Periods : ಮಹಿಳೆಯ ಅವಧಿ (ಮುಟ್ಟಿನ) ಮಾಸಿಕ ಚಕ್ರದ ನೈಸರ್ಗಿಕ ಭಾಗವಾಗಿದೆ. ಋತುಚಕ್ರವು ಸರಾಸರಿ 28 ದಿನಗಳಿಗಿಂತ ಹೆಚ್ಚು ಅಥವಾ ಕಡಿಮೆ ಇದ್ದರೆ ಅದನ್ನು ಅನಿಯಮಿತವೆಂದು ಪರಿಗಣಿಸಲಾಗುತ್ತದೆ.
ಮುಟ್ಟಿನ ದಿನಗಳು ವ್ಯಕ್ತಿಯಿಂದ ವ್ಯಕ್ತಿಗೆ ವ್ಯಾಪಕವಾಗಿ ಬದಲಾಗಬಹುದು. ಹೆಚ್ಚಿನ ಜನರು ಎರಡರಿಂದ ಏಳು ದಿನಗಳವರೆಗೆ ರಕ್ತಸ್ರಾವವಾಗುತ್ತಾರೆ. ಮುಟ್ಟಿನ ಹರಿವು ಮತ್ತು ಒಟ್ಟಾರೆ ಅವಧಿಗಳಲ್ಲಿ ಸಾಂದರ್ಭಿಕ ಏರಿಳಿತಗಳು ಸಾಮಾನ್ಯವಾಗಿ ಕಾಳಜಿಗೆ ಕಾರಣವಾಗುವುದಿಲ್ಲ.
ಇದನ್ನೂ ಓದಿ: Rainy season : ಮಳೆಗಾಲದಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..
ಆಹಾರ, ವ್ಯಾಯಾಮ ಮತ್ತು ಒತ್ತಡವು ನಿಮ್ಮ ದೇಹದ ಹಾರ್ಮೋನ್ ಸಮತೋಲನವನ್ನು ನಿಯಂತ್ರಿಸುವ ಗ್ರಂಥಿಗಳ ಮೇಲೆ ಪರಿಣಾಮ ಬೀರಬಹುದು, ಅದು ನಿಮ್ಮ ಮಾಸಿಕ ಅವಧಿಗಳ ಮೇಲೆ ಪರಿಣಾಮ ಬೀರುತ್ತದೆ. ಪಿರಿಯಡ್ಸ್ ಸರಿಯಾದ ಸಮಯಕ್ಕೆ ಆಗಲು ಯಾವ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ತಿಳಿಯೋಣ
Periods : ಪಿರಿಯಡ್ಸ್ ಸರಿಯಾಗಿ ಆಗಲು ಸೇವಿಸಬೇಕಾದ ಆಹಾರಗಳು
- ಪಪ್ಪಾಯಿ
- ಕೊತ್ತಂಬರಿ
- ಶುಂಠಿ, ಅಜೈನ್
- ಎಳ್ಳು
- ಲವಂಗ
- ತಾಜಾ ಹಣ್ಣು, ತರಕಾರಿಗಳು
1. ಪಪ್ಪಾಯಿ
ಪಪ್ಪಾಯಿ ಹಣ್ಣಿನಲ್ಲಿರುವ ಸಾರಗಳು ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗುತ್ತವೆ. ಅಲ್ಲದೇ ಇದರಲ್ಲಿ ಕ್ಯಾರೋಟಿನ್ ಹೆಚ್ಚಾಗಿರುವುದರಿ೦ದ ಈಸ್ಟೋಜೆನ್ ಹಾರ್ಮೋನ್ ಅನ್ನು ಹೆಚ್ಚು ಮಾಡಿ ಋತುಚಕ್ರವನ್ನು ವೇಗಗೊಳಿಸುತ್ತದೆ.
2. ಕೊತ್ತಂಬರಿ
ಕೊತ್ತಂಬರಿಯಲ್ಲಿರುವ ಎಪಿಯೋಲ್ ಮತ್ತು ಮೈರಿಸ್ಟಿಸಿನ್ ಋತುಚಕ್ರದ ಸಮಸ್ಯೆಯನ್ನು ನಿವಾರಿಸುತ್ತದೆ. ಕೊತ್ತ೦ಬರಿ ಚಹಾ ಸೇವನೆ ಮಾಡುವುದು ಬೇಗ ಪಿರಿಯಡ್ಸ್ ಆಗಲು ಸಹಕಾರಿ. 1 ಲೋಟ ನೀರಿಗೆ ಒಂದೆರಡು ಚಮಚ ಕೊತ್ತ೦ಬರಿ ಬೀಜ ಹಾಕಿ ಕುದಿಸಿ ಕುಡಿಯುವುದು ಮುಟ್ಟಿನ ಸಮಸ್ಯೆಗೆ ಪರಿಹಾರವಾಗಿದೆ.
ಇದನ್ನೂ ಓದಿ : Cauliflower : ಈ ಸಮಸ್ಯೆ ಇರುವವರು ಹೂಕೋಸು ತಿನ್ನಬಾರದು
3. ಶುಂಠಿ, ಅಜೈನ್
ಶು೦ಠಿ ಚಹಾ ಗರ್ಭಾಶಯದ ಸಂಕೋಚನಕ್ಕೆ ಕಾರಣವಾಗುತ್ತದೆ. ಇದರ ಸೇವನೆ ಮಾಡುವುದರಿಂದ ಸಮಯಕ್ಕೆ ಸರಿಯಾಗಿ ಋತುಮತಿಯಾಗಬಹುದು. ಅಜೈನ್ ಕೂಡ ಬೇಗ ಮುಟ್ಟಾಗಲು ಸಹಾಯ ಮಾಡುತ್ತದೆ. ಅಜೈನ್ ಅನ್ನು ಬೆಲ್ಲದೊಂದಿಗೆ ಸೇವನೆ ಮಾಡಿದರೆ ಹೆಚ್ಚಿನ ಪ್ರಯೋಜನ ಲಭಿಸುತ್ತದೆ.
4. ಎಳ್ಳು
ಎಳ್ಳಿನ ಸೇವನೆ ಮುಟ್ಟಿನ ಚಕ್ರವನ್ನು ವೇಗಗೊಳಿಸಲು ಸಹಕಾರಿ ಎಂಬುದು ಬಹುತೇಕರಿಗೆ ತಿಳಿದಿದ್ದು, ಇದರಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದರಿಂದ ಎಳ್ಳಿನ ಉಂಡೆ ಅಥವಾ ಯಾವುದೇ ಆಹಾರ ಪದಾರ್ಥ ತಯಾರಿಸಿ ನಿಯಮಿತವಾಗಿ ತಿ೦ದರೆ ಮುಟ್ಟು ಸರಿಯಾಗಿ ಆಗುತ್ತದೆ.
5. ಲವಂಗ
ಶುಂಠಿ ಚಹಾದಂತೆಯೇ ಲವಂಗ ಚಹಾ ಸಹ ಮುಟ್ಟಿನ ಸಮಸ್ಯೆ ನಿವಾರಿಸಲು ಸಹಾಯ ಮಾಡಲಿದ್ದು, ಒಂದು ಲೋಟ ನೀರಿಗೆ 4 ಲವಂಗ ಹಾಕಿ ಕುದಿಸಿ ಅದಕ್ಕೆ ಜೇನುತುಪ್ಪ ಹಾಕಿ ಕುಡಿಯುವುದು ಪ್ರಯೋಜನಕಾರಿ.
6.ತಾಜಾ ಹಣ್ಣು, ತರಕಾರಿಗಳು
ಸರಿಯಾದ ಸಮಯಕ್ಕೆ ಮುಟ್ಟಾಗಲು ನೀವು ದೇಹಕ್ಕೆ ಅಗತ್ಯವಾದ ಹಣ್ಣು ಹಾಗೂ ತರಕಾರಿಯನ್ನು ಸೇವಿಸಬೇಕು. ಫಾಸ್ಟ್‌ಫುಡ್, ಕೋಲ್‌ಡ್ರಿಂಕ್ಸ್ ಕಾಫಿ, ಟೀಯನ್ನು ಆದಷ್ಟು ಕಡಿಮೆ ಮಾಡಿ, ತಾಜಾ ಹಣ್ಣು, ತರಕಾರಿ ಸೇವಿಸಿದರೆ ಪಿರಿಯಡ್ಸ್ ಸಮಸ್ಯೆ ಕಡಿಮೆಯಾಗುತ್ತದೆ.