Employees Provident Fund | ಉದ್ಯೋಗಿಗಳ ಭವಿಷ್ಯವನ್ನು ಭದ್ರಪಡಿಸುವ ನೌಕರರ ಭವಿಷ್ಯ ನಿಧಿ ಹೇಗೆ ಕಾರ್ಯ ನಿರ್ವಹಿಸುತ್ತದೆ?

Employees Provident Fund : ಸಾಮಾನ್ಯವಾಗಿ ಪ್ರಾವಿಡೆಂಟ್ ಫಂಡ್ ಎಂದು ಕರೆಯಲ್ಪಡುವ ನೌಕರರ ಭವಿಷ್ಯ ನಿಧಿಯು (ಇಪಿಎಫ್) ಭಾರತದ ನಿವೃತ್ತಿ ಪ್ರಯೋಜನಗಳ ಯೋಜನೆಯಾಗಿದೆ. ಉದ್ಯೋಗಿಗಳ ಭವಿಷ್ಯವನ್ನು ಭದ್ರಪಡಿಸಲು ಜಾರಿಗೊಳಿಸಲಾದ ಈ ಯೋಜನೆಯನ್ನು ನೌಕರರ ಭವಿಷ್ಯ…

Employees Provident Fund

Employees Provident Fund : ಸಾಮಾನ್ಯವಾಗಿ ಪ್ರಾವಿಡೆಂಟ್ ಫಂಡ್ ಎಂದು ಕರೆಯಲ್ಪಡುವ ನೌಕರರ ಭವಿಷ್ಯ ನಿಧಿಯು (ಇಪಿಎಫ್) ಭಾರತದ ನಿವೃತ್ತಿ ಪ್ರಯೋಜನಗಳ ಯೋಜನೆಯಾಗಿದೆ.

ಉದ್ಯೋಗಿಗಳ ಭವಿಷ್ಯವನ್ನು ಭದ್ರಪಡಿಸಲು ಜಾರಿಗೊಳಿಸಲಾದ ಈ ಯೋಜನೆಯನ್ನು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನಿರ್ವಹಿಸುತ್ತದೆ. 5 ಕೋಟಿಗೂ ಹೆಚ್ಚು ನೌಕರರನ್ನು ತಲುಪಿರುವ ಯೋಜನೆಯು ನೌಕರರ ಭವಿಷ್ಯ ನಿಧಿ ಯೋಜನೆ ಕಾಯ್ದೆ 1952, ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ ಕಾಯ್ದೆ 1976 ಮತ್ತು ನೌಕರರ ಪಿಂಚಣಿ ಯೋಜನೆ ಕಾಯ್ದೆ 1995 ಎಂಬ ಮೂರು ಕಾಯ್ದೆಗಳಿಂದ ನಿರ್ದೇಶಿಸಲ್ಪಟ್ಟಿದೆ.

ಇದನ್ನೂ ಓದಿ: Liquid funds | ಲಿಕ್ವಿಡ್ ಫಂಡ್‌ಗಳು ಎಂದರೇನು? ಲಿಕ್ವಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Vijayaprabha Mobile App free

Employees Provident Fund (ಇಪಿಎಫ್) ಹೇಗೆ ಕಾರ್ಯ ನಿರ್ವಹಿಸುತ್ತದೆ?

epfo vijayaprabha news

ನೌಕರರ ಭವಿಷ್ಯ ನಿಧಿ ಅತ್ಯುತ್ತಮ ಉಳಿತಾಯ ವೇದಿಕೆಗಳಲ್ಲಿ ಒಂದಾಗಿದೆ. ಉದ್ಯೋಗಿಗಳು ಇಪಿಎಫ್ ಖಾತೆಗೆ ತಮ್ಮ ಮೂಲ ವೇತನದಿಂದ 12% ಅಥವಾ ಒಂದು ನಿರ್ದಿಷ್ಟ ಮೊತ್ತವನ್ನು ನೀಡುತ್ತಾರೆ.

ಉದ್ಯೋಗದಾತರು ನೀಡುವ ಮೂಲ ವೇತನದ 12% ರಲ್ಲಿ ಶೇಕಡ 3.67 ಮೊತ್ತವನ್ನು ಇಪಿಎಫ್‌ ಖಾತೆಗೆ ಹಾಕಲಾಗುತ್ತದೆ. ಉಳಿದ ಶೇಕಡ 8.33 ಪಾಲು ನೌಕರರ ಪಿಂಚಣಿ ಯೋಜನೆ ಅಥವಾ ಇಪಿಎಸ್‌ಗೆ ಹೋಗುತ್ತದೆ. ನೌಕರರು ತಮ್ಮ ಸಂಬಳದ ಒಂದು ಭಾಗವನ್ನು ಪ್ರತಿ ತಿಂಗಳು ಉಳಿಸಲು ಮತ್ತು ನಿವೃತ್ತಿಯ ನಂತರ ಅದನ್ನು ಬಳಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: PM Kisan Yojana | ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಈ ಕೆಲಸ ಮಾಡಿದರೆ ಮಾತ್ರ ಹಣ..!

ಇಪಿಎಫ್ (Employees Provident Fund) ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಿರುವ ಸರ್ಕಾರ

ಸರ್ಕಾರವು ನೌಕರರ ಭವಿಷ್ಯ ನಿಧಿ (ಇಪಿಎಫ್) ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಿದೆ. ಲಕ್ಷಗಟ್ಟಲೆ ಉದ್ಯೋಗಿಗಳಿಗೆ ಪ್ರಯೋಜನವಾಗುವ ಪ್ರಸ್ತಾವನೆಯನ್ನು 2025ರ ಬಜೆಟ್‌ನಲ್ಲಿ ಮಂಡಿಸುವ ಸಾಧ್ಯತೆ ಇದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಉಳಿತಾಯ ಯೋಜನೆಯಾಗಿರುವ ಸ್ವಯಂ ಸೇವಾ ಭವಿಷ್ಯ ನಿಧಿ (ವಿಪಿಎಫ್) ಖಾತೆಗಳಿಗೆ ಕೊಡುಗೆ ಮಿತಿಯನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಜೊತೆಗೆ ತೆರಿಗೆ ಮುಕ್ತ ಬಡ್ಡಿಯನ್ನು ಹೆಚ್ಚಿಸುವ ಅವಕಾಶವೂ ಇದೆ. ಇದು ನೌಕರರಿಗೆ ಹೆಚ್ಚು ಹಣ ಉಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: LIC Bima Sakhi Yojana | ಮಾಸಿಕ ₹7,000 ಗಳಿಸಬಹುದಾದ ‘ಬಿಮಾ ಸಖಿ’ ಯೋಜನೆಗೆ ಭರ್ಜರಿ ರೆಸ್ಪಾನ್ಸ್; ಅರ್ಜಿ ಸಲ್ಲಿಕೆ ಹೇಗೆ?

ಆನ್‌ಲೈನ್‌ನಲ್ಲಿ ಇಪಿಎಫ್‌  (Employees Provident Fund) ಖಾತೆಯನ್ನು ಇನ್ನೊಂದಕ್ಕೆ ವರ್ಗಾಯಿಸುವುದು ಹೇಗೆ?

ಉದ್ಯೋಗಿಯ ಯುಎಎನ್‌ ಮತ್ತು ಪಾಸ್‌ವರ್ಡ್‌ ಬಳಸಿ ಇಪಿಎಫ್‌ಒದ ಯುನಿಫೈಡ್ ಮೆಂಬರ್‌ ಪೋರ್ಟಲ್‌ ನಲ್ಲಿ ಲಾಗಿನ್ ಆಗಿ ಒನ್‌ ಮೆಂಬರ್‌- ಒನ್ ಇಪಿಎಫ್‌ ಅಕೌಂಟ್‌ ಆಯ್ಕೆ ಮಾಡಬೇಕು.

ಅಲ್ಲಿ ಈ ಹಿಂದೆ ಮಾಡಿದ ಉದ್ಯೋಗ ಮತ್ತು ಪ್ರಸ್ತುತ ಉದ್ಯೋಗದ ಕುರಿತ ಮಾಹಿತಿ ಮತ್ತು ಪಿಎಫ್‌ ಖಾತೆಯ ಮಾಹಿತಿಯನ್ನು ಪರಿಶೀಲಿಸಿ. ಖಾತೆ ವರ್ಗಾವಣೆಗೆ ಪ್ರಸ್ತುತ ಉದ್ಯೋಗದಾತ ಅಥವಾ ಈ ಹಿಂದಿನ ಉದ್ಯೋಗದಾತರಲ್ಲಿ ಒಬ್ಬರನ್ನು ಅಟೆಸ್ಟ್‌ ಮಾಡಿ. ನಂತರ ಮೊಬೈಲ್‌ ಸಂಖ್ಯೆಗೆ ಬಂದ ಒಟಿಪಿ ದಾಖಲಿಸಿ ಸಬ್‌ಮಿಟ್‌ ಬಟನ್‌ ಒತ್ತಿದರೆ ಖಾತೆ ವರ್ಗಾವಣೆಯಾಗುತ್ತದೆ.

ಇದನ್ನೂ ಓದಿ: Ashraya yojana | ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ವಸತಿ ಸೌಲಭ್ಯ ನೀಡುವ ಆಶ್ರಯ ಯೋಜನೆ ಉದ್ದೇಶ, ಪ್ರಯೋಜನಗಳು

Employees Provident Fund (ಇಪಿಎಫ್) ಖಾತೆ ಮಾಡಿಸುವ ಮುನ್ನ ಗೊತ್ತಿರಲೇಬೇಕಾದ ವಿಷಯಗಳು

ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆಯಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಯಾವುದೇ ನಕಲಿ ಅಥವಾ ತಪ್ಪಾದ ಮಾಹಿತಿ ನೀಡಿದರೆ ಸಮಸ್ಯೆಗೆ ಒಳಗಾಗಬಹುದು. ಇಪಿಎಫ್ ಖಾತೆಯ ಸುರಕ್ಷತೆಗಾಗಿ ಪಾಸ್ ವರ್ಡ್ ಅನ್ನು ನಿಯಮಿತವಾಗಿ ಬದಲಾಯಿಸಬೇಕು. ನೌಕರರ ಭವಿಷ್ಯ ನಿಧಿ ಖಾತೆಯೊಂದಿಗೆ ಯಾವೆಲ್ಲ ತಪ್ಪುಗಳನ್ನು ತಪ್ಪಿಸಬೇಕೆಂದು ವಿಡಿಯೋದಲ್ಲಿ ನೋಡಬಹುದು.
ಕೃಪೆ: ffreedom app – Money (Kannada)

ಇಪಿಎಫ್ಒ (Employees Provident Fund) ಖಾತೆಯನ್ನು ಈ ರೀತಿಯಾಗಿ ಸುಲಭವಾಗಿ ರಚಿಸಬಹುದು

ನೌಕರರ ಭವಿಷ್ಯ ನಿಧಿ (ಇಪಿಎಫ್) ಎಲ್ಲಾ ಉದ್ಯೋಗಿಗಳಿಗೆ ಲಭ್ಯವಿರುವ ನಿವೃತ್ತಿ ಪ್ರಯೋಜನಗಳ ಯೋಜನೆಗಳಲ್ಲಿ ಒಂದಾಗಿದೆ. ನಿವೃತ್ತಿ, ರಾಜೀನಾಮೆ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿಗಳು ಅಥವಾ ಮನೆ ಖರೀದಿಯಂತಹ ಇತರ ಕೆಲವು ಸಂದರ್ಭಗಳಲ್ಲಿ ನೌಕರರು ತಮ್ಮ ಇಪಿಎಫ್ ಹಣ ಪಡೆಯಬಹುದು. ಕೇವಲ 2 ನಿಮಿಷಗಳಲ್ಲಿ ಇಪಿಎಫ್ಒ ಖಾತೆಯನ್ನು ರಚಿಸಲು ವಿಡಿಯೋದಲ್ಲಿ ನೀಡಿರುವ ಹಂತಗಳನ್ನು ಅನುಸರಿಸಬಹುದು.
ಕೃಪೆ: iGuru Kannada

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.