Death of former MLA Moiddin Bava brother : ಸಹೋದರ ಮುಮ್ತಾಜ್ ಅಲಿ ಮೃತದೇಹ ಸತತ 28 ಗಂಟೆಗಳ ಶೋಧದ ಬಳಿಕ ಮಂಗಳೂರಿನ ಕುಳೂರು ನದಿಯಲ್ಲಿ ಪತ್ತೆಯಾಗಿದ್ದು, ಮಾಜಿ ಶಾಸಕ ಮೊಯಿದ್ದೀನ್ ಬಾವಾ ( former MLA Moiddin Bava) ಕಣ್ಣೀರು ಸುರಿಸುತ್ತಿದ್ದಾರೆ.
ಹೌದು, ಉದ್ಯಮಿ ಮುಮ್ತಾಜ್ ಅಲಿ ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ನಿರತರಾಗಿದ್ದರು. ಬಾವಾ ಜೊತೆ ನಿಕಟ ಸಂಬಂಧ ಹೊಂದಿದ್ದರು. ಮುಮ್ತಾಜ್ ಅಲಿ ಬ್ಯ್ಲಾಕ್ ಮೇಲ್ ತಂತ್ರಕ್ಕೆ ಬಲಿಪಶು ಆಗಿದ್ದಾರೆ ಎಂದು ಬಾವಾ ಆರೋಪಿಸಿದ್ದಾರೆ. ಗದ್ಗದಿತರಾಗಿರುವ ಬಾವಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರನ ಮೃತದೇಹ ಪತ್ತೆ
6 ಮಂದಿ ವಿರುದ್ಧ FIR; ಬಾವ ಸಹೋದರ ಸಾವಿಗೆ ಸ್ಫೋಟಕ ತಿರುವು
ಮಾಜಿ ಶಾಸಕ ಮೊಹಿದ್ದೀನ್ ಬಾವ ಸಹೋದರ ಮಮ್ತಾಜ್ ಅಲಿ ಮೃತದೇಹ ಕುಳೂರು ಸೇತುವೆ ಕೆಳಗೆ ಪಲ್ಗುಣಿ ನದಿಯಲ್ಲಿ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆಗಾಗಿ AGಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಉದ್ಯಮಿಯಾದ ಅಲಿ ಅವರನ್ನು ನಿರಂತರ ಬೆದರಿಸಿ ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿರುವ ಆರೋಪದಡಿ ಮಹಿಳೆ ಸೇರಿ 6ಮಂದಿ ವಿರುದ್ಧ ಕಾವೂರು ಠಾಣೆಯಲ್ಲಿ FIR ದಾಖಲಾಗಿದೆ. ಸಾವಿಗೆ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಿದ್ದು ಮೇಲ್ನೋಟಕ್ಕೆ ಬ್ಲ್ಯಾಕ್‌ಮೇಲ್‌ಗೆ ಹೆದರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಶಂಕೆಯಿದೆ.
ಇದನ್ನೂ ಓದಿ: ಮಾಜಿ ಶಾಸಕನ ಸಹೋದರ ನಾಪತ್ತೆಗೆ BIG ಟ್ವಿಸ್ಟ್: ಸೂಸೈಡ್ ಶಂಕೆ