LIC Bima Sakhi Yojana | ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಉದ್ಯೋಗ ಒದಗಿಸುವ ಮತ್ತು ಮಾಸಿಕವಾಗಿ ₹7,000 ಗಳಿಸಬಹುದಾದ ಎಲ್‌ಐಸಿಯ ಬಿಮಾ ಸಖಿ ಯೋಜನೆಗೆ (LIC Bima Sakhi Yojana) ಇದೀಗ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಹೌದು, ಪ್ರಧಾನಿ ನರೇಂದ್ರ ಮೋದಿ 2024ರ ಡಿಸೆಂಬರ್ 9ರಂದು ಹರಿಯಾಣದ ಪಾಣಿಪತ್‌ನಲ್ಲಿ ಬಿಮಾ ಸಖಿ ಯೋಜನೆಗೆ ಚಾಲನೆ ನೀಡಿದ್ದರು. ಜೀವ ವಿಮಾ ನಿಗಮ (ಎಲ್‌ಐಸಿ) ಈ ಯೋಜನೆಯು 10ನೇ ತರಗತಿಯನ್ನು ಪೂರ್ಣಗೊಳಿಸಿದ 18-70 ವರ್ಷ ವಯಸ್ಸಿನ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಒಂದೇ ತಿಂಗಳಲ್ಲಿ 52,000ಕ್ಕೂ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದು, ಈಗಾಗಲೇ ಇವರು ಕಾರ್ಯತತ್ಪರರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Ashraya yojana | ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವಸತಿ ಸೌಲಭ್ಯ ನೀಡುವ ಆಶ್ರಯ ಯೋಜನೆ ಉದ್ದೇಶ, ಪ್ರಯೋಜನಗಳು
LIC Bima Sakhi Yojana : ಎಲ್ಐಸಿ ಬಿಮಾ ಸಖಿ ಯೋಜನೆಯಿಂದ ಮಹಿಳೆಯರಿಗೆ ಸಿಗಲಿದೆ ಆರ್ಥಿಕ ಭದ್ರತೆ
ಎಲ್ಐಸಿ ಬಿಮಾ ಸಖಿ ಯೋಜನೆ ಮೂಲಕ ಮಹಿಳೆಯರು ಕನಿಷ್ಠ 7 ಸಾವಿರ ರೂಪಾಯಿಯಿಂದ ಗರಿಷ್ಠ 21 ಸಾವಿರ ರೂಪಾಯಿವರೆಗೆ ತಿಂಗಳಿಗೆ ದುಡಿಯಬಹುದು. ಮೊದಲ ವರ್ಷ ಪ್ರತಿ ತಿಂಗಳು 7 ಸಾವಿರ, ಎರಡನೇ ವರ್ಷ 6 ಸಾವಿರ ರೂಪಾಯಿ ಮತ್ತು ಮೂರನೇ ವರ್ಷ 5 ಸಾವಿರ ರೂಪಾಯಿ ಪ್ರತಿ ತಿಂಗಳು ಸ್ಟೈಫೆಂಡ್ ದೊರಕಲಿದೆ.
ಇದರೊಂದಿಗೆ ವಾರ್ಷಿಕ 24 ಗುರಿ ಸಾಧಿಸಿದವರಿಗೆ ವರ್ಷಕ್ಕೆ 48 ಸಾವಿರ ರೂಪಾಯಿ ಕಮಿಷನ್ ಕೂಡ ದೊರಕಲಿದ್ದು, ಪ್ರತಿ ಕುಟುಂಬಕ್ಕೂ ಸಾಮಾಜಿಕ ಭದ್ರತೆ ಒದಗಿಸುವಲ್ಲಿ ಎಲ್ಐಸಿ ಬಿಮಾ ಸಖಿ ಯೋಜನೆ ಮಹತ್ವದ ಪಾತ್ರ ವಹಿಸುತ್ತದೆ.
ಇದನ್ನೂ ಓದಿ: ರಾಜ್ಯ ಸರ್ಕಾರದ ಯುವನಿಧಿ ಯೋಜನೆಯ ವಿಶೇಷ ನೋಂದಣಿ ಅಭಿಯಾನ; ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ?
LIC Bima Sakhi Yojana : ಎಲ್‌ಐಸಿ ಬಿಮಾ ಸಖಿ ಯೋಜನೆಯಿಂದ ವಿಮೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಲಿದೆ
ಗ್ರಾಮೀಣ ಭಾಗದಲ್ಲಿ ವಿಮೆ ಹೆಚ್ಚು ಜನರನ್ನು ತಲುಪಿಲ್ಲದ ಕಾರಣಕ್ಕಾಗಿ ಈ ಪ್ರದೇಶದ ಮಹಿಳೆಯರನ್ನು ಎಲ್‌ಐಸಿ ಏಜೆಂಟರನ್ನಾಗಿ ಮಾಡುವ ಮೂಲಕ ಹೆಚ್ಚು ಜನರಿಗೆ ವಿಮಾ ಸೌಲಭ್ಯ ತಲುಪಿಸುವ ಗುರಿಯನ್ನು ಸರಕಾರ ಹೊಂದಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಹಣದ ಸಾಕ್ಷರತೆ ಹೆಚ್ಚಲಿದ್ದು ಎಲ್‌ಐಸಿ ಪಾಲಿಸಿಗಳನ್ನು ಮಾಡಿಸಿಕೊಳ್ಳುವ ಸಂಖ್ಯೆ ಹೆಚ್ಚಲಿದೆ.
ಮೊದಲ ವರ್ಷದಲ್ಲಿ 4 ಸಾವಿರ ಕೋಟಿ ರೂ ವಹಿವಾಟು ನಡೆಯುವ ನಿರೀಕ್ಷೆ ಹೊಂದಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಗ್ರಾ.ಪಂ.ಗೆ ಒಬ್ಬ ಎಲ್‌ಐಸಿ ಬಿಮಾ ಸಖಿಯನ್ನು ನೇಮಿಸುವ ಯೋಜನೆ ಇದೆ.
ಇದನ್ನೂ ಓದಿ: PM-AASHA | ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ಪಿಎಂ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ; ಉದ್ದೇಶ, ಉಪಯೋಗಗಳು, ಅರ್ಜಿ ಸಲ್ಲಿಕೆ
LIC Bima Sakhi Yojana ಗೆ ಮಾನದಂಡವೇನು?
- ಹತ್ತನೇ ತರಗತಿ ಓದಿದ ಎಲ್ಲ ಮಹಿಳೆಯರು
- 18 ರಿಂದ 70 ವರ್ಷ ವಯೋಮಾನದ ಮಹಿಳೆಯರು
- ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ
- ಮೂರು ವರ್ಷ ತರಬೇತಿ ಮಾಡಬೇಕಾಗಿರುತ್ತದೆ (ಭತ್ಯೆ ಜೊತೆಗೆ)
- ಬಳಿಕ ಡೆವಲಪ್‌ಮೆಂಟ್ ಆಫೀಸರ್‌ಗಳಾಗುವ ಅವಕಾಶ
ಎಲ್‌ಐಸಿ ಬಿಮಾ ಸಖಿ ಯೋಜನೆಯ ಪ್ರಮುಖ ಮಾಹಿತಿಗಳು
- ಈ ಯೋಜನೆಯಲ್ಲಿ ಮೂರು ವರ್ಷಗಳ ಕಾಲ ಸ್ಟೈಫಂಡ್ ದೊರಕಲಿದೆ.
- ತಿಂಗಳಿಗೆ 7 ಸಾವಿರ ದಿಂದ 21 ಸಾವಿರ ರೂಪಾಯಿವರೆಗೆ ದುಡಿಯಬಹುದು.
- ಆಯ್ಕೆಯಾದವರನ್ನು ಕಾಯಂ ಉದ್ಯೋಗಿಗಳ ರೀತಿ ನೋಡಲಾಗುವುದಿಲ್ಲ.
- ಈಗಾಗಲೇ ಎಲ್‌ಐಸಿಯಲ್ಲಿ ಕೆಲಸ ಮಾಡುವವರು ಅರ್ಜಿ ಸಲ್ಲಿಸುವಂತಿಲ್ಲ.
- ಹೆಚ್ಚಿನ ಮಾಹಿತಿಗಾಗಿ https:/licindia.in/lic-s-bima-sakhi ಭೇಟಿ ನೀಡಿ.
ಇದನ್ನೂ ಓದಿ: Crop Insurance Scheme | ರೈತರಿಗಾಗಿ ಬೆಳೆ ವಿಮೆ ಯೋಜನೆ; ಪ್ರಯೋಜನ, ಮಾನದಂಡಗಳು, ಅರ್ಜಿ ಸಲ್ಲಿಕೆ
ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ?
ಎಲ್‌ಐಸಿ ಬಿಮಾ ಸಖಿ ಯೋಜನೆಗೆ ಡಿಸೆಂಬರ್ 9ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗ ಸಮರ್ಪಕವಾಗಿ ದಾಖಲೆ ಪತ್ರಗಳನ್ನು ಎಂದರೆ ವಯಸ್ಸಿನ ದೃಢೀಕರಣ, ವಿಳಾಸ ದೃಢೀಕರಣ, ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ, ಶೈಕ್ಷಣಿಕ ದಾಖಲೆಗಳ ಪ್ರತಿಯನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು. ಮಾಹಿತಿಗಳನ್ನು ಸರಿಯಾಗಿ ನಮೂದಿಸಬೇಕು. ಅಪೂರ್ಣ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು https://licindia.in/lic-s-bima-sakhi ವೆಬ್ಸೈಟ್ ಗೆ ಭೇಟಿ ನೀಡಬೇಕು.
ಎಲ್ಐಸಿ ಬಿಮಾ ಸಖಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಯಾವ ರೀತಿ ತರಬೇತಿ ನೀಡಲಾಗುತ್ತದೆ?
ಎಲ್ಐಸಿ ಬಿಮಾ ಸಖಿಯಾಗಿ ನೇಮಕಗೊಂಡ ಮಹಿಳೆಯರಿಗೆ ವಿಮಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಮಹಿಳೆಯರು ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡಬಹುದಾಗಿದ್ದು, ಪದವಿ ಮುಗಿಸಿದವರಿಗೂ ಎಲ್ ಐಸಿಯಲ್ಲಿ ಡೆವಲಪ್ ಮೆಂಟ್ ಆಫೀಸರ್ ಆಗಿ ಅವಕಾಶ ಸಿಗುತ್ತದೆ. ಯಾವ ರೀತಿ ತರಬೇತಿ ನೀಡಲಾಗುತ್ತದೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.
ಕೃಪೆ: ffreedom app – Business (Kannada)