Actress Samantha :ದಕ್ಷಿಣ ಭಾರತದ ನಟಿ ಸಮಂತಾ ರುತ್ ಪ್ರಭು (Samantha Ruth Prabhu), ತಮ್ಮ ಅದ್ಭುತ ಅಭಿನಯಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಅವರ ವೈಯಕ್ತಿಕ ಜೀವನದ ಸುತ್ತ ಊಹಾಪೋಹಗಳು ಕೇಳಿಬರುತ್ತಿವೆ.
ಹೌದು, ನಟಿ ಸಮಂತಾಗೆ ವಿಚ್ಛೇದನಕ್ಕೂ ಮೊದಲು ನಿರ್ದೇಶಕನ ಜೊತೆ ಅಫೇರ್ ಇತ್ತು ಎಂಬ ವಿಚಾರ ಸದ್ಯ ಸಂಚಲನ ಸೃಷ್ಟಿಸಿದೆ. ಸಮಂತಾ ಹಾಗು ನಾಗ ಚೈತನ್ಯ ವಿಚ್ಛೇದನಕ್ಕೆ ಇದೆ ನಿಜವಾದ ಕಾರಣ ಎನ್ನಲಾಗಿದೆ.
ನಟಿ ಸಮಂತಾ ಹಾಗು ನಟ ನಾಗ ಚೈತನ್ಯ ವಿಚ್ಛೇದನ ಪಡೆದುಕೊಂಡು ವರ್ಷಗಳೇ ಆಗಿವೆ. ನಟಿ ಸಮಂತಾ ಇನ್ನೊಂದು ಮದುವೆ ಆಗದೆ ಇದ್ದರೆ, ನಟ ನಾಗ ಚೈತನ್ಯ ಅವರು ಸೋಭಿತಾ ಧೂಳಿಪಾಲ ಅವರನ್ನು ಎರಡನೇ ಮದುವೆ ಆಗಿ ಹೊಸ ಜೀವನ ಜೀವನ ನಡೆಸುತ್ತಿದ್ದಾರೆ.
ಆದರೆ, ಸೋಭಿತಾ ಧೂಲಿಪಾಲ ಅವರೊಂದಿಗಿನ ಅವರ ಮಾಜಿ ಪತಿ ನಾಗ ಚೈತನ್ಯ ಅವರ ನಿಶ್ಚಿತಾರ್ಥದ ಕೆಲವೇ ದಿನಗಳ ನಂತರ, ಸಮಂತಾ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿಗಳು ಹರಡಲು ಪ್ರಾರಂಭಿಸಿದವು. ಈ ಬಾರಿ, ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಜನಪ್ರಿಯ ವೆಬ್ ಸರಣಿ ದಿ ಫ್ಯಾಮಿಲಿ ಮ್ಯಾನ್ ಮತ್ತು ಮುಂಬರುವ ಸರಣಿ ಸಿಟಾಡೆಲ್: ಹನಿ ಬನ್ನಿಯ ಹಿಂದಿನ ಪ್ರಸಿದ್ಧ ನಿರ್ದೇಶಕ ರಾಜ್ ನಿಧಿಮೋರು.
ಬಾಲಿವುಡ್ ನಟ ವರುಣ್ ಧವನ್ ಜೊತೆಗೆ ಸಮಂತಾ ನಟಿಸಿರುವ ಬಹು ನಿರೀಕ್ಷಿತ ಸರಣಿ ಸಿಟಾಡೆಲ್: ಹನಿ ಬನ್ನಿಯಲ್ಲಿ ಸಮಂತಾ ಮತ್ತು ರಾಜ್ ಒಟ್ಟಿಗೆ ಕೆಲಸ ಮಾಡುವಾಗ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: ‘ಮಂಥರೆ’ಯಾಗಿ ಯಕ್ಷಗಾನ ರಂಗದಲ್ಲಿ ಮಿಂಚಿದ ಅಭಿನೇತ್ರಿ ಉಮಾಶ್ರೀ
ಇದಕ್ಕೆ, ಪೂರಕ ಎಂಬಂತೆ ಇತ್ತೀಚೆಗೆ ನಟಿ ಖಾಸಗಿ ಯೂಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾಗ ಆಡಿಯೋ ಸಂದೇಶವೊಂದು ಬಂದಿತ್ತು. ಅದು ಸಮಂತಗೆ ನಿರ್ದೇಶಕನಿಂದ ಬಂದ ಪ್ರೇಮ ಸಂದೇಶವಾಗಿತ್ತು. ಇದನ್ನು ಕೇಳಿದ ನಟಿ ಸಮಂತಾ ನಾಚಿ ನೀರಾಗಿದ್ದರು ಎಂದು ಲೇಹ್ರೆನ್ ವೆಬ್ ಸೈಟ್ ವರದಿ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಬಗ್ಗೆ ಚರ್ಚೆಗಳು ಬುಗಿಲೆದ್ದಿವೆ.