಭಾರತದ 2ನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. 2017ರಲ್ಲಿ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ 35ಬಾಲ್‌ಗೆ ಶತಕ ಸಿಡಿಸಿದ್ದಾರೆ. ಅಷ್ಟೇಅಲ್ಲ ಸಂಜು 10ನೇ ಓವರ್‌ನಲ್ಲಿ ಮುಸ್ತಾಫಿಜುರ್ ರೆಹಮಾನ್ ಬೌಲಿಂಗ್‌ನಲ್ಲಿ 5ಸಿಕ್ಸರ್ ಬಾರಿಸಿ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: Ratan Tata : ರತನ್ ಟಾಟಾ ಪ್ರೀತಿಸಿದ್ದರೂ ಬ್ಯಾಚುರಲ್ ಆಗಿ ಉಳಿದಿದ್ದು ಯಾಕೆ? ಮದುವೆಯಾಗದೆ ಇರಲು ಇದೇ ಕಾರಣ?
2,500 ರನ್ ಪೂರೈಸಿದ ಸೂರ್ಯಕುಮಾರ್
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ T20ನಲ್ಲಿ ಒಟ್ಟು 2,500 ರನ್ ಪೂರೈಸಿದ್ದಾರೆ. ರೋಹಿತ್ ಶರ್ಮಾ ಈ ಸಾಧನೆ ಮಾಡಿದ ಎರಡನೇ ಭಾರತೀಯರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಈ ಸಾಧನೆ ಮಾಡಿದರು. ಸೂರ್ಯಕುಮಾರ್ ಟಿ20 ಅವರು ವೇಗವಾಗಿ 2,500 ರನ್ ಪೂರೈಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್‌ಮನ್ ಆಗಿದ್ದಾರೆ.