Akrama sakrama scheme : ರಾಜ್ಯ ಸರ್ಕಾರ ರೈತರಿಗೆ ಗುಡ್ ನ್ಯೂಸ್ ನೀಡಿದ್ದು, ಸರ್ಕಾರಿ ಜಮೀನುಗಳಲ್ಲಿ ಮಾಡುತ್ತಿರುವ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಗರ್ ಹುಕುಂ ಯೋಜನೆಯಡಿಗೆ ಮರುಜೀವ ಬಂದಿದ್ದು, ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ನಿರ್ಧಾರ ಮಾಡಲಾಗಿದೆ.
ಹೌದು, ‘ಅಕ್ರಮ-ಸಕ್ರಮ’ ಯೋಜನೆಯಡಿ (Akrama sakrama scheme) ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಶೀಲಿಸಿ 2 ತಿಂಗಳಲ್ಲಿ ಅರ್ಹ ರೈತರಿಗೆ ಭೂಮಿ ಮಂಜೂರು ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byregowda) ಹೇಳಿದ್ದಾರೆ. ಈ ಯೋಜನೆಯಡಿ 14 ಲಕ್ಷ ರೈತರು ಅರ್ಜಿ ಹಾಕಿದ್ದು, ಈ ಸಂಬಂಧ ತಹಶೀಲ್ದಾರ್ಗಳ ಜೊತೆ ಸಭೆ ನಡೆಸಿದ್ದೇನೆ.
ಇದನ್ನೂ ಓದಿ: ಬಗರ್ ಹುಕುಂ ಜಮೀನು ನೀಡಲು ಸರ್ಕಾರ ಕ್ರಮ; ಏನಿದು ‘ಬಗರ್ ಹುಕುಂ’..?
ಎಲ್ಲಾ ತಹಶೀಲ್ದಾರರಿಗೆ ನವೆಂಬರ್ ಅಂತ್ಯದವರೆಗೆ ಗಡುವು ನೀಡಿದ್ದು, ಬಗರ್ ಹುಕುಂ (Bagar Hukum) ಅರ್ಜಿಗಳ ವಿಲೇವಾರಿ ಹಾಗೂ ಅರ್ಹರಿಗೆ ಭೂ ಮಂಜೂರು ಆಗದಿದ್ದರೆ, ಸಂಬಂಧಿತ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದ್ದಾರೆ.