PM Vishwakarma Yojana : ಕೇಂದ್ರ ಸರ್ಕಾರವು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಪಿಎಂ ವಿಶ್ವಕರ್ಮ ಯೋಜನೆಯೂ (PM Vishwakarma Yojana) ಒಂದಾಗಿದೆ.
ಈ ಯೋಜನೆಯಡಿ ಬಡಿಗ, ದೋಣಿ ತಯಾರಕರು, ಕುಂಬಾರರು, ಕಮ್ಮಾರರು, ಅಕ್ಕಸಾಲಿಗರು, ಶಿಲ್ಪಿಗಳು, ಕ್ಷೌರಿಕರು, ರಾಜಮೇಸ್ತ್ರಿಗಳು, ಮೀನಿನ ಬಲೆ ತಯಾರಕರು & ಇತರೆ ಕುಶಲಕರ್ಮಿಗಳಿಗೆ 5% ಬಡ್ಡಿಗೆ ಸುಮಾರು 3 ಲಕ್ಷ ರೂ. ಗಳವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಆಸಕ್ತರು ವೇಬ್‌ಸೈಟ್ pmvishwakarma.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: Employees Provident Fund | ಉದ್ಯೋಗಿಗಳ ಭವಿಷ್ಯವನ್ನು ಭದ್ರಪಡಿಸುವ ನೌಕರರ ಭವಿಷ್ಯ ನಿಧಿ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಪಿಎಂ ವಿಶ್ವಕರ್ಮ ಯೋಜನೆಯೂ ಕೇಂದ್ರ ಸರ್ಕಾರದ ಯೋಜನೆ
ದೇಶದ ಗ್ರಾಮೀಣ ಮತ್ತು ನಗರ ಪ್ರದೇಶದ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಕರಕುಲಗಾರರನ್ನು ಸದೃಢಗೊಳಿಸಲು ಕೇಂದ್ರ ಸರ್ಕಾರವು ‘ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ’ ಜಾರಿಗೆ ತಂದಿದೆ. 18 ರೀತಿಯ ಕುಶಲಕರ್ಮಿಗಳು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಇದನ್ನೂ ಓದಿ: Liquid funds | ಲಿಕ್ವಿಡ್ ಫಂಡ್‌ಗಳು ಎಂದರೇನು? ಲಿಕ್ವಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಪಿಎಂ ವಿಶ್ವಕರ್ಮ ಯೋಜನೆಯಿಂದ ಯಾರಿಗೆಲ್ಲಾ ಲಾಭ? (benefits from PM Vishwakarma Yojana)
ಮರ ಕೆಲಸಗಾರರು, ಗಾರೆ ಕೆಲಸಗಾರರು, ವಿಗ್ರಹ ತಯಾರಕರು, ಅಕ್ಕಸಾಲಿಗರು, ಕ್ಷೌರಿಕರು, ಅಗಸರು, ಕಲ್ಲು ಒಡೆಯುವವರು, ಟೈಲರ್‌ಳು, ಬುಟ್ಟಿ /ಚಾಪೆ/ಕಸಪೊರಕೆ ತಯಾರಕರು, ಹೂವಿನ ಹಾರ ತಯಾರಕರು, ಮೀನು ಬಲೆ ತಯಾರಕರು, ದೋಣಿ ತಯಾರಕರು, ಕಮ್ಮಾರರು, ಕುಂಬಾರರು, ಚರ್ಮಕಾರರು, ಆಯುಧ ತಯಾರಕರು, ಕಬ್ಬಿಣದ ಉಪಕರಣಗಾರರು, ಆಟಿಕೆ ತಯಾರಕರು ಈ ಯೋಜನೆಯ ಲಾಭ ಪಡೆಯಬಹುದು.
ಇದನ್ನೂ ಓದಿ: PM Kisan Yojana | ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಈ ಕೆಲಸ ಮಾಡಿದರೆ ಮಾತ್ರ ಹಣ..!
ಪಿಎಂ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು (PM Vishwakarma Yojana Benefits)
- ರೂ. 3 ಲಕ್ಷದವರೆಗೆ ಆಧಾರರಹಿತ ಸಾಲ ವಿತರಣೆ.
- ರೂ.15 ಸಾವಿರವರೆಗಿನ ಟೂಲ್ ಕಿಟ್.
- ಕೌಶಲ್ಯಾಭಿವೃದ್ಧಿಗೆ 5 ದಿನಗಳ ತರಬೇತಿ & ದೈನಂದಿನ ರೂ. 500 ಸಂಭಾವನೆ.
- ಉತ್ಪನ್ನಗಳಿಗೆ ಕ್ವಾಲಿಟಿ ಸರ್ಟಿಫಿಕೇಶನ್, ಬ್ರಾಂಡಿಂಗ್ & ಮಾರ್ಕೆಟಿಂಗ್ ನೆರವು.
- ಬಡ್ಡಿ ದರ 5% ನಂತೆ ಮೊದಲ ಬಾರಿಗೆ ರೂ 1ಲಕ್ಷ ಸಾಲ, 18 ತಿಂಗಳೊಳಗೆ ರೂ 1ಲಕ್ಷ ಹಿಂತಿರುಗಿದರೆ ಇನ್ನೂ 2 ಲಕ್ಷ ಸಾಲ ವಿತರಣೆ ಸೌಲಭ್ಯ.
ಇದನ್ನೂ ಓದಿ: LIC Bima Sakhi Yojana | ಮಾಸಿಕ ₹7,000 ಗಳಿಸಬಹುದಾದ ‘ಬಿಮಾ ಸಖಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್; ಅರ್ಜಿ ಸಲ್ಲಿಕೆ ಹೇಗೆ?
ಪಿಎಂ ವಿಶ್ವಕರ್ಮ ಯೋಜನೆಗೆ ಬೇಕಾದ ದಾಖಲೆಗಳು (Documents required PM Vishwakarma Yojana)
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್
- ರೇಷನ್ ಕಾರ್ಡ್
ಪಿಎಂ ವಿಶ್ವಕರ್ಮ ಯೋಜನೆ ಅರ್ಜಿ ಸಲ್ಲಿಕೆ (PM Vishwakarma Yojana Application)
ನಿಮ್ಮ ಹತ್ತಿರದ ಬೆಂಗಳೂರು, ಒನ್ ಗ್ರಾಮ ಒನ್, ಡಿಜಿಟಲ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ನಮೂನೆ ಭರ್ತಿ ಮಾಡಿ ಅಗತ್ಯ ದಾಖಲೆ ಸಲ್ಲಿಸಬೇಕು. ಮೂರು ಲಕ್ಷ ರೂ. ವರೆಗೆ ಸಹಾಯಧನ ಪಡೆಯಬಹುದು. ಇದರೊಂದಿಗೆ ಇತರ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: Ashraya yojana | ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವಸತಿ ಸೌಲಭ್ಯ ನೀಡುವ ಆಶ್ರಯ ಯೋಜನೆ ಉದ್ದೇಶ, ಪ್ರಯೋಜನಗಳು