Thyroid : ಥೈರಾಯ್ಡ್ ನಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಒಂದು ಗ್ರಂಥಿ. ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕವಾದ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಉತ್ಪಾದಿಸುವುದೇ ಈ ಗ್ರಂಥಿಯ ಕೆಲಸ.
ಥೈರಾಯ್ಡ್ ಎಂಬುದು ಥೈರಾಕ್ಸಿನ್ ಅಯೋಡಿನ್ನಿಂದ ಕೂಡಿದ ಅಮೈನೋ ಆಮ್ಲ. ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಉತ್ಕರ್ಷಣದ ಪ್ರಮಾಣವನ್ನು ನಿಯಂತ್ರಿಸುವುದಲ್ಲದೆ, ಥೈರಾಯಿಡ್ ಗ್ರಂಥಿ ತೊಂದರೆಗಳಿಂದ ಶಾರೀರಿಕ ವ್ಯವಸ್ಥೆ ಮತ್ತು ಮಾನಸಿಕ ವ್ಯವಸ್ಥೆಗೆ ಕೂಡ ತೊಂದರೆ ಉಂಟಾಗುತ್ತದೆ.
ಇದನ್ನೂ ಓದಿ: Cough and cold | ಕೆಮ್ಮು, ನೆಗಡಿ ಗುಣಪಡಿಸುವ ಪರಿಣಾಮಕಾರಿ ಮನೆಮದ್ದುಗಳು
Thyroid problems ಬರುವುದಕ್ಕೆ ಮೂಲ ಕಾರಣ ಏನು ಗೊತ್ತಾ?
ವಿಶ್ವದ ಜನಸಂಖ್ಯೆಯಲ್ಲಿ ಸುಮಾರು ಶೇ. 7.5 ರಷ್ಟು ಸ್ತ್ರೀಯರು ಇಂದು ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದು, ಪುರುಷರಲ್ಲಿ ಈ ಸಮಸ್ಯೆ 1.5 ಶೇಕಡ ಜನರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದೆ.
ಥೈರಾಯ್ಡ್ ಸಮಸ್ಯೆ ಬರುವುದಕ್ಕೆ ಮೂಲ ಕಾರಣ ಅಸಮರ್ಪಕ ಜೀವನಶೈಲಿ ಹಾಗೂ ಮಾನಸಿಕ ಒತ್ತವಾಗಿದ್ದು, ಥೈರಾಯಿಡ್ ಹಾರ್ಮೋನ್ ಹೆಚ್ಚು ಉತ್ಪತ್ತಿ ಆಗುವುದನ್ನು ಹೈಪರ್ ಥೈರಾಯಿಡಿಸಂ ಎನ್ನುತ್ತಾರೆ. ಇದರ ಪ್ರಧಾನ ಲಕ್ಷಣವೆಂದರೆ ಹಸಿವು ಹೆಚ್ಚಾಗಿ ಕಾಣಿಸಿಕೊಳ್ಳುವುದು ಎನ್ನಲಾಗಿದ್ದು, ಹೆಚ್ಚಾಗಿ ತಿಂದರೂ ಸಹ ತೂಕ ಕಡಿಮೆಯಾಗುತ್ತಾ ಬರುತ್ತದೆ.
ಇದನ್ನೂ ಓದಿ: Rice water | ಅಕ್ಕಿ ತೊಳೆದ ನೀರನ್ನು ಚೆಲ್ಲುವ ಮುನ್ನ ಈ ಉಪಯೋಗಗಳನ್ನು ತಿಳಿದುಕೊಳ್ಳಿ
Thyroid ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು!
ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಎನ್ನುವುದು ಬಹುತೇಕ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದ್ದು, ಪುರುಷರಿಗಿಂತ ಮಹಿಳೆಯರಲ್ಲಿ ಅದರಲ್ಲೂ ಮೂವತ್ತು ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.
ಥೈರಾಯ್ಡ್ ಸಮಸ್ಯೆಯು ಮಹಿಳೆಯರಲ್ಲಿ ಸುಮಾರು 5-6 ಪಟ್ಟು ಹೆಚ್ಚು ಸಾಮಾನ್ಯವಾಗಿದೆ. ಥೈರಾಯ್ಡ್ ತೊಂದರೆ ಇರುವವರಿಗೆ ಆಹಾರ ಪದ್ಧತಿ ಬಹಳ ಮುಖ್ಯ. ಕೆಲವೊಂದು ಆಹಾರಗಳನ್ನು ಸೇವಿಸಲೇಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ವಿಡಿಯೋ ಕೃಪೆ – ವಿಜಯ ಕರ್ನಾಟಕ
Thyroid ಸಮಸ್ಯೆ ಕಡಿಮೆ ಮಾಡಿಕೊಳ್ಳಲು ಈ ಆಹಾರಗಳನ್ನು ಸೇವಿಸಿ!
ಬೆಟ್ಟದ ನೆಲ್ಲಿಕಾಯಿ ನಮ್ಮ ದೇಹದಲ್ಲಿ ಥೈರಾಯ್ಡ್ ಅನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ನೀವೂ ಕೂಡ ಥೈರಾಯ್ಡ್ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದರೆ, ನೀವು ಪ್ರತಿದಿನ ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸಬಹುದು.
ನಿತ್ಯ ಬಾಳೆಹಣ್ಣನ್ನು ಸೇವಿಸಿದರೆ ಈ ಸಮಸ್ಯೆ ನಿಯಂತ್ರಣದಲ್ಲಿರುತ್ತದೆ. ವಿಟಮಿನ್ ಬಿ ಸೇರಿದಂತೆ ಅನೇಕ ಪೋಷಕಾಂಶಗಳು ಬಾಳೆಹಣ್ಣಿನಲ್ಲಿದೆ. ಥೈರಾಯ್ಡ್ ಸಮಸ್ಯೆಯ ನಿವಾರಣೆಗೆ, ನೀವು ನಿಮ್ಮ ಆಹಾರದಲ್ಲಿ ಬಾಳೆಹಣ್ಣು, ಕಿತ್ತಳೆ, ಟೊಮೆಟೊ ಮುಂತಾದ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.
ಇದನ್ನೂ ಓದಿ: Periods : ಪಿರಿಯಡ್ಸ್ ಸರಿಯಾದ ಸಮಯಕ್ಕೆ ಆಗಲು ಈ ಆಹಾರಗಳನ್ನು ಸೇವಿಸಿ
ಈ ಯೋಗಾಸನಗಳನ್ನು ಮಾಡಿದರೆ ಥೈರಾಯ್ಡ್ ಸಮಸ್ಯೆಗೆ ಪರಿಹಾರ ಸಿಗುತ್ತದೆ!
ಸರ್ವಾಂಗಾಸನ ಥೈರಾಯ್ಡ್ ಗ್ರಂಥಿಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಥೈರಾಕ್ಸಿನ್ ಅನ್ನು ನಿಯಂತ್ರಿಸುತ್ತದೆ. ಈ ನಿರ್ದಿಷ್ಟ ಭಂಗಿಯಲ್ಲಿ, ತಲೆಕೆಳಗಾಗಿ ಕೊಂಚ ಹೊತ್ತು ಇರಬೇಕಾದ ಕಾರಣ ರಕ್ತವು ಕಾಲುಗಳಿಂದ ತಲೆ ಪ್ರದೇಶಕ್ಕೆ ಹೆಚ್ಚು ಒತ್ತಡದಿಂದ ಹರಿಯುದರಿಂದ ಥೈರಾಯ್ಡ್ ಪ್ರಭಾವವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಹಲಾಸನದಿಂದ ಕುತ್ತಿಗೆಗೆ ಸಂಕೋಚನ ದೊರಕುತ್ತದೆ. ಅಲ್ಲದೇ ಇದರಿಂದ ಕಿಬ್ಬೊಟ್ಟೆಯ ಮತ್ತು ಥೈರಾಯ್ಡ್ ಗ್ರಂಥಿಗಳನ್ನು ಉತ್ತೇಜಿಸುತ್ತದೆ. ಪರಿಣಾಮವಾಗಿ ಮೆದುಳು ಶಾಂತಗೊಳ್ಳುತ್ತದೆ.