Prof. Sai Baba passed away : ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್ ಸಾಯಿಬಾಬಾ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಅವರು ಒಂದು ವಾರದ ಹಿಂದೆ ನಿಮ್ಸ್‌ಗೆ ಸೇರಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಹಿನ್ನೆಲೆ ಪೊಲೀಸರು 2014 ರಲ್ಲಿ ಅವರನ್ನು ಬಂಧಿಸಿದ್ದರು. ಈ ಕುರಿತು ತನಿಖೆ ನಡೆಸಿದ ಬಾಂಬೆ ಹೈಕೋರ್ಟ್ 2024ರ ಮಾರ್ಚ್‌ನಲ್ಲಿ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿ ಬಿಡುಗಡೆಗೊಳಿಸಿತು.
ಇದನ್ನೂ ಓದಿ: ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಭಾರತ; ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಟೀಮ್ ಇಂಡಿಯಾ
ಪ್ರೊ.ಸಾಯಿಬಾಬಾ ನಿಧನ: ಸರ್ಕಾರಿ ಕೊಲೆಯೆಂದು ಆರೋಪ
ಮಾನವಹಕ್ಕುಗಳ ಹೋರಾಟಗಾರ ಪ್ರೊ.ಜಿ.ಎನ್.ಸಾಯಿಬಾಬಾ ಅವರ ಸಾವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ‘ಫಾದರ್ ಸ್ಟಾನ್ ಸ್ವಾಮಿಯವರ ನಂತರ ಮೋದಿ ಸರ್ಕಾರದ ಅಮಾನುಷ ಕ್ರೌರ್ಯಕ್ಕೆ ಬಲಿಯಾದ ಮತ್ತೊಬ್ಬರು ಸಾಯಿಬಾಬಾ’ ಎಂದಿದ್ದಾರೆ ಚಿಂತಕ ಶಿವಸುಂದರ್.
‘ಶೇ. 90ರಷ್ಟು ಅಂಗ ವೈಕಲ್ಯ ಹೊಂದಿದ್ದ ಅವರ ದೇಹ ಹತ್ತು ವರ್ಷಗಳ ನರಕ ಸದೃಶ ಜೈಲುವಾಸದಿಂದ ನಜ್ಜುಗುಜ್ಜಾಗಿತ್ತು. ಬಿಡುಗಡೆಯ ನಂತರವೂ ಬದುಕದಷ್ಟು ಕಿರುಕುಳ ಕೊಟ್ಟು ಮೋದಿ ಸರ್ಕಾರ ಮಾಡಿದ ಕೊಲೆ ಇದು’ ಎಂದು ಅವರು ಆರೋಪಿಸಿದ್ದಾರೆ.