Bagar Hukum : ಸರ್ಕಾರಿ ಜಮೀನುಗಳಲ್ಲಿ ಮಾಡುತ್ತಿರುವ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಗರ್ ಹುಕುಂ ಯೋಜನೆಯಡಿಗೆ ಮರುಜೀವ ಬಂದಿದೆ. ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ನಿರ್ಧಾರ ಮಾಡಲಾಗಿದೆ. ಆ ಮೂಲಕ ರೈತರಿಗೆ ಸರ್ಕಾರ ಗುಡ್ನ್ಯೂಸ್ ನೀಡಿದೆ.
ಹೌದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರತಿಕ್ರಿಯಿಸಿ, ’14 ಲಕ್ಷ ರೈತರು ಅರ್ಜಿ ಹಾಕಿದ್ದಾರೆ. ಈ ಸಂಬಂಧ ತಹಶೀಲ್ದಾರ್ಗಳ ಜೊತೆ ಸಭೆ ನಡೆಸಿದ್ದೇನೆ. ನಾಲ್ಕೈದು ತಿಂಗಳಲ್ಲಿ ಇತ್ಯರ್ಥ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
Bagar Hukum :’ಬಗರ್ ಹುಕುಂ’ ಎಂದರೇನು?
ಬಗರ್ ಹುಕುಂ ಸಕ್ರಮಗೊಳಿಸಲು ಸರ್ಕಾರ ತೀರ್ಮಾನ ಮಾಡಿರುವುದಾಗಿ ವರದಿಯಾಗಿದೆ. ಬಗರ್ ಹುಕುಂ ಪದದ ನಿಜವಾದ ರೂಪ ‘ಬಗೈರ್ ಹುಕುಂ’ ಎಂದಾಗಿದೆ. ಇದರ ಅರ್ಥ ‘Without Order’ ಎಂದು. ಹುಕುಂ ಜಾರಿ ಮಾಡುವುದು ಎಂದರೆ ಆದೇಶ ಜಾರಿಗೊಳಿಸುವುದು ಎಂದರ್ಥ.
ಸರ್ಕಾರಿ ಜಮೀನಿನಲ್ಲಿ ಅನುಮತಿ ಇಲ್ಲದೆ ಕೃಷಿ ಮಾಡಿದ್ದರೆ ಅದನ್ನು ಸರ್ಕಾರ ವಾಪಸ್ ಪಡೆಯಬಹುದು. ಆದರೆ ಇಂದು ರೈತರು ಬಹುತೇಕ ಒತ್ತುವರಿ ಮಾಡಿಕೊಂಡಿರುವುದು ಸಾಮಾನ್ಯ. ಇಂತಹ ಜಮೀನು ಸಕ್ರಮ ಮಾಡಲು ಕೋರುವುದೇ ‘ಬಗರ್ ಹುಕುಂ’ ಅರ್ಜಿ.




