ಪಡಿತರದಾರರಿಗೆ ಭರ್ಜರಿ ಗುಡ್ ನ್ಯೂಸ್;‌ ಇನ್ಮುಂದೆ ಆಧಾರ್ ಇದ್ದರೆ ಸಾಕು, ರೇಷನ್ ಕಾರ್ಡ್ ಇಲ್ಲದಿದ್ದರೂ ಪಡಿತರ ಅಕ್ಕಿ.!

ಭಾರತದಲ್ಲಿ ಪಡಿತರ ಚೀಟಿಯು (Ration Card)  ವಿಳಾಸ ಮತ್ತು ಗುರುತಿನ ಪುರಾವೆಯ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಪಡಿತರ ಚೀಟಿ ಹೊಂದಿರುವವರು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ (Public Distribution System)  ಸಬ್ಸಿಡಿ (Subsidy) ರೂಪದಲ್ಲಿ ಆಹಾರ…

Aadhaar Card Get Ration Rice,

ಭಾರತದಲ್ಲಿ ಪಡಿತರ ಚೀಟಿಯು (Ration Card)  ವಿಳಾಸ ಮತ್ತು ಗುರುತಿನ ಪುರಾವೆಯ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಪಡಿತರ ಚೀಟಿ ಹೊಂದಿರುವವರು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ (Public Distribution System)  ಸಬ್ಸಿಡಿ (Subsidy) ರೂಪದಲ್ಲಿ ಆಹಾರ ಧಾನ್ಯವನ್ನು ಖರೀದಿಸಲು ಅರ್ಹರಾಗಿದ್ದು, ಇ-ಪಡಿತರ ಕಾರ್ಡ್ (E-Ration Card) ಹಲವಾರು ರಾಜ್ಯ ಸರ್ಕಾರಗಳು ಪಡಿತರ ಚೀಟಿ ಪಡೆಯಲು ಮನೆಗಳಿಗೆ ಒದಗಿಸುವ ತಡೆರಹಿತ ಸೌಲಭ್ಯವಾಗಿದೆ.

ಇದನ್ನು ಓದಿ: ದಿನಕ್ಕೆ ಕೇವಲ 30 ರೂಪಾಯಿ ಉಳಿತಾಯದೊಂದಿದೆ ಕೈಗೆ 5 ಲಕ್ಷ ರೂ, ಸರ್ಕಾರದ ಈ ಯೋಜನೆ ಸೂಪರ್!

ಪಡಿತರ ಚೀಟಿ ( (Ration Card)) ಹೊಂದಿರುವ ಬಡ ಕುಟುಂಬಗಳಿಗೆ ದೇಶಾದ್ಯಂತ ಉಚಿತ ಪಡಿತರ (free ration) ಮತ್ತು ಅಗ್ಗದ ಪಡಿತರ ಸೌಲಭ್ಯಗಳನ್ನ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒದಗಿಸಲಾಗುತ್ತಿದೆ. ಇದೀಗ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ದೇಶದಲ್ಲಿರುವ ಕೋಟ್ಯಂತರ ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ನೀವು ದೇಶದಾದ್ಯಂತ ಆಧಾರ್ ಕಾರ್ಡ್ (Aadhaar Card) ಮೂಲಕ ಪಡಿತರ ಸೌಲಭ್ಯಗಳನ್ನ ಪಡೆದುಕೊಳ್ಳಬಹುದು ಹಾಗೂ ಇದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ ಎಂದು ತಿಳಿಸಿದೆ.

Vijayaprabha Mobile App free

ಇನ್ಮುಂದೆ ಆಧಾರ್ ಇದ್ದರೆ ಸಾಕು, ರೇಷನ್ ಕಾರ್ಡ್ ಇಲ್ಲದಿದ್ದರೂ ಪಡಿತರ ಅಕ್ಕಿ

ಇದನ್ನು ಓದಿ: ಆಹಾರ ಇಲಾಖೆಯಲ್ಲಿ 386 ಹುದ್ದೆಗಳು; ಅರ್ಜಿ ಸಲ್ಲಿಸಲು ಮೇ 17 ಕೊನೆ ದಿನ

ಈ ಬಗ್ಗೆ UIDAI ಮಾಹಿತಿಯನ್ನು ಹೊರಹಾಕಿದ್ದು,ನೀವು ಆಧಾರ್ ಕಾರ್ಡ್ (Aadhaar Card) ಮೂಲಕ ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ಪಡಿತರ ಸೌಲಭ್ಯಗಳನ್ನ ಪಡೆದುಕೊಳ್ಳಬಹುದಾಗಿದ್ದು, ಇದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ನವೀಕರಿಸುವುದು ಅವಶ್ಯಕ ಎಂದು ತಿಳಿಸಿದೆ. ಒಂದು ರೇಶನ್‌ ಒಂದು ರೇಷನ್ ಕಾರ್ಡ್ (One Nation One Ration Card) ಮೂಲಕ ನೀವು ಆಧಾರ್‌ ಕಾರ್ಡ್‌ ನಿಂದ ದೇಶದಾದ್ಯಂತ ಪಡಿತರವನ್ನು ತೆಗದುಕೊಳ್ಳಬಹುದುದಾಗಿದ್ದು, ಇದಕ್ಕಾಗಿ ಹತ್ತಿರದ ಆಧಾರ್ ಕೇಂದ್ರವನ್ನು ಸಂಪರ್ಕಿಸಿ, ನಿಮ್ಮ ಆಧಾರ್‌ ನವೀಕರಿಸಲು (Aadhaar Card Renewal) ತಿಳಿಸಿದೆ.

ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿದವರಿಗೆ ಬಿಗ್ ನ್ಯೂಸ್; ಇನ್ಮುಂದೆ ನಿಮ್ಮ ಆಸ್ತಿಗೂ ಆಧಾರ್ ಲಿಂಕ್ ಮಾಡಬೇಕು!

ಇಲ್ಲದಿದ್ದರೆ, ಇಲಾಖೆಯ ಅಫಿಶಿಯಲ್‌ ವೆಬ್ಸೈಟ್‌ ಗೆ ಹೋಗಿ ಆಧಾರ್‌ ಕಾರ್ಡ್‌ ನವೀಕರಣವನ್ನು(Aadhaar Card Renewal) ನೀವೇ ಮಾಡಿಸಿಕೊಳ್ಳಿ.ಇನ್ನು, ಆಧಾರ್‌ ಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ನೀವು ಟೋಲ್‌ ಫ್ರೀ ಸಂಖ್ಯೆ (Toll Free – 1947) ಕರೆಯನ್ನು ಮಾಡಿ ಆಧಾರ್ ಕಾರ್ಡ್ ಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನ ಪಡೆಯಬಹುದು.

ಇದನ್ನು ಓದಿ: LPG ಗ್ರಾಹಕರಿಗೆ ಗುಡ್ ನ್ಯೂಸ್; ಗ್ಯಾಸ್ ಸಿಲಿಂಡರ್ ಮೇಲೆ ಬರೋಬ್ಬರಿ 2,400 ರೂ ಸಬ್ಸಿಡಿ, ಹೀಗೆ ಪಡೆಯಬಹುದು!

ಪಡಿತರ ಚೀಟಿಗಳು ವಿವಿಧ ವಿಧಗಳನ್ನು (ಬಿಪಿಎಲ್, ಅಂತ್ಯೋದಯ, ಎಪಿಎಲ್ ) ಹೊಂದಿದ್ದು, ಇವುಗಳನ್ನು ವ್ಯಕ್ತಿಯ ಗಳಿಕೆಯ ಸಾಮರ್ಥ್ಯದಿಂದ ನೀಡಲಾಗುತ್ತಿದ್ದು, ವಿವಿಧ ರಾಜ್ಯಗಳು ವಿಭಿನ್ನ ಯೋಜನೆಗಳನ್ನು ಹೊಂದಿದ್ದು, ವ್ಯಕ್ತಿಯ ವಾರ್ಷಿಕ ಆದಾಯವನ್ನು ಆಧರಿಸಿವೆ. ಆದರೆ, ಇನ್ಮುಂದೆ ಆಧಾರ್‌ ಕಾರ್ಡ್‌ (Ration Card) ಒಂದಿದ್ದರೆ ಸಾಕು ಎಲ್ಲಿ ಬೇಕಾದರೂ ಉಚಿತ ರೇಷನ್‌ ಅಕ್ಕಿಯನ್ನು (free ration rice)  ಪಡೆಯಬಹುದು.

ಇದನ್ನು ಓದಿ: Udyog Aadhar: ಆಧಾರ್ ಗೊತ್ತು.. ಇದೇನು ಉದ್ಯೋಗ ಆಧಾರ್? ಪ್ರಯೋಜನಗಳೇನು..ಅರ್ಜಿ ಸಲ್ಲಿಸುವುದು ಹೇಗೆ?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.