ಪಿಎಂ ಕಿಸಾನ್ ಯೋಜನೆ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತಿನ ಹಣ ಬಿಡುಗಡೆಗೆ ರೈತರು ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಜುಲೈ 18 ರಂದು ಬಿಹಾರದ ಸಿವಾನ್ನಲ್ಲಿ ನಡೆಯಲಿರುವ ಸಭೆಯಲ್ಲಿ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಆದರೆ ಸರ್ಕಾರದಿಂದ ಅಧಿಕೃತ ದಿನಾಂಕ ಇನ್ನೂ ಪ್ರಕಟವಾಗಿಲ್ಲ. ಈ ಬಾರಿ ಬಹುತೇಕ ಬ್ಯಾಂಕ್ಗಳ ಮೂಲಕ ನೇರವಾಗಿ ಹಣ ಬರುವ ಸಾಧ್ಯತೆ ಇರುತ್ತದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಅರ್ಹ ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸುವಂತೆ ಸೂಚಿಸಲಾಗಿದೆ.
ಪಿಎಂ ಕಿಸಾನ್ ಯೋಜನೆ : ಹಣ ಸಿಗಬೇಕೆಂದರೆ ಈ ಕೆಲಸಗಳನ್ನು ಈಗಲೇ ಮಾಡಿ
ಪಿಎಂ ಕಿಸಾನ್ ಯೋಜನೆಯ 20ನೇ ಕಂತಿನ ₹2,000 ರು. ಹಣ ಶೀಘ್ರದಲ್ಲಿ ರೈತರ ಖಾತೆಗೆ ಜಮೆಯಾಗಲಿದೆ. ಆದರೆ ಈ ಕಂತು ಸಿಗಬೇಕಾದರೆ ಕೆಲವು ಮುಖ್ಯ ಕೆಲಸಗಳನ್ನು ಈಗಲೇ ಪೂರ್ಣಗೊಳಿಸಬೇಕು.
ಇ-ಕೆವೈಸಿ ಮಾಡಿರಬೇಕು, ಆಧಾರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು, ಬ್ಯಾಂಕ್ ಅಕೌಂಟ್ ವಿವರಗಳು ಸರಿಯಾಗಿರಬೇಕು, ಭೂದಾಖಲೆ ಸಮಸ್ಯೆ ನಿವಾರಣೆಯಾಗಿರಬೇಕು, ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ಬೆನಿಫಿಶಿಯರಿ ಸ್ಟೇಟಸ್ ಪರಿಶೀಲಿಸಬೇಕು ಹಾಗೂ ಮೊಬೈಲ್ ನಂಬರ್ ಅಪ್ಡೇಟ್ ಮಾಡಿರಬೇಕು. ಈ ಎಲ್ಲವನ್ನು pmkisan.gov.in ನಲ್ಲಿ ಪರಿಶೀಲಿಸಬಹುದಾಗಿದೆ.




